ರೈಲು ಸಂಚಾರ ಪುನಾರಂಭ ಸದ್ಯಕ್ಕಿಲ್ಲ

page 9 2
Published on

ನವದೆಹಲಿ: ಮೇ 3ರ ನಂತರವೂ ಲಾಕ್​ಡೌನ್ ವಿಸ್ತರಿಸುವ ಬಗ್ಗೆ ಕೇಂದ್ರ ಸರ್ಕಾರ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಷರತ್ತುಬದ್ಧವಾಗಿ ಕೆಲ ಸಡಿಲಿಕೆಗಳಿಗೆ ಅವಕಾಶ ನೀಡಲಾಗುವುದೆಂದು ಮೂಲಗಳು ತಿಳಿಸಿವೆ.

ಮೇ 3ರಿಂದ ರೈಲು, ವಿಮಾನ ಸಂಚಾರಕ್ಕೆ ಅವಕಾಶ ನೀಡುವ ಸಾಧ್ಯತೆಯಿಲ್ಲ. ಆದರೆ ನಗರದೊಳಗೇ ಸಂಚಾರಕ್ಕೆ ಅನುಮತಿ ನೀಡುವ ಸಂಭವವಿದೆ. ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಈಗ ಜೀವನ ಶೈಲಿಯ ಭಾಗವಾಗಿರುವುದರಿಂದ ಮನೆಯಿಂದ ಹೊರ ಹೋಗುವವರು ಮಾಸ್ಕ್ ಧರಿಸುವುದನ್ನು ಸರ್ಕಾರ ಕಡ್ಡಾಯಗೊಳಿಸುವ ಸಾಧ್ಯತೆಯಿದೆ.

ಮದುವೆಗಳು ಹಾಗೂ ಧಾರ್ವಿುಕ ಸಮಾರಂಭಗಳಲ್ಲಿ ಹೆಚ್ಚು ಜನರು ಭಾಗವಹಿಸುವುದಕ್ಕೆ ಅವಕಾಶ ನೀಡಲು ಕೂಡ ಸರ್ಕಾರ ಚಿಂತನೆ ನಡೆಸಿಲ್ಲ. ಜೀವನಾವಶ್ಯಕ ವಸ್ತುಗಳ ಮಾರಾಟದ ಅಂಗಡಿಗಳು ಸಾಮಾಜಿಕ ಅಂತರ ನಿಯಮ ಪಾಲನೆಯೊಂದಿಗೆ ಕಾರ್ಯಾಚರಿಸಬಹುದಾಗಿದೆ.

ಮೇ 3ರವರೆಗೆ ಲಾಕ್​ಡೌನ್ ನಿಯಮಗಳನ್ನು ಸಡಿಲಗೊಳಿಸದಿರಲು ಕರ್ನಾಟಕ, ತಮಿಳುನಾಡು, ತೆಲಂಗಾಣ, ಪಂಜಾಬ್ ಮತ್ತು ದೆಹಲಿ ಈಗಾಗಲೇ ನಿರ್ಧರಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net