ಸರ್ಪ, ಮಂಡಲ ಹಾವುಗಳು ಮನೆ ಬಳಿ ಸುಳಿಯುತ್ತೆ! ಆದ್ರೆ, ಒಳಗೆ ನುಸುಳಲು ಸಾಧ್ಯವೇ ಇಲ್ಲ

ವಿಜಯವಾಣಿ - 2025-02-22T202609.280
Published on

ಕೇರಳ: ರಾಜ್ಯದ ಚಿಂಗವನಂನಲ್ಲಿನ ಈ ಮನೆಗೆ ವನ್ಯಜೀವಿಗಳು ಅತಿಥಿಯಂತೆ ಆಗಾಗ್ಗೆ ಭೇಟಿ ಕೊಡುತ್ತವೆ. ಸರ್ಪ, ಮಂಡಲ ಹಾವು ಸೇರಿದಂತೆ ಇನ್ನಿತರ ಕಾಡು ಪ್ರಾಣಿಗಳು ದಿನನಿತ್ಯವೂ ಮನೆಯ ಬಳಿ ಸಂಚರಿಸುತ್ತವೆ. ಆದರೆ, ಮನೆಯೊಳಗೆ ಪ್ರವೇಶಿಸಲು ಮಾತ್ರ ಸಾಧ್ಯವಿಲ್ಲ. ಅದಕ್ಕೆ ಕಾರಣ, ಮನೆಯಲ್ಲಿ ಸಾಕಿರುವ ಬೆಕ್ಕು ಮತ್ತು ಶ್ವಾನಗಳು.

ತೆಕ್ಕಕ್ಕರೋಟ್‌ನ ಪುಥೆನ್‌ಪಾಲಂ ಬಳಿಯಿರುವ ವಿ.ಎಂ. ಬಿಜುಮೋನ್ ಎಂಬುವವರ ಕುಟುಂಬವನ್ನು ರಕ್ಷಿಸುತ್ತಿರುವುದೇ ಮೂರು ಬೆಕ್ಕು ಮತ್ತು ಎರಡು ಸಾಕು ನಾಯಿಗಳು. ತಮ್ಮ ಮನೆಯಲ್ಲಿ ಸಾಕಿರುವ ಶ್ವಾನಗಳು ಮತ್ತು ಬೆಕ್ಕುಗಳು ಮನೆಯೊಳಗೆ ನುಸಳಲು ಪ್ರಯತ್ನಿಸುವ ವಿಷಕಾರಿ ಹಾವುಗಳ ಮೇಲೆ ದಾಳಿ ಮಾಡುತ್ತವೆ. ಎಂಸಿ ರಸ್ತೆಯ ಸಮೀಪದಲ್ಲಿರುವ ಬಿಜುಮೋನ್ ಅವರ ಮನೆ ಮುಚ್ಚಿದ ಎಲೆಕ್ಟ್ರೋ ಕೆಮಿಕಲ್ಸ್‌ನ ಉತ್ತರ ಭಾಗದಲ್ಲಿದೆ. ಕಂಪನಿಯಿರುವ ಪ್ರದೇಶ ಸೇರಿದಂತೆ ಮನೆಯ ಪಕ್ಕದಲ್ಲಿರುವ 18 ಎಕರೆ ಪ್ರದೇಶವು ದಟ್ಟವಾದ ಅರಣ್ಯದಿಂದ ಕೂಡಿದೆ.

ಸರ್ಪ, ಮಂಡಲ, ಕೊಳಕು ಮಂಡಲ ಸೇರಿದಂತೆ ಅತ್ಯಂತ ವಿಷಕಾರಿ ಹಾವುಗಳು ಪ್ರತಿದಿನ ಮನೆಯತ್ತ ಸುಳಿಯುತ್ತವೆ. ಕಾಡಿನಿಂದ ಇತ್ತ ಮುಖ ಮಾಡುವ ಶತ್ರುವನ್ನು ಎದುರಿಸುವ ಮನೆಯ ಬೆಕ್ಕು ಮತ್ತು ಶ್ವಾನಗಳು ಅವುಗಳನ್ನು ಮನೆಯಿಂದ ದೂರ ಬಿಸಾಡಲು ಹೋರಾಡುತ್ತವೆ. ಹಲವು ಬಾರಿ, ಮನೆಯೊಳಗೆ ವಿವಿಧ ಭಾಗಗಳಿಂದ ನುಸುಳಿ ಒಳಗೆ ಬರುವ ಹಾವುಗಳನ್ನು ಸೆರೆಹಿಡಿಯಲಾಗಿದೆ. ಹತ್ತಿರದ ಮನೆಗಳಲ್ಲಿ ಸರೀಸೃಪಗಳ ಸಮಸ್ಯೆಯೂ ಇದೆ. ಈ ಪ್ರದೇಶದಲ್ಲಿ ಕಾಡುಹಂದಿಗಳು ಸಹ ವ್ಯಾಪಕವಾಗಿವೆ ಎಂದು ಅಲ್ಲಿನ ಸ್ಥಳೀಯರು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net