ಈ ದೇಶದಲ್ಲಿ ವಕ್ಫ್ ಬೋರ್ಡ್ ಅವಶ್ಯಕತೆಯೇ ಇಲ್ಲ: ನಾರಾಯಣಸಾ ಭಾಂಡಗೆ | Waqf Board

Waqf Board
Published on

ಬಾಗಲಕೋಟೆ: ಇಂದು ಜಿಲ್ಲೆಯಲ್ಲಿ ಮಾತನಾಡಿದ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ದೇಶವ್ಯಾಪಿ ವಕ್ಫ್ ಬೋರ್ಡ್ ಇದು ನಮ್ಮ ಆಸ್ತಿ ಅಂತ ನೋಟಿಸ್ ಕೊಡಲಾಗ್ತಿದೆ. ಹೀಗಾಗಿ ಈ ಬೋರ್ಡ್ (Waqf Board) ಮೊದಲು ರದ್ದಾಗಬೇಕು. ಇದರಲ್ಲಿ ತಿದ್ದುಪಡಿ ಅಲ್ಲ, ನಮ್ಮ ದೃಷ್ಟಿಯಲ್ಲಿ ಸಂಪೂರ್ಣ ರದ್ದಾಗಬೇಕು ಎಂದು ಒತ್ತಾಯಿಸಿದರು.

"ಈ ದೇಶದಲ್ಲಿ ವಕ್ಫ್ ಬೋರ್ಡ್ ಅವಶ್ಯಕತೆಯೇ ಇಲ್ಲ. ಅವರಿಗೆ ವಿಶೇಷವಾದ ಸವಲತ್ತು ಯಾಕೆ? ಈಗ ರೈತರ ಹೊಲಗಳಿಗೆ ಪ್ರಾರಂಭ ಆಗಿದೆ. ಅಜ್ಜ-ಮುತ್ತಜ್ಜನ ಕಾಲದಿಂದ ಇರುವ ಜಮೀನುಗಳನ್ನು ಇದು ವಕ್ಫ್ ಬೋರ್ಡ್ ಆಸ್ತಿ ಅಂತ ಹೆಂಗೆ ಹೇಳ್ತಾರೆ ಅವರು? ಸಚಿವ ಜಮೀರ್ ಅಹ್ಮದ್ ವಿಜಯಪುರಕ್ಕೆ ಬಂದು ಹೋದ ಮೇಲೆ ಇದು ಚಾಲು ಆಗಿದೆ" ಎಂದು ಹೇಳಿದರು.

"ಇದು ಅವನದ್ದೇ ಉಪಾದ್ಯಾಪಿತನ, ಅತ್ಯಂತ ಕೋಮುವಾದಿ ಅಂದ್ರೆ ಜಮೀರ್ ಅಹ್ಮದ್. ಅವನ ಭಾಷೆ ನೋಡ್ರಿ, ಅವನು ಮಾತನಾಡೋದು ನೋಡ್ರಿ, ಆತ ಯಾವಾಗಲು ಸರಳ ಭಾಷೆ ಮಾತನಾಡವುದಿಲ್ಲ. ನಾಲಿಗೆ ಬಿಗಿ ಹಿಡಿದು ಹಿಂದೂಗಳ ಮೇಲೆ ಕೆಂಡಕಾರುವ ಮಾತುಗಳನ್ನು ಆಡುತ್ತಾನೆ. ಇವನನ್ನು ಕಾಂಗ್ರೆಸ್​​ನವರು ನಿಯಂತ್ರಣ ಮಾಡಬೇಕೋ, ಮಾಡಬಾರದೋ? ವಕ್ಫ್ ಬೋರ್ಡ ಯಾರದ್ದು, ಅದು ಯಾವಾಗಿನಿಂದ ಚಾಲು ಆಗಿದ್ದು?" ಎಂದು ಕಿಡಿಯಾಗಿ ಪ್ರಶ್ನಿಸಿದರು.

"ವಿಶೇಷವಾದ ಸೌಲಭ್ಯ ಕೊಟ್ರು, ಈಗ ಎಲ್ಲಿ ಹೋದರೂ ನಮ್ಮದೇ ಇದು ಜಾಗ ಅಂತಾರೆ. ನೋಟಿಸ್ ಕೊಟ್ಟು ಇದು ವಕ್ಫ್​ಗೆ ಸಂಬಂಧಪಟ್ಟಿದ್ದು, 20 ದಿನದಲ್ಲಿ ಖಾಲಿ ಮಾಡಬೇಕು ಎಂದು ಹೇಳ್ತಾರೆ. ಇವರೇನು ನ್ಯಾಯಲಯವೇ? ಯಾರು ಇವರು? ಇದಕ್ಕೆ ಬೆಂಬಲ ಕೊಡೋ ಕೆಲವು ನಾಲಾಯಕ್​ ಹಿಂದೂಗಳು ಕೂಡ ಇದರಲ್ಲಿ ಸೇರಿದ್ದಾರೆ. ಇಲ್ಲಿ ವಕ್ಫ್ ಬೋರ್ಡ್ ತಿದ್ದುಪಡಿ ಅಗತ್ಯವಿಲ್ಲ ಬದಲಿಗೆ ರದ್ದಾಗಬೇಕು" ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net