

Remuneration:ಸಾಮಾನ್ಯವಾಗಿ ಚಿತ್ರದ ಸ್ಟಾರ್ ನಟ-ನಟಿಯರಿಗೆ ಹಾಗೂ ಸಿನಿಮಾಕ್ಕೆ ವಿಶೇಷ ವ್ಯಕ್ತಿಯನ್ನು ಕರೆ ತಂದ್ರೆ ಅವರಿಗೆ ಅತಿ ಹೆಚ್ಚು ಸಂಭಾವನೆ ಕೊಡುವುದು ಸಾಮಾನ್ಯ. ಯಾಕೆಂದ್ರೆ ಚಿತ್ರದಲ್ಲಿ, ಚಿತ್ರದ ಪೊಸ್ಟರ್ನಲ್ಲಿ ಸೇರಿದಂತೆ ದೊಡ್ಡ ಬಳಗದ ಫ್ಯಾನ್ಸ್ಗಳನ್ನು ಹೊಂದಿರುತ್ತಾರೆ. ಅಲ್ಲದೆ, ಸಿನಿಮಾಗೆ ಹಾಕಿದ ಬಂಡವಾಳ ತರುವಲ್ಲಿ ನಟ-ನಟಿಯರು ಪ್ರಮುಖ ಪಾತ್ರವಹಿಸುತ್ತಾರೆ.
ಹೀಗಾಗಿ, ಸಾಮಾನ್ಯವಾಗಿ ಭಾರತೀಯ ಚಿತ್ರರಂಗದಲ್ಲಿ ನಟ-ನಟಿಯರಿಗೆ ಕೊಟ್ಟಷ್ಟು ಸಂಭಾವನೆ ಬೇರೆ ಯಾರಿಗೂ ಸಿಗುವುದಿಲ್ಲ ಎಂಬ ಮಾತಿದೆ. ಆದರೆ, ಇದೀಗ ಆಗಿಲ್ಲ. ಬಾಲಿವುಡ್ ಸೇರಿದಂತೆ ಸೌತ್ ಸ್ಟಾರ್ ಸೇರಿಂದತೆ ತಮ್ಮ ಒಳ್ಳೆ ಸಿನಿಮಾಗಾಗಿ ಸಿನಿಮಾ ನಿರ್ದೇಶಕರ ಹಿಂದೆ ಬಿದ್ದಿದ್ದಾರೆ.
ಹೌದು, ಪ್ರಭಾವ ಹಾಗೂ ಜನಪ್ರಿಯತೆ ವಿಷಯದಲ್ಲಿ ದೊಡ್ಡ ಸ್ಟಾರ್ಗಳಿಗೂ ಪೈಪೋಟಿ ನೀಡುವ ಸ್ಟಾರ್ ಡೈರೆಕ್ಟರ್ಗಳು ಇದ್ದಾರೆ. ಇವರಲ್ಲಿ ಒಬ್ಬರು ಸಂಭಾವನೆಯ ವಿಷಯದಲ್ಲಿ ಸೂಪರ್‌ಸ್ಟಾರ್‌ಗಳಿಗೂ ಪ್ರತಿಸ್ಪರ್ಧಿಯಾಗುತ್ತಾರೆ. ಅವರ ಅತ್ಯಂತ ಹೆಚ್ಚಿನ ಸಂಭಾವನೆಯೊಂದಿಗೆ ದೊಡ್ಡ ಹೆಸರುಗಳನ್ನು ಸಹ ಧೂಳಿಪಟವಾಗಿಸುತ್ತಾರೆ.
ಸೌತ್ ಇಂಡಸ್ಟ್ರೀಯ ಟಾಲಿವುಡ್ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಭಾರತೀಯ ಚಿತ್ರರಂಗದ ಅತಿಹೆಚ್ಚು ಸಂಭಾವನೆ ಪಡೆಯುವ ಡೈರೆಕ್ಟರ್ ಎಂದು ವರದಿಯಾಗಿದೆ.
ಇಂಟರ್ನೆಟ್ ಮೂವಿ ಡೇಟಾಬೇಸ್ (IMDb) ಪ್ರಕಾರ, ಮುಂಗಡ ಶುಲ್ಕ, ಲಾಭದ ಪಾಲು ಮತ್ತು ಹಕ್ಕುಗಳ ಮಾರಾಟಕ್ಕೆ ಬೋನಸ್ ಸೇರಿದಂತೆ ಎಸ್.ಎಸ್.ರಾಜಮೌಳಿ, ತಾವು ನಿರ್ದೇಶಿಸುವ ಪ್ರತಿ ಚಿತ್ರಕ್ಕೂ ಸುಮಾರು 200 ಕೋಟಿ ರೂ. ಶುಲ್ಕ ವಿಧಿಸುತ್ತಾರೆ. ಒಂದು ಚಿತ್ರ ಹೆಚ್ಚು ಗಳಿಸಿದಷ್ಟೂ ಅವರ ಪಾಲು ಹೆಚ್ಚಾಗಲಿದಿಯಂತೆ. ಆರ್‌ಆರ್‌ಆರ್‌ಗೆ ಇದು ಸುಮಾರು 200 ಕೋಟಿ ರೂ ಆಗಿತ್ತು. ರಾಜಮೌಳಿ ತಮ್ಮ ಬಾಹುಬಲಿ ಸಿನಿಮಾದ ಯಶಸ್ಸಿನಿಂದಾಗಿ ಈ ಮೊತ್ತವನ್ನು ಗಳಿಸಿದ್ದಾರೆ. 200 ಕೋಟಿ ರೂ. ಸಂಭಾವನೆ ರಾಜಮೌಳಿಯನ್ನು ದೇಶದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಚಲನಚಿತ್ರ ಕಲಾವಿದರಲ್ಲಿ ಒಬ್ಬರನ್ನಾಗಿ ಮಾಡಿದೆ ಎಂದು ವರದಿ ಹೇಳಿದೆ.
ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್‌ರಂತಹ ಸೂಪರ್‌ಸ್ಟಾರ್‌ಗಳು ಸಹ ಪ್ರತಿ ಚಿತ್ರಕ್ಕೆ 150-180 ಕೋಟಿ ರೂ. ಗಳಿಸುತ್ತಾರೆ. ಇದು ರಾಜಮೌಳಿ ಗಳಿಸುವುದಕ್ಕಿಂತ ಕಡಿಮೆ ಮೊತ್ತವಾಗಿದೆ. ಹೀಗಾಗಿ, ಯಾವ ಸ್ಟಾರ್ ನಟರಿಗೂ ಕಡಿಮೆ ಇಲ್ಲ ಈ ಸ್ಪೆಷಲ್ ಡೈರೆಕ್ಟರ್ ಎಂದೇ ಹೇಳಬಹುದು.
ಸಿನಿ ಮೂಲಗಳ ಪ್ರಕಾರ, ರಾಜಮೌಳಿ ಮಾಡುವ ಅರ್ಧದಷ್ಟು ಸಂಭಾವನೆಯನ್ನು ಬೇರೆ ಯಾವ ನಿರ್ದೇಶಕರೂ ಪಡೆಯುವುದಿಲ್ಲ. ರಾಜಮೌಳಿ ಬಿಟ್ಟು ದೊಡ್ಡ ಹೆಸರು ಹೊಂದಿರುವ ಸಂದೀಪ್ ರೆಡ್ಡಿ ವಂಗಾ ಮತ್ತು ಪ್ರಶಾಂತ್ ನೀಲ್ ಪ್ರತಿ ಚಿತ್ರಕ್ಕೆ ಸುಮಾರು 90 ಕೋಟಿ ರೂ. ಪಡೆಯುತ್ತಾರೆ. ರಾಜ್‌ಕುಮಾರ್ ಹಿರಾನಿ 80 ಕೋಟಿ ರೂ. ಹಾಗೂ ಸುಕುಮಾರ್, ಸಂಜಯ್ ಲೀಲಾ ಬನ್ಸಾಲಿ, ಲೋಕೇಶ್ ಕನಕರಾಜ್ ಮತ್ತು ಸಿದ್ಧಾರ್ಥ್ ಆನಂದ್ ನಂತರದ ಸ್ಥಾನದಲ್ಲಿದ್ದು, ಪ್ರತಿಯೊಬ್ಬರೂ ಪ್ರತಿ ಚಿತ್ರಕ್ಕೆ 40 ಕೋಟಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಾರೆ ಎಂದು ವರದಿಯಾಗಿದೆ.(ಏಜೆನ್ಸೀಸ್)