More

    ಲೋಕ ಸಮರ 2024: ಬಿಜೆಪಿ ಪ್ರಣಾಳಿಕೆ ಬಿಡುಗಡೆ, ಮಹಿಳೆಯರು, ಬಡವರು, ಯುವಕರ ಏಳಿಗೆಗೆ ಒತ್ತು

    ನವದೆಹಲಿ: ಪ್ರಧಾನಿ ಮೋದಿ ನೇತೃತ್ವದಲ್ಲಿ ಮೂರನೇ ಅವಧಿಗೆ ಕೇಂದ್ರದಲ್ಲಿ ಮತ್ತೆ ಅಧಿಕಾರದ ಗದ್ದುಗೆ ಏರಬೇಕೆಂಬ ಗುರಿಯೊಂದಿಗೆ ಲೋಕಸಭಾ ಚುನಾವಣಾ ಕಣಕ್ಕೆ ಇಳಿದಿರುವ ಆಡಳಿತಾರೂಢ ಬಿಜೆಪಿ, ಇಂದು ತನ್ನ ಸಂಕಲ್ಪ ಪತ್ರ ಅಥವಾ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ತನ್ನ ಪ್ರಣಾಳಿಕೆಯಲ್ಲಿ ಮಹಿಳೆಯರು, ರೈತರು, ಬಡವರು ಮತ್ತು ಯುವಕರ ಉನ್ನತಿಯನ್ನು ಬಿಜೆಪಿ ಕೇಂದ್ರೀಕರಿಸಿದೆ.

    ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಬಿಜೆಪಿಯ ಪ್ರಧಾನ ಕಚೇರಿಯಲ್ಲಿ ಪ್ರಧಾನಿ ಮೋದಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಈ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್​ ಷಾ ಮತ್ತು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕೇಂದ್ರದ ಯೋಜನೆಗಳ ಫಲಾನುಭವಿಗಳಿಗೆ ಪ್ರಧಾನಿ ಮೋದಿ ಪ್ರಣಾಳಿಕೆಯನ್ನು ನೀಡಿದರು. ಮೊದಲ ಪ್ರಣಾಳಿಕೆ ಪುಸ್ತಕವನ್ನು ರೈತನಿಗೆ ನೀಡಲಾಯಿತು.

    ಬಿಜೆಪಿ ಪ್ರಣಾಳಿಕೆಗೆ ಮೋದಿಯವರ ಗ್ಯಾರಂಟಿ 2024 ಎಂದು ಕರೆಯಲಾಗಿದೆ. ಇದು 14 ಭರವಸೆಗಳನ್ನು ಒಳಗೊಂಡಿದೆ. ಅವುಗಳಲ್ಲಿ ಮಹಿಳಾ ಸಬಲೀಕರಣ, ಯುವಕರು ಮತ್ತು ಬಡವರ ಉನ್ನತಿಗೆ ಗಮನಹರಿಸುತ್ತದೆ. ಅಂದರೆ, ಪ್ರಣಾಳಿಕೆಯು GYAN ಅನ್ನು ಕೇಂದ್ರೀಕರಿಸುತ್ತದೆ. ಇದು ‘ಗರೀಬ್’ (ಬಡವರು), ಯುವ (ಯುವಕರು), ಅನ್ನದಾತ (ರೈತರು) ಮತ್ತು ನಾರಿ (ಮಹಿಳೆಯರು) ಯರನ್ನು ಒಳಗೊಂಡ ಯೋಜನೆಗಳಾಗಿವೆ. ಇದು ಭಾರತವನ್ನು ಸಮೃದ್ಧವಾಗಿಸಲು, ಅದರ ಅಂತಾರಾಷ್ಟ್ರೀಯ ಸಂಬಂಧಗಳನ್ನು ಬಲಪಡಿಸಲು ಮತ್ತು ದೇಶದ ಪರಂಪರೆಯ ಅಭಿವೃದ್ಧಿಯನ್ನು ಉತ್ತೇಜಿಸಲು ಪ್ರಣಾಳಿಕೆ ಕೇಂದ್ರೀಕರಿಸುತ್ತದೆ.

    ಈ ಸಂದರ್ಭದಲ್ಲಿ ಮಾತನಾಡಿದ ಜೆಪಿ ನಡ್ಡಾ, ಇಂದು ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆ, ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇವೆ. ಅಂಬೇಡ್ಕರ್​ ಅವರು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ್ದು ನಮಗೆಲ್ಲರಿಗೂ ತಿಳಿದಿದೆ. ಬಿಜೆಪಿ ಯಾವಾಗಲೂ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತದೆ ಎಂದರು.

    60,000 ಹೊಸ ಹಳ್ಳಿಗಳನ್ನು ಪಕ್ಕಾ ರಸ್ತೆಗಳೊಂದಿಗೆ ಸಂಪರ್ಕಿಸುವ ಕೆಲಸ ಮಾಡಲಾಗಿದೆ. ಸರ್ವಋತು ರಸ್ತೆಗಳನ್ನು ನಿರ್ಮಿಸಲಾಗಿದೆ. ಹಳ್ಳಿಗಳು ಸಬಲೀಕರಣಗೊಳ್ಳುತ್ತಿವೆ ಮತ್ತು ಆಪ್ಟಿಕಲ್ ಫೈಬರ್ ಸಹ ಹಳ್ಳಿಗಳನ್ನು ತಲುಪುತ್ತದೆ ಎಂದು ನಾವು ಎಂದಿಗೂ ಊಹಿಸಿರಲಿಲ್ಲ. ಆದರೆ ಇಂದು ನಿಮ್ಮ (ಮೋದಿ) ನಾಯಕತ್ವದಲ್ಲಿ 1.2 ಲಕ್ಷ ಪಂಚಾಯತ್‌ಗಳನ್ನು ಆಪ್ಟಿಕಲ್ ಫೈಬರ್‌ನೊಂದಿಗೆ ಜೋಡಿಸಲಾಗಿದೆ ಮತ್ತು ಇಂಟರ್ನೆಟ್ ಸೌಲಭ್ಯದೊಂದಿಗೆ ಸಂಪರ್ಕಗೊಂಡಿದೆ ಎಂಬುದನ್ನು ಕೇಳಿ ನನಗೆ ಸಂತೋಷವಾಗಿದೆ. ಭಾರತದ ಜನಸಂಖ್ಯೆಯ 25 ಕೋಟಿ ಜನರು ಈಗ ಬಡತನ ರೇಖೆಯಿಂದ ಮೇಲಕ್ಕೆ ಏರಿದ್ದಾರೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಪ್ರಕಾರ, ಭಾರತದಲ್ಲಿ ಬಡತನವು ಈಗ ಶೇಕಡಾ 1 ಕ್ಕಿಂತ ಕಡಿಮೆಯಾಗಿದೆ ಎಂದರು.

    ಇಂದು ಭಾರತದ ರಾಜಕೀಯದಲ್ಲಿ, ‘ಮೋದಿ ಕಿ ಗ್ಯಾರಂಟಿ’ ಅನ್ನು 24-ಕ್ಯಾರೆಟ್ ಚಿನ್ನದಂತೆ ಪರಿಶುದ್ಧವೆಂದು ಪರಿಗಣಿಸಲಾಗಿದೆ. ಹಾಗಾಗಿ, ಬಿಜೆಪಿ ಪ್ರಣಾಳಿಕೆಯು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತದ ರಾಜಕೀಯ ಪಕ್ಷಗಳಿಗೆ ಚಿನ್ನದ ಮಾನದಂಡವಾಗಿದೆ ಎಂದು ಹೇಳಲು ನಾನು ಹಿಂಜರಿಯುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಹೇಳಿದರು. (ಏಜೆನ್ಸೀಸ್​)

    ನಟ ಧನುಷ್​ ನನ್ನ ಸ್ವಂತ ಮಗ ಎಂದು ಹೇಳಿ ಕೋರ್ಟ್​ ಮೆಟ್ಟಿಲೇರಿದ್ದ ಕದಿರೇಶನ್ ದುರಂತ ಸಾವು​!

    ಪ್ರಭಾಸ್​​, ಜೂ. ಎನ್​​ಟಿಆರ್​ ಕೂಡ ಇಂಥಾ ರಿಸ್ಕ್​ ತೆಗೆದುಕೊಂಡಿಲ್ಲ! ಹೊಸ ಸಾಹಸಕ್ಕೆ ಕೈಹಾಕಿದ ನಟ ಯಶ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts