

ಮುಂಬೈ: ರತನ್ ಟಾಟಾ ಅವರ ನಿಧನದ ಬೆನ್ನಲ್ಲೇ ಇದೀಗ ಟಾಟಾ ಟ್ರಸ್ಟ್‌ನ ನೂತನ ಅಧ್ಯಕ್ಷರಾಗಿ ನೋಯೆಲ್ ಟಾಟಾ ಅವರು ನೇಮಕಗೊಂಡಿದ್ದಾರೆ. ಟಾಟಾ ಟ್ರೆಂಟ್‌ನ ಅಧ್ಯಕ್ಷ ಮತ್ತು ಟಾಟಾ ಸ್ಟೀಲ್‌ನ ಉಪಾಧ್ಯಕ್ಷರಾದ ನೋಯೆಲ್ ಅವರನ್ನು ಇದೀಗ ಟಾಟಾ ಟ್ರಸ್ಟ್‌ನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಯಾರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಬೇಕು ಎಂಬ ವಿಚಾರದಲ್ಲಿ ನೋಯೆಲ್ ಟಾಟಾ ಅವರು ಅವಿರೋಧ ಆಯ್ಕೆಯಿಂದ ಈಗ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ.
ಭಾರತದ ಹೆಸರಾಂತ ಕೈಗಾರಿಕೋದ್ಯಮಿ, ಲೋಕೋಪಕಾರಿ ಮತ್ತು ಶ್ವಾನ ಪ್ರೇಮಿ ರತನ್ ಟಾಟಾ (86) ಅವರು ಅ.09 ತಡರಾತ್ರಿ ವಯೋಸಹಜ ಖಾಯಿಲೆಯಿಂದ ಕೊನೆಯುಸಿರೆಳೆದರು. ದೇಶದ ಉದ್ಯಮ ಜಗತ್ತಿಗೆ ಹೊಸ ರೂಪ ತಂದುಕೊಟ್ಟ ಟಾಟಾ (Ratan Tata) ಅವರು ಇನ್ನಿಲ್ಲ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಭಾರತೀಯರು ಕಂಬನಿ ಮಿಡಿದರು. ರತನ್ ಟಾಟಾ ನಂತರ ಮುಂದಿನ ಉತ್ತರಾಧಿಕಾರಿ ಯಾರು? ಎಂಬ ಪ್ರಶ್ನೆ ವ್ಯಾಪಕವಾಗಿ ಚರ್ಚೆಯಾಗಿತ್ತು.
ಉತ್ತರಾಧಿಕಾರಿ ಪಟ್ಟಕ್ಕೆ ನಾಲ್ವರ ಹೆಸರಿನ ಪೈಕಿ ನೋಯೆಲ್ ಟಾಟಾ ಅವರ ಹೆಸರು ಮುಂಚೂಣಿಯಲ್ಲಿತ್ತು. ಆದ್ರೆ, ಈ ಮಧ್ಯೆ ಅವಿರೋಧ ಆಯ್ಕೆಯಲ್ಲಿ ದಿವಗಂತ ರತನ್ ಟಾಟಾ ಅವರ ಉತ್ತರಾಧಿಕಾರಿ ಸ್ಥಾನವನ್ನು ಇದೀಗ ನೋಯೆಲ್ ತುಂಬಿದ್ದಾರೆ.