ಬಿಹಾರ ಸಂಪುಟದಲ್ಲಿ ಮುಸ್ಲಿಂ ಪ್ರಾತಿನಿಧ್ಯವಿಲ್ಲ್ಲ

nitish kumar oath taking
Published on

ಪಟನಾ: ಸ್ವಾತಂತ್ರ್ಯ ನಂತರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಹಾರದ ಸಚಿವ ಸಂಪುಟದಲ್ಲಿ ಮುಸ್ಲಿಂ ಸಮುದಾಯದ ಪ್ರಾತಿನಿಧ್ಯ ಇಲ್ಲ!

ಬಿಹಾರದ ಮೊದಲ ಸಿಎಂ ಶ್ರೀಕೃಷ್ಣ ಸಿನ್ಹಾರ ಸಚಿವ ಸಂಪುಟದಿಂದ ಹಿಡಿದು ನಿತೀಶ್ ಕುಮಾರ್ ನೇತೃತ್ವದ ಕಳೆದ ಸರ್ಕಾರದವರೆಗೂ ಸಂಪುಟದಲ್ಲಿ ಮುಸ್ಲಿಂ ಸಮುದಾಯಕ್ಕೆ ಕನಿಷ್ಠ ಒಂದು ಸ್ಥಾನ ನೀಡಲಾಗಿತ್ತು. ಕಳೆದ ಸರ್ಕಾರದಲ್ಲಿ ಜೆಡಿಯುನ ಖುರ್ಷಿದ್ ಅಲಿಯಾಸ್ ಫಿರೋಜ್ ಅಹ್ಮದ್ ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾಗಿದ್ದರು. ಖುರ್ಷಿದ್ ಈ ಸಾರಿ ಸಿಕ್ತಾ ಕ್ಷೇತ್ರದಲ್ಲಿ ಪರಭಾವಗೊಂಡಿದ್ದಾರೆ.

17ನೇ ವಿಧಾನಸಭೆಗೆ ಎನ್​ಡಿಎಯಿಂದ ಯಾವುದೇ ಮುಸ್ಲಿಂ ಅಭ್ಯರ್ಥಿ ಗೆದ್ದಿಲ್ಲ. 15 ವರ್ಷಗಳಿಂದ ನಿತೀಶ್ ಮುಸ್ಲಿಮರಿಗೆ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಆದರೆ, ಈ ಬಾರಿ ಸಮುದಾಯದಿಂದ ಸ್ಪರ್ಧಿಸಿದ್ದ 11 ಮಂದಿ ಪೈಕಿ ಒಬ್ಬರೂ ಗೆದ್ದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net