

Mobile Phones : ಕಳೆದ ಮೂರು ದಶಕಗಳಿಂದ ಸ್ಮಾರ್ಟ್ ಫೋನ್‌ಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಸಂವಹನ ನಡೆಸುವುದರಿಂದ ಹಿಡಿದು, ಚಲನಚಿತ್ರಗಳನ್ನು ವೀಕ್ಷಿಸುವುದು, ಕ್ರಿಕೆಟ್ ನೋಡುವುದು, ಬಿಲ್‌ಗಳನ್ನು ಪಾವತಿಸುವುದು ಮತ್ತು ಅಧಿಕೃತ ದಾಖಲೆಗಳನ್ನು ಇಟ್ಟುಕೊಳ್ಳುವುದರವರೆಗೆ ಎಲ್ಲವನ್ನು ಮೊಬೈಲ್ಗಳಲ್ಲೇ ಮಾಡಬಹುದು.
ನೆಲಕ್ಕೆ ಬಿದ್ದರೆ ಟೈಲ್ಸ್ ಒಡೆಯುವಷ್ಟು ಗಟ್ಟಿಮುಟ್ಟಾದ ಮೊಬೈಲ್ ಫೋನ್‌ಗಳಿಂದ ಹಿಡಿದು, ಕೆಲಸಗಳನ್ನು ತ್ವರಿತವಾಗಿ ಮಾಡಲು ಸಹಾಯ ಮಾಡುವ 5G ಸ್ಮಾರ್ಟ್‌ಫೋನ್‌ಗಳವರೆಗೆ ಎಲ್ಲದರಲ್ಲೂ ಅದರ ಅವಲಂಬನೆ ಉತ್ತುಂಗಕ್ಕೇರಿದೆ. ಎಲ್ಲಾದರೂ ಹೊರಗಡೆ ಹೋದಾಗ ಜೇಬಿನಲ್ಲಿ ಮೊಬೈಲ್ ಫೋನ್ ಇರದ ವ್ಯಕ್ತಿಯೇ ಇಲ್ಲ ಎಂದು ಹೇಳಬಹುದು.
ಆದರೆ, ಜಗತ್ತಿನಲ್ಲಿ ಮೊಬೈಲ್ ಮೇಲಿನ ಇಷ್ಟೊಂದು ಪ್ರೀತಿ ಶೀಘ್ರದಲ್ಲೇ ಅಂತ್ಯಗೊಳ್ಳಲಿದೆ ಎಂದು ವರದಿಯಾಗಿದೆ. ವಿಶ್ವಪ್ರಸಿದ್ಧ ಭವಿಷ್ಯಶಾಸ್ತ್ರಜ್ಞ ಮತ್ತು ಪ್ರಾಧ್ಯಾಪಕ ಅಲೆಕ್ಸಾಂಡರ್ ಮನು ಅವರು ಈ ವಿಚಾರವಾಗಿ 2023ರಲ್ಲೇ ಮಾತನಾಡಿದ್ದರು. ಅದೇನೆಂದರೆ, ಎಲ್ಲ ತಂತ್ರಜ್ಞಾನವು ಮುಂದಿನ ತಂತ್ರಜ್ಞಾನಕ್ಕೆ ಸೇತುವೆಯಾಗಿದೆ. 80ರ ದಶಕದಲ್ಲಿ ಕಂಪ್ಯೂಟರ್‌ಗಳಿಗೆ ಸ್ಥಳಾವಕಾಶ ಕಲ್ಪಿಸಲು ಕಚೇರಿಗಳನ್ನು ರಚನೆ ಮಾಡಬೇಕಿತ್ತು. ಕಾಲ ಬದಲಾದಂತೆ ಅದು ಬದಲಾಯಿತು. ಇಂದು ಕೈಯಲ್ಲಿ ಮೊಬೈಲ್ ಹಿಡಿದುಕೊಳ್ಳುತ್ತಿದ್ದೇವೆ. ಮುಂದೆ ಇದು ಕೂಡ ಬದಲಾಗಲಿದೆ ಎಂದು ಹೇಳಿದ್ದಾರೆ.
ನೋಕಿಯಾ ಸಿಇಒ ಪೆಕ್ಕಾ ಲುಂಡ್‌ಮಾರ್ಕ್ ಕೂಡ 2030ರ ವೇಳೆಗೆ 6G ಆಗಮನದೊಂದಿಗೆ ತಂತ್ರಜ್ಞಾನವು ಮತ್ತೆ ಬದಲಾಗುತ್ತದೆ ಎಂದು ಹೇಳಿದ್ದಾರೆ. ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಕೂಡ ಇದೇ ರೀತಿಯ ಅಭಿಪ್ರಾಯವನ್ನು ಹೊಂದಿದ್ದಾರೆ. ಆದರೆ, ಜುಕರ್‌ಬರ್ಗ್ ಒಂದು ಹೆಜ್ಜೆ ಮುಂದೆ ಹೋಗಿ 'ಫೋನ್‌ಗಳ ನಂತರದ ಮುಖ್ಯ ಪ್ಲಾಟ್ಫಾರ್ಮ್' ಏನೆಂದು ಹೇಳಿದ್ದಾರೆ.
ಸ್ಮಾರ್ಟ್ಗ್ಲಾಸ್ಗಳು, ಸ್ಮಾರ್ಟ್‌ಫೋನ್‌ಗಳ ಸ್ಥಾನವನ್ನು ಬದಲಾಯಿಸುತ್ತವೆ ಎಂದು ಜುಕರ್‌ಬರ್ಗ್ ಹೇಳಿದ್ದಾರೆ. ಇದು ಹೆಚ್ಚು ಸಮಯವನ್ನು ತೆಗೆದುಕೊಳ್ಳುವುದಿಲ್ಲ, 2030ರ ದಶಕದ ವೇಳೆಗೆ ಇದು ಸಾಧ್ಯವಾಗಲಿದೆ. ಸ್ಮಾರ್ಟ್ ಗ್ಲಾಸ್‌ಗಳು ಜನಪ್ರಿಯತೆ ಮತ್ತು ಕ್ರಿಯಾತ್ಮಕತೆಯಲ್ಲಿ ಮುಂದಿರುತ್ತವೆ. ಆ ಹೊತ್ತಿಗೆ ಮೊಬೈಲ್ ಫೋನ್‌ಗಳು ಅಸ್ತಿತ್ವದಲ್ಲಿದ್ದರೂ, ಅವುಗಳನ್ನು ಯಾವಾಗಲೂ ಬಳಸುವುದಿಲ್ಲ ಎಂದು ಜುಕರ್‌ಬರ್ಗ್ ಭವಿಷ್ಯ ನುಡಿದಿದ್ದಾರೆ.
ಸ್ಮಾರ್ಟ್ ಗ್ಲಾಸ್‌ಗಳು ಗ್ರಾಹಕರಿಗೆ ವರ್ಧಿತ ರಿಯಾಲಿಟಿ ಮೂಲಕ ಸಹಾಯ ಮಾಡುತ್ತವೆ. ನಿಮ್ಮ ದಾರಿಯನ್ನು ಕಂಡುಕೊಳ್ಳುವುದು ಮತ್ತು ಹೊಸ ಮಾಹಿತಿಯನ್ನು ಒದಗಿಸುವುದು ಸುಲಭವಾಗುತ್ತದೆ. ಸ್ಮಾರ್ಟ್ ಗ್ಲಾಸ್‌ಗಳು ಅತ್ಯಂತ ಆಕರ್ಷಕ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ ಎನ್ನಲಾಗಿದೆ. (ಏಜೆನ್ಸೀಸ್)