ಲುಂಗಿ, ನೈಟಿ ಧರಿಸುವಂತಿಲ್ಲ: ವಿಲಕ್ಷಣ ಡ್ರೆಸ್​​ ಕೋಡ್​ನ್ನು ವಿಧಿಸಿದ ಹೌಸಿಂಗ್ ಸೊಸೈಟಿ

lungi and nighty
Published on

ನೋಯ್ಡಾ: ಉದ್ಯಾನವನ, ಪಾರ್ಕಿಂಗ್, ಆವರಣ​ ಹಾಗೂ ಸಾರ್ವಜನಿಕರು ಬಳಸುವ ಪ್ರದೇಶಗಳಲ್ಲಿ ಯಾರೂ ಕೂಡ ಲುಂಗಿ ಹಾಗೂ ನೈಟಿಯನ್ನು ಧರಿಸುವಂತಿಲ್ಲ ಎಂದು ನೋಯ್ಡಾದ ಅಪಾರ್ಟ್​ಮೆಂಟ್​ ನಿವಾಸಿಗಳ ಕಲ್ಯಾಣ ಸಂಘ(ಆರ್​ಡಬ್ಲೂಎ) ವಿಚಿತ್ರ ಆದೇಶವನ್ನು ಹೊರಡಿಸಿದೆ.

ಹಿಮ್ಸಾಗರ್​ ಅಪಾರ್ಟ್​ಮೆಂಟ್​ ಈ ಆದೇಶವನ್ನು ಹೊರಡಿಸಿದ್ದು, ಸದ್ಯ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲುಂಗಿ ಮತ್ತು ನೈಟಿಯನ್ನು ಧರಿಸಿ ತಮ್ಮ ಫ್ಲಾಟ್‌ಗಳಿಂದ ಹೊರಬರದಂತೆ ನಿವಾಸಿಗಳಿಗೆ ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಅಲ್ಲದೇ, ನೀವು ಯಾವುದೇ ಸಮಯದಲ್ಲಿ ಅಪಾರ್ಟ್​ಮೆಂಟ್​ನ ತಿರುಗಾಡುವ ವೇಳೆ ನಿಮ್ಮ ನಡವಳಿಕೆಯ ಬಗ್ಗೆ ಆಕ್ಷೇಪಿಸಲು ಯಾರಿಗೂ ಅವಕಾಶವನ್ನು ನೀಡಬೇಡಿ. ನಿಮ್ಮ ನಡವಳಿಕೆ ಮತ್ತು ಉಡುಗೆ ಬಗ್ಗೆ ವಿಶೇಷ ಗಮನ ಹರಿಸಬೇಕು. ಆದುದರಿಂದ ಎಲ್ಲರೂ ಲುಂಗಿ ಮತ್ತು ನೈಟಿ ಧರಿಸಿ ಅಂಗಳದಲ್ಲಿ ಓಡಾಡಬಾರದು ಎಂದು ವಿನಂತಿಸುತ್ತಿದ್ದೇವೆ. ಇದನ್ನು ನೀವು ಪಾಲಿಸುವಿರೆಂದು ನಿರೀಕ್ಷಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಇದೊಂದು ಉತ್ತಮ ನಿರ್ಧಾರವಾಗಿದ್ದು, ಇದನ್ನು ಎಲ್ಲರೂ ಗೌರವಿಸಬೇಕು. ಮಹಿಳೆಯರು ನೈಟಿ ಧರಿಸಿ ತಿರುಗಾಡುವುದರಿಂದ ಪುರುಷರಿಗೆ ಮುಜುಗರವಾಗುತ್ತದೆ. ಹಾಗೆಯೇ ಪುರುಷರು ಲುಂಗಿ ಧರಿಸಿದರೆ ಮಹಿಳೆಯರಿಗೂ ಮುಜುಗರವಾಗುತ್ತದೆ. ಒಬ್ಬರನ್ನೊಬ್ಬರು ಗೌರವಿಸುವ ಅಗತ್ಯವಿದೆ ಎಂದು ಸಂಘದ ಅಧ್ಯಕ್ಷ ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net