50 ರೂ. ನೋಟಿನಲ್ಲಿ ಅಡಗಿತ್ತು ಅಳಿಯನ ಕಣ್ಣೀರಿನ ಕಥೆ! ದೇವರ ಹುಂಡಿಗೆ ಹಾಕುವ ಮುನ್ನ ಆತ ಬರೆದಿದ್ದಿಷ್ಟು | 50 Rs Note

50 rs note
Published on

ಬೆಂಗಳೂರು: ಸಾಮಾಜಿಕ ಜಾಲತಾಣ ಅಂದ್ರೆ ಮುಗಿಯಿತು. ಹೆಚ್ಚೇನು ಹೇಳಬೇಕಿಲ್ಲ, ವಿವರಿಸಬೇಕಿಲ್ಲ. ಸಿಂಪಲ್ ಆಗಿ ಹೇಳಬೇಕೆಂದರೆ ಅದೊಂದು ಮಾಯ ಜಗತ್ತು. ಯಾರ ವಿಚಾರ, ಯಾವ ವಿಷಯ, ಯಾವಾಗ ವೈರಲ್ ಆಗುತ್ತದೆ? ಸುದ್ದಿಯಾಗಿ ಸದ್ದು ಮಾಡುತ್ತದೆ ಎಂಬುದನ್ನು ಊಹಿಸುವುದು ಕಷ್ಟಸಾಧ್ಯ. ಹಾಗೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಎಂತಹದ್ದೇ ಘಟನೆ ನಡೆದರು ಅದು ಒಂದು ಬಾರಿ ಸಾಮಾಜಿಕ ಜಾಲತಾಣದ ಯಾವುದಾದರೂ ಖಾತೆಯಲ್ಲಿ ಹಂಚಿಕೆಯಾದರೆ ಸಾಕು, ಕ್ಷಣಮಾತ್ರದಲ್ಲಿ ವೈರಲ್ ಪಟ್ಟಿಗೆ ಸೇರ್ಪಡೆಯಾಗುತ್ತದೆ. ಸದ್ಯ ಮೇಲ್ಕಂಡ 50 ರೂ. ನೋಟು (50 Rs Note) ಕೂಡ ಇದೇ ಸಾಲಿಗೆ ಸೇರಿಕೊಂಡಿದೆ.

ಜಾಲತಾಣಗಳಲ್ಲಿ ಕಣ್ಣು ಮುಚ್ಚಿ, ಕಣ್ಣು ತರೆಯುವಷ್ಟರಲ್ಲಿ ಒಂದು ಫೋಟೋ ಅಥವಾ ವಿಡಿಯೋ ವೈರಲ್ ಆಗಿ ಅಧಿಕ ಸಂಖ್ಯೆಯ ಜನರ ಅಭಿಪ್ರಾಯವನ್ನು ಗಳಿಸಿರುತ್ತದೆ. ಅದೇ ರೀತಿಯಲ್ಲಿ ಇಲ್ಲೊಬ್ಬ ವ್ಯಕ್ತಿ ತನ್ನ ಅತ್ತೆ ಕೊಡುತ್ತಿದ್ದ ಕಷ್ಟವನ್ನು ತಾಳಲಾರದೆ, ಆಕೆಯ ಸಾವನ್ನು ಬಯಸಿ, ದೇವರ ಹುಂಡಿಗೆ 50 ರೂ. ಹಾಕುವ ಮೂಲಕ ವಿಭಿನ್ನವಾಗಿ ಬೇಡಿಕೊಂಡಿದ್ದಾನೆ. ಸದ್ಯ ಇದೊಂದು ಹಾಸ್ಯಸ್ಪದ ರೀತಿಯಲ್ಲಿ ಕಂಡುಬಂದಿರುವುದು ನಿಜವೇ ಸರಿ.

50 rs note

ಉಲ್ಟಾ ಕೇಸ್

ಸಾಮಾನ್ಯವಾಗಿ ಗಂಡನ ಮನೆಗೆ ಹೋದ ಸೊಸೆಗೆ ಅತ್ತೆ ಕಾಟ ಹೆಚ್ಚಾಗಿರುತ್ತದೆ ಅಥವಾ ಅತ್ತೆ ಬಹಳ ಹಿಂಸೆ ನೀಡುತ್ತಾರೆ ಎಂಬುದನ್ನು ನಾವೆಲ್ಲಾ ಅನೇಕ ಬಾರಿ ಸುದ್ದಿಪತ್ರಿಕೆ, ಮಾಧ್ಯಮಗಳಲ್ಲಿ ಕೇಳಿರುತ್ತೇವೆ. ಅಂತಹ ಘಟನೆಗಳ ನಿದರ್ಶನಗಳು ಆಗಾಗ್ಗೆ ನಮ್ಮ ಕಣ್ಣ ಮುಂದೆಯೇ ನಡೆಯುತ್ತಿರುತ್ತವೆ. ಆದರೆ, ಇದು ಸ್ವಲ್ಪ ಉಲ್ಟಾ ಕೇಸ್​ ಎಂದೇ ಹೇಳಬಹುದು. ಈ ವ್ಯಕ್ತಿ ತನ್ನ ಹೆಂಡತಿಯ ತಾಯಿ ಕೊಡುವ ಕಾಟಕ್ಕೆ ಬೇಸತ್ತು, ದೇವರ ಮೊರೆ ಹೋಗಿದ್ದಾನೆ. ಇದು ಒಂದು ರೀತಿ ವಿಚಿತ್ರ ಅನಿಸೋದರಲ್ಲಿ ಅನುಮಾನವೇ ಬೇಡ.

50 ರೂ. ಹಸಿರು ನೋಟಿನ ಮೇಲೆ..

ಅಸಲಿಗೆ ತನ್ನ ಹೆಂಡತಿಯ ತಾಯಿ ಕೊಡುತ್ತಿದ್ದ ಕಾಟಕ್ಕೆ ಬೇಸತ್ತ ಈ ಅನಾಮಧೇಯ ವ್ಯಕ್ತಿ 50 ರೂ. ಹಸಿರು ನೋಟಿನ ಮೇಲೆ “ನಮ್ಮ ಅತ್ತೆ ಬೇಗ ಸಾಯಬೇಕು ಸ್ವಾಮಿ” ಎಂದು ಬರೆದು, ದೇವರ ಹುಂಡಿಯಲ್ಲಿ ಹಾಕಿದ್ದಾನೆ. ಇದು ಮೇಲ್ನೋಟಕ್ಕೆ ಕೆಲವರಿಗೆ ಹಾಸ್ಯಸ್ಪದವಾಗಿ ಕಂಡುಬಂದಿದ್ದೇ ಆದರೂ ಆತನ ಕಷ್ಟ ನಿಜವೂ ಇರಬಹುದು ಎಂದು ಕೆಲವರು ಭಾವಿಸಿದ್ದಾರೆ. ಸದ್ಯ ಇದರ ಫೋಟೋ ನೆಟ್ಟಿಗರ ಗಮನಸೆಳೆದಿದ್ದು, ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net