More

    ರಾಜ್ಯ ಉಸ್ತುವಾರಿ ಪದಾಧಿಕಾರಿಗಳ ಜತೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಮೊದಲ ಸಭೆ ಗುರುವಾರ

    ನವದೆಹಲಿ: ವಿವಿಧ ರಾಜ್ಯ ಘಟಕಗಳ ಉಸ್ತುವಾರಿಯನ್ನು ಕಳೆದ ವಾರ ವಹಿಸಿಕೊಂಡ ನೂತನ ಪದಾಧಿಕಾರಿಗಳ ಜತೆಗಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಮೊದಲ ಸಭೆ ಗುರುವಾರ ನಡೆಯಲಿದೆ. ಮುಂದಿನ ವರ್ಷ ಪೂರ್ವಾರ್ಧದಲ್ಲಿ ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಕಾರಣ ಈ ಸಭೆ ಮಹತ್ವದ್ದೆನಿಸಿದೆ.

    ಜೆಪಿ ನಡ್ಡಾ ಅವರು ಕಳೆದವಾರ ಪಕ್ಷದ ವಿವಿಧ ರಾಷ್ಟ್ರೀಯ ಪದಾಧಿಕಾರಿಗಳನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಉಸ್ತುವಾರಿಗಳನ್ನಾಗಿ ಘೋಷಿಸಿದ್ದರು. ಬಹುತೇಕ ಹೊಸ ಮುಖಗಳು ಪಟ್ಟಿಯಲ್ಲಿದ್ದು, ಪಕ್ಷ ಸಂಘಟನೆಯ ವಿಚಾರದಲ್ಲಿ ಎಲ್ಲರಿಗೂ ಹೊಸ ಸವಾಲು ಎದುರಾಗಿದೆ. ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ, ತಮಿಳುನಾಡು ಮತ್ತು ಪುದುಚೇರಿಗಳಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಇದಕ್ಕೆ ಪಕ್ಷ ಸಂಘಟನಾ ಮಟ್ಟದಲ್ಲಿ ಹೇಗೆ ತಯಾರಿ ನಡೆಸಬೇಕೆಂಬ ವಿಚಾರವೂ ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ.

    ಇದನ್ನೂ ಓದಿ: ಡಿ.5ರಂದು ಕರ್ನಾಟಕ ಬಂದ್​ಗೆ ಕರೆ: ಮುಖ್ಯಮಂತ್ರಿ ಏನೆಂದ್ರು?

    ಪಶ್ಚಿಮ ಬಂಗಾಳ ಚುನಾವಣೆಯನ್ನು ಆದ್ಯತೆಯ ಮೇರೆಗೆ ಪರಿಗಣಿಸಿದ್ದು, ಅಲ್ಲಿ ಆಡಳಿತ ಚುಕ್ಕಾಣಿ ಹಿಡಿಯುವ ನಿಟ್ಟಿನಲ್ಲಿ ಹೆಚ್ಚಿನ ಗಮನಕೇಂದ್ರೀಕರಿಸಿದೆ. ಕಳೆದ ವರ್ಷ ಲೋಕಸಭಾ ಚುನಾವಣೆ ಸಂದರ್ಭದಲ್ಲೇ ಆಡಳಿತಾರೂಢ ತೃಣಮೂಲ ಕಾಂಗ್ರೆಸ್​ಗೆ ಬಿಜೆಪಿ ನೇರ ಸವಾಲು ಒಡ್ಡತೊಡಗಿದೆ. ಅಸ್ಸಾಂನಲ್ಲಿ ಪಕ್ಷವೇ ಅಧಿಕಾರದಲ್ಲಿರುವ ಕಾರಣ ಹೆಚ್ಚಿನ ಪ್ರಯತ್ನ ಬೇಕಾಗಿಲ್ಲ ಎಂಬುದು ಸದ್ಯದ ಲೆಕ್ಕಾಚಾರ. ಇದೇ ರೀತಿ, ತಮಿಳುನಾಡಿನಲ್ಲಿ ಆಡಳಿತಾರೂಢ ಎಐಎಡಿಎಂಕೆ ಮತ್ತು ಡಿಎಂಕೆ ಪಕ್ಷಗಳ ಪ್ರಾಬಲ್ಯದ ನಡುವೆ ತಮ್ಮ ನೆಲೆ ಕಂಡುಕೊಳ್ಳಲು ಬಿಜೆಪಿ ನಾಯಕರು ಪ್ರಯತ್ನಿಸಿದ್ದಾರೆ. ಕೇರಳದಲ್ಲೂ ಇದೇ ಸ್ಥಿತಿ ಇದ್ದು, ಹೆಚ್ಚಿನ ಪ್ರಯತ್ನ ನಡೆಸಲು ಪಕ್ಷದ ನಾಯಕತ್ವ ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)

    ಬೃಹತ್ ಪ್ರಮಾಣದ ನಕಲಿ ನೋಟು – ನಾಲ್ವರ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts