ಚೆನ್ನೈ: ತಮಿಳು ನಟ ಧನುಷ್ ಅವರ ತಂದೆ ಎಂದು ಹೇಳಿಕೊಂಡು ಕೋರ್ಟ್ ಮೆಟ್ಟಿಲೇರಿ ಜೀವನಾಂಶ ಕೋರಿದ್ದ ಹಿರಿಯ ವ್ಯಕ್ತಿ ಕದಿರೇಷನ್ ಅನಾರೋಗ್ಯದಿಂದ ಶುಕ್ರವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ವಿವಿಧ ಆರೋಗ್ಯ ಸಮಸ್ಯೆಗಳಿಂದ ಅಸ್ವಸ್ಥರಾಗಿದ್ದ ಆರ್.ಕದಿರೇಶ್ನ್ (72) ಅವರನ್ನು ಇತ್ತೀಚೆಗೆ ಮಧುರೈನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಅಂದಹಾಗೆ ಧನುಷ್ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ನಿರ್ದೇಶಕ ಮತ್ತು ನಿರ್ಮಾಪಕ ಕಸ್ತೂರಿ ರಾಜಾ ಹಾಗೂ ನಿರ್ದೇಶಕ ಸೆಲ್ವ ರಾಘವನ್ ಇಬ್ಬರ ಪ್ರೋತ್ಸಾಹದಿಂದ 2022ರಲ್ಲಿ ತುಳ್ಳುವದೋ ಇಳಮೈ ಚಿತ್ರದ ಮೂಲಕ ಧನುಷ್ ಬೆಳ್ಳಿತೆರೆಗೆ ಪರಿಚಯವಾದರು. ಆ ಬಳಿಕ ನಟ, ಬರಹಗಾರ, ಗಾಯಕರಾಗಿ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ. 2004ರಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ಅವರನ್ನು ವಿವಾಹವಾದ ಧನುಷ್, 2022ರಲ್ಲಿ ಟ್ವಿಟರ್ನಲ್ಲಿ ವಿಚ್ಛೇದನವನ್ನು ಘೋಷಿಸಿದರು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಇದರ ನಡುವೆ 2015ರಲ್ಲಿ, ಧನುಷ್ ತಮ್ಮ ಮಗ ಎಂದು ಮದುರೈ ಮೂಲದ ಕದಿರೇಶನ್ ಮತ್ತು ಮೀನಾಕ್ಷಿ ದಂಪತಿ ನ್ಯಾಯಾಲಯದ ಮೊರೆ ಹೋಗಿದ್ದರು. ಆ ಸಮಯದಲ್ಲಿ ಈ ಸಂಗತಿ ಕಾಲಿವುಡ್ನಲ್ಲಿ ಭಾರಿ ಸಂಚಲನ ಸೃಷ್ಟಿಸಿತು.
ಧನುಷ್ ನಾಯಕನಾಗಿ ಯಶಸ್ಸಿನ ಉತ್ತುಂಗದಲ್ಲಿ ಇರುವಾಗ ಕದಿರೇಶನ್ ಮತ್ತು ಮೀನಾಕ್ಷಿಯ ಈ ವಾದ ಚರ್ಚೆಯ ವಿಷಯವಾಗಿತ್ತು. ಮಗ ಧನುಷ್ ನಮಗೆ ಹೇಳದೆ ಶಾಲೆಯಿಂದ ಓಡಿ ಹೋಗಿದ್ದ. ಬಳಿಕ ನಿರ್ದೇಶಕ ಕಸ್ತೂರಿ ರಾಜಾ ಅವರ ಮನೆ ಸೇರಿ ದತ್ತು ಪುತ್ರನಾದ. ತಮ್ಮ ಮಗ ಈಗ ಸುಸ್ಥಿತಿಯಲ್ಲಿದ್ದಾನೆ. ನಮಗೆ ತಿಂಗಳಿಗೆ ಜೀವನಾಂಶ ಕೊಡಿಸಿ ಎಂದು ಕದಿರೇಶನ್ ಮತ್ತು ಮೀನಾಕ್ಷ ದಂಪತಿ ಆಗ್ರಹಿಸಿದ್ದರು.
ಆದರೆ, ಸಂಪೂರ್ಣ ಸಾಕ್ಷ್ಯಾಧಾರಗಳಿಲ್ಲದ ಕಾರಣ ಪ್ರಕರಣವನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಾಧೀಶರು ಇತ್ತೀಚೆಗೆ ಆದೇಶ ಹೊರಡಿಸಿದ್ದಾರೆ. ಇದೇ ಕೊರಗಿನಲ್ಲಿದ್ದ ಕದಿರೇಶನ್, ಕೆಲವು ದಿನಗಳಿಂದ ತೀವ್ರ ಅನಾರೋಗ್ಯಕ್ಕೀಡಾಗಿದ್ದ. ಇತ್ತೀಚೆಗೆ ಆರೋಗ್ಯ ಸ್ಥಿತಿ ಇನ್ನಷ್ಟು ಹದಗೆಟ್ಟಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗುತ್ತು. ಆದರೆ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. (ಏಜೆನ್ಸೀಸ್)
ಪ್ರಭಾಸ್, ಜೂ. ಎನ್ಟಿಆರ್ ಕೂಡ ಇಂಥಾ ರಿಸ್ಕ್ ತೆಗೆದುಕೊಂಡಿಲ್ಲ! ಹೊಸ ಸಾಹಸಕ್ಕೆ ಕೈಹಾಕಿದ ನಟ ಯಶ್