ಚರ್ಮದ ಕ್ಯಾನ್ಸರ್ ಸಮಸ್ಯೆ ತಡೆಯಲು ಉಚಿತವಾಗಿ ಸನ್ ಕ್ರೀಮ್ ವಿತರಣೆ

suncream
Published on

ನೆದರ್ಲೆಂಡ್: ಕ್ಯಾನ್ಸರ್ ಎನ್ನುವುದು ನಮ್ಮ ದೇಹದಲ್ಲಿನ ಜೀವಕೋಶಗಳ ಬೆಳವಣಿಗೆಯಾಗಿದ್ದು, ಅದು ನಿಯಂತ್ರಣವನ್ನು ಕಳೆದುಕೊಂಡು ಒಂದೇ ಗಾತ್ರದಲ್ಲಿ ಬೆಳೆದು ಜೀವವನ್ನೇ ಬಲಿ ತೆಗದುಕೊಳ್ಳುತ್ತದೆ. ನೆದರ್ಲೆಂಡ್​​ನಲ್ಲಿ ಚರ್ಮದ ಕ್ಯಾನ್ಸರ್ ಪ್ರಮಾಣವನ್ನು ತಗ್ಗಿಸಲು ಹಾಗೂ ಬೇಸಿಗೆಯಲ್ಲಿ ಸೂರ್ಯನ ಶಾಖದಿಂದ ರಕ್ಷಣೆ ಒದಗಿಸಲು ಎಲ್ಲರಿಗೂ ಉಚಿತವಾಗಿ ಸನ್ ಕ್ರೀಮ್ ವಿತರಿಸಲಾಗುತ್ತಿದೆ.

ವೈದ್ಯಕೀಯ ತಜ್ಞರ ಪ್ರಕಾರ, ಜನ ಚರ್ಮದ ಕ್ಯಾನ್ಸರ್ ಪ್ರಕರಣಗಳಿಗೆ ತುತ್ತಾಗುತ್ತಿದ್ದಾರೆ. ಸನ್ ಕ್ರೀಮ್ ಈ ಕಾಯಿಲೆಯ ವಿರುದ್ಧ ಅತ್ಯಂತ ಪರಿಣಾಮಕಾರಿ ರಕ್ಷಣೆಯಾಗಿದೆ ಎಂದು ಸಾಬೀತಾಗಿದೆ. ಅದಕ್ಕೆ ಸನ್ ಕ್ರೀಮ್ ಅತ್ಯಂತ ಪರಿಣಾಮಕಾರಿ ಸಾಧನವಾಗಿದೆ ಎಂದು ಹೇಳಿದ್ದಾರೆ.

ದೇಶಾದ್ಯಂತ ಶಾಲೆಗಳು, ವಿಶ್ವವಿದ್ಯಾಲಯಗಳು, ಉತ್ಸವಗಳು, ಉದ್ಯಾನವನಗಳು, ಕ್ರೀಡಾ ಸ್ಥಳಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಸನ್ ಕ್ರೀಮ್ ವಿತರಕಗಳನ್ನು ಇರಿಸಲಾಗುತ್ತದೆ.

ಆಸ್ಟ್ರೇಲಿಯಾದ ಯಶಸ್ವಿ "ಸ್ಲಿಪ್, ಸ್ಲಾಪ್, ಸ್ಲ್ಯಾಪ್" ಅಭಿಯಾನದಿಂದ ಸ್ಫೂರ್ತಿ ಪಡೆದಿದ್ದು, ಬಿಸಿಲಿನ ವಾತಾವರಣದಲ್ಲಿ ಹೊರಗೆ ಹೋಗುವಾಗ ರಕ್ಷಣಾತ್ಮಕ ಉಡುಪುಗಳನ್ನು ಧರಿಸುವುದು, ಸನ್‌ಸ್ಕ್ರೀನ್ ಅನ್ನು ಅನ್ವಯಿಸುವುದು ಮತ್ತು ಟೋಪಿ ಧರಿಸಿ ಎಂದು ಹೇಳಲಾಗುತ್ತಿದೆ. ಡಚ್ ಅಧಿಕಾರಿಗಳು ಸನ್ ಕ್ರೀಮ್ ಬಳಸುವುದು ಅಭ್ಯಾಸವಾಗಿ ಬದಲಾಗಬೇಕು ಎಂದಿದ್ದಾರೆ.

ವಾರಾಂತ್ಯದಲ್ಲಿ ಬ್ರೆಡಾದಲ್ಲಿ ನಡೆದ ಉತ್ಸವದಲ್ಲಿ ಸನ್ ಕ್ರೀಮ್ ವಿತರಿಸುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಇಲ್ಲಿನ ಎಲ್ಲ ಪುರಸಭೆ ವ್ಯಾಪ್ತಿಯಲ್ಲಿ ಬರುವ ಸುಮಾರು 120 ಪ್ರಾಥಮಿಕ ಶಾಲೆಗಳಿಗೆ ಸನ್ ಕ್ರೀಮ್ ವಿತರಿಸಲು ಹಣ ನೀಡಲು ಯೋಜಿಸಿದೆ. ವಿಶೇಷವಾಗಿ ಕೆಲವು ಪ್ರದೇಶದಲ್ಲಿ, ಸೂರ್ಯನ ಬೆಳಕು ಸರಾಸರಿಗಿಂತ ಹೆಚ್ಚಾಗಿರುತ್ತದೆ.

ಯುರೋಪಿನಾದ್ಯಂತ ಚರ್ಮದ ಕ್ಯಾನ್ಸರ್ ಪ್ರಮಾಣವು ಸ್ಥಿರವಾಗಿ ಹೆಚ್ಚುತ್ತಿದೆ. ನೆರೆಯ ಜರ್ಮನಿಯಲ್ಲಿ 2001 ರಿಂದ ಚರ್ಮದ ಕ್ಯಾನ್ಸರ್-ಸಂಬಂಧಿತ ಸಾವುಗಳಲ್ಲಿ 55% ಏರಿಕೆಯಾಗಿದೆ. ಹೀಗಾಗಿ ನೆದರ್ಲೆಂಡ್​​ನಲ್ಲಿ ಈ ಕ್ರಮವನ್ನು ಕೈಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net