ಸುಪ್ರೀಂ ಕೋರ್ಟ್ ವಕೀಲೆ ಶವ ಪತ್ತೆ; ಆಸ್ತಿಗಾಗಿ ಪತ್ನಿ ಕಥೆ ಮುಗಿಸಿದ ಪತಿ ಅರೆಸ್ಟ್​​!

Noida Lawyer Killed By Husband After She Opposed Sale Of Bungalow
Published on

ನವದೆಹಲಿ: ಸುಪ್ರೀಂ ಕೋರ್ಟ್ ವಕೀಲೆಯ ಕೊಲೆ ಆರೋಪದಲ್ಲಿ ಮಾಜಿ ಭಾರತೀಯ ಕಂದಾಯ ಸೇವೆ ಅಧಿಕಾರಿ ಅಜಯ್ ನಾಥ್ ಎಂಬವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ರೇಣು ಸಿನ್ಹಾ ಮೃತ ಮಹಿಳೆ. ಈಕೆ ಪತಿ ಅಜಯ್ ನಾಥ್  ಬಂಧಿತ ಆರೋಪಿ.  ರೇಣು ಸಿನ್ಹಾ ಸುಪ್ರೀಂ ಕೋರ್ಟ್ ವಕೀಲಯಾಗಿ ಕಾರ್ಯನಿರ್ವಹಿಸುತ್ತಿದ್ದರು.ರೇಣು ಸಿನ್ಹಾ ಯಾವುದೇ ಫೋನ್​ ಕರೆಗಳನ್ನು ಸ್ವೀಕರಿಸದೆ ಇದ್ದರು. ಆತಂಕಗೊಂಡ ಸಹೋದರನ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ತನಿಖೆ ಆರಂಭಿಸಿದ ಪೊಲೀಸರು, ಉತ್ತರ ಪ್ರದೇಶದ ನೋಯ್ಡಾದಲ್ಲಿರುವ ಬಂಗಲೆಯಲ್ಲಿ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ನಾಪತ್ತೆಯಾಗಿದ್ದ ಅಜಯ್ ನಾಥ್​​ನನ್ನು ಅಧಿಕಾರಿಗಳು ಶೋಧ ಕಾರ್ಯಾಚರಣೆ ಆರಂಭಿಸಿದಾಗ ಆರೋಪಿ ನಾಥ್ ಬಂಗಲೆಯ ಸ್ಟೋರ್ ರೂಂನಲ್ಲಿ ಅಡಗಿರುವುದು ಪತ್ತೆಯಾಗಿದೆ. ಆವರಣಕ್ಕೆ ಬೀಗ ಜಡಿದು ಟೆರೇಸ್ ಮೇಲೆ ಆಶ್ರಯ ಪಡೆದಿದ್ದ ಎನ್ನಲಾಗಿದೆ. ನಂತರ, ಅಜಯ್​​ ನಾಥ್ ಅವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.

ವಿಚಾರಣೆಯ ನಂತರ, ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ವಕೀಲೆಯಾಗಿರುವ ಪತ್ನಿಯನ್ನು ಕೊಂದಿರುವುದಾಗಿ ನಾಥ್ ಒಪ್ಪಿಕೊಂಡಿದ್ದಾನೆ.ನಾಥ್ ಅವರ ಬಂಗಲೆಯನ್ನು 4 ಕೋಟಿ ರೂಪಾಯಿಗೆ ಮಾರಾಟ ಮಾಡಲು ಯೋಜಿಸಿದ್ದರು ಮತ್ತು ಅದಕ್ಕಾಗಿ ಮುಂಗಡವನ್ನೂ ಪಡೆದಿದ್ದರು. ಆದರೆ, ಸಿನ್ಹಾ ಈ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಸಿನ್ಹಾ ಅವರು ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿದ್ದರು. ಆದರೆ ಸೂಕ್ತ ಚಿಕಿತ್ಸೆ ನಂತರ ಕ್ಯಾನ್ಸರ್​ನಿಂದ ಗುಣಮುಖರಾಗಿದ್ದರು. 

ಪ್ರಾಥಮಿಕ ತನಿಖೆಗಳು ಸಿನ್ಹಾ ಅವರು ಅತಿಯಾದ ರಕ್ತದ ಸೋರಿಕೆಯಿಂದ ಬಲಿಯಾಗಿರಬಹುದು ಎನ್ನಲಾಗಿದೆ. ಆದರೂ ಆಕೆಯ ಸಾವಿಗೆ ನಿಖರವಾದ ಕಾರಣವನ್ನು ಮರಣೋತ್ತರ ಪರೀಕ್ಷೆಯ ನಂತರ ದೃಢೀಕರಿಸಲಾಗುತ್ತದೆ ಎಂದು ಆಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net