ಅಲಾರಂ ಬೇಕಿಲ್ಲ, ಆತಂಕ ಅಗತ್ಯವಿಲ್ಲ! ಚೀನಾ HMPV ನಿಗೂಢ ವೈರಸ್ ಕುರಿತು ಆರೋಗ್ಯ ಸಂಸ್ಥೆ ಮಾಹಿತಿ

ವಿಜಯವಾಣಿ (26)
Published on

HMPV Outbreak​​: ಈ ಹಿಂದೆ ಚೀನಾದಲ್ಲಿ ಜನ್ಮ ತಾಳಿದ್ದ ಕೊರೊನಾ ವೈರಸ್​ ಮಹಾಮಾರಿ ಇಡೀ ಜಗತ್ತನ್ನು ಆವರಿಸಿ, ಲಾಕ್​ಡೌನ್ ಪರಿಸ್ಥಿತಿಗೆ ದೂಡಿತ್ತು. ವೈರಲ್ ಸೋಂಕಿಗೆ ಲೆಕ್ಕವಿಲ್ಲದಷ್ಟು ಜನ ಜೀವವನ್ನು ಕಳೆದುಕೊಂಡರು. ಅಂದು ಜನರನ್ನು ಕಾಡಿದ್ದ ಕೋವಿಡ್​ ಈಗ ಐದು ವರ್ಷಗಳ ನಂತರ ಮತ್ತೊಂದು ರೂಪದಲ್ಲಿ ಚೀನಾದಲ್ಲಿ ಪತ್ತೆಯಾಗಿರುವುದು ಸದ್ಯ ಜಗತ್ತನ್ನು ಭಾರೀ ಆತಂಕಕ್ಕೆ ದೂಡಿದೆ.

ಭಯ ಪಡುವ ಅಗತ್ಯವಿಲ್ಲ

ಕೋವಿಡ್​ನ ರೀತಿಯಲ್ಲಿ ಪತ್ತೆಯಾಗಿರುವ ಈ ವೈರಸ್‌ನ ಹೆಸರು ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV) ಎಂದು ಹೇಳಲಾಗಿದೆ. ಈ ಖಾಯಿಲೆ ಥೇಟ್​ ಕೋವಿಡ್​ನಷ್ಟೇ ಮಾರಕ ಎನ್ನಲಾಗಿದ್ದು, ಈಗಾಗಲೇ ಹಲವರು ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ ಹಾಗೂ ಚೀನಾದ ಆಸ್ಪತ್ರೆಗಳಲ್ಲಿ ಹಾಸಿಗೆಯ ಸಿಗದಷ್ಟು ರೋಗಿಗಳು ಆವರಿಸಿಕೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಇದು ಇತರೆ ದೇಶಗಳನ್ನು ಸೋಂಕಿನ ವಿರುದ್ಧ ಹೋರಾಡುವಂತೆ ಅಲರ್ಟ್​ ಮಾಡಿದೆ. ಸದ್ಯ ಈ ಕುರಿತು ಭಾರತೀಯ ಆರೋಗ್ಯ ಸಂಸ್ಥೆ ಮಾಹಿತಿ ಹಂಚಿಕೊಂಡಿದ್ದು, ಯಾರೂ ಸಹ ಆತಂಕ, ಭಯ ಪಡುವ ಅಗತ್ಯವಿಲ್ಲ ಎಂದು ತಿಳಿಸಿದೆ.

ಅಲಾರಂ ಬೇಕಿಲ್ಲ

"ಎಚ್ಚರಿಕೆಯ ಅಗತ್ಯವಿಲ್ಲ, ಅಲಾರಂ ಬೇಕಿಲ್ಲ. ಚೀನಾದಲ್ಲಿ HMPV ನಿಗೂಢ ವೈರಸ್​ ಶೀತವನ್ನು ಉಂಟುಮಾಡುವ ಇತರೆ ಉಸಿರಾಟದ ವೈರಸ್‌ನಂತೆ. ಇದು ಶೀತ-ಕೆಮ್ಮು ರೋಗ ಲಕ್ಷಣಗಳನ್ನು ತೋರಿಸುತ್ತದೆ. ಇದಕ್ಕೆ ತೀರ ಭಯ ಪಡುವ ಅಗತ್ಯವಿಲ್ಲ" ಎಂದು ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ (DGHS) ಡಾ. ಅತುಲ್ ಗೋಯೆಲ್ ತಿಳಿಸಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯದ ಅಡಿಯಲ್ಲಿ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (NCDC), ಅಂತಾರಾಷ್ಟ್ರೀಯ ಏಜೆನ್ಸಿಗಳೊಂದಿಗೆ ಸಂಪರ್ಕದಲ್ಲಿದೆ. ನಾವು ಅಲ್ಲಿನ ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತೇವೆ. ಮಾಹಿತಿಯನ್ನು ಆಗಾಗ್ಗೆ ಅಪ್ಡೇಟ್​ ಮಾಡುತ್ತಿರುತ್ತೇವೆ ಮತ್ತು ಅದಕ್ಕೆ ಅನುಗುಣವಾಗಿ ನವೀಕರಿಸುತ್ತೇವೆ ಎಂದು ಮೂಲಗಳು ಎಎನ್​ಐಗೆ ಮಾಹಿತಿ ಹಂಚಿಕೊಂಡಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net