ಖಾಸಗಿ ಬಸ್‌ಗಳಿಗೆ ಕೆಂಪಾಪುರದಲ್ಲಿ ನೋ ಸ್ಟಾಪ್

BMTC Electric Bus
Published on

ಬೆಂಗಳೂರು: ಹೆಬ್ಬಾಳದಲ್ಲಿ ಸಂಚಾರ ದಟ್ಟಣೆ ಇರುವುದರಿಂದ ನಗರದಿಂದ ಹೊರ ಹೋಗುವ ಖಾಸಗಿ ಬಸ್‌ಗಳು ಹೆಬ್ಬಾಳ ಕೆಂಪಾಪುರದಲ್ಲಿ (ಎಸ್ಟೀಮ್ ಮಾಲ್ ಎದುರು) ನಿಲ್ಲಿಸದಂತೆ ಟ್ರಾಫಿಕ್ ಪೊಲೀಸರು ಸೂಚಿಸಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಹೋಗುವ ಖಾಸಗಿ ಬಸ್‌ಗಳ ಚಾಲಕರು ಹೆಬ್ಬಾಳದ ಕೆಂಪಾಪುರದಲ್ಲಿ ಪ್ರಯಾಣಿಕರನ್ನು ಇಳಿಸುವುದು ಮತ್ತು ಹತ್ತಿಸಿಕೊಳ್ಳದಂತೆ ಸೂಚಿಸಲಾಗಿದೆ.

ನಿಯಮ ಆಗಸ್ಟ್ 19ರಿಂದ ಜಾರಿಗೆ ಬರಲಿದ್ದು, ಈ ಬಸ್ ನಿಲ್ದಾಣದ ಬದಲಿಗೆ ಯಲಹಂಕ ಬೈಪಾಸ್ ನಂತರದ ಸರ್ವಿಸ್ ರಸ್ತೆಗೆ ಸ್ಥಳಾಂತರ ಮಾಡಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net