13 ವರ್ಷದ ಬಾಲಕನ ಜತೆ ದೇಹ ಹಂಚಿಕೊಂಡು ಗರ್ಭಿಣಿಯಾದ ಮಹಿಳೆಗೆ ಜೈಲು ಶಿಕ್ಷೆಯಿಂದ ಮುಕ್ತಿ!

US Woman
ಆರೋಪಿ ಆ್ಯಂಡ್ರಿಯಾ ಸೆರ್ರನೋ
Published on

ವಾಷಿಂಗ್ಟನ್​: ಹದಿಮೂರು ವರ್ಷದ ಬಾಲಕನಿಗೆ ಆಮಿಷವೊಡ್ಡಿ ಆತನೊಂದಿಗೆ ದೇಹ ಹಂಚಿಕೊಂಡು ಗರ್ಭಿಣಿಯಾದ 31 ವರ್ಷದ ಮಹಿಳೆ ಜೈಲು ಶಿಕ್ಷೆಯಿಂದ ಮುಕ್ತಿ ಪಡೆದಿದ್ದಾಳೆ.

ಮಹಿಳೆಯ ಹೆಸರು ಆ್ಯಂಡ್ರಿಯಾ ಸೆರ್ರನೋ. ಈಕೆ ಯುನೈಡೆಟ್​ ಸ್ಟೇಟ್ಸ್​ನ ಕೊಲೊರಾಡೋ ನಗರದ ನಿವಾಸಿ. 13 ವರ್ಷದ ಬಾಲಕನೊಂದಿಗೆ ಲೈಂಗಿಕ ಸಂಭೋಗ ನಡೆಸಿದ್ದಾಗಿ ಒಪ್ಪಿಕೊಂಡಿದ್ದಳು. ಬಳಿಕ ಆಕೆಯ ಮೇಲೆ ಪ್ರಕರಣ ದಾಖಲಾಗಿ ಜೈಲು ಸೇರಿದ್ದಳು. ಇದೀಗ ಜೈಲಿನಿಂದ ಬಿಡುಗಡೆಯಾಗಿರುವುದು ಬಾಲಕನ ಕುಟುಂಬಸ್ಥರಿಗೆ ಬೇಸರ ತರಿಸಿದೆ.

ನನ್ನ ಮಗ ಬಾಲ್ಯವನ್ನು ಕಸಿದುಕೊಂಡಂತೆ ಭಾಸವಾಗುತ್ತಿದೆ. ಇದೀಗ ಆತ ತಂದೆಯಾಗಿದ್ದಾನೆ. ನನ್ನ ಮಗ ಸಂತ್ರಸ್ತನಾಗಿದ್ದು, ತನ್ನ ಜೀವನದುದ್ದಕ್ಕೂ ಅದರೊಂದಿಗೆ ಬದುಕಬೇಕಾಗುತ್ತದೆ ಎಂದು ಆತನ ತಾಯಿ ನೋವು ತೋಡಿಕೊಂಡಿದ್ದಾಳೆ.

ಆ್ಯಂಡ್ರಿಯಾಳನ್ನು ಜೈಲಿನಿಂದ ಬಿಡುಗಡೆ ಮಾಡಿದರೂ ಆಕೆಯನ್ನು ಲೈಂಗಿಕ ಅಪರಾಧಿ ಎಂದು ಪರಿಗಣಿಸಲಾಗುತ್ತದೆ. ಕಳೆದ ವರ್ಷ 13 ವರ್ಷದ ಬಾಲಕ ಮೇಲೆ ಲೈಂಗಿಕ ದೌರ್ಜ್ಯನ್ಯ ನಡೆಸಿದ್ದಕ್ಕಾಗಿ ಬಂಧಿಸಲಾಯಿತು. ಇದೀಗ ಆಕೆಯನ್ನು 70,000 ಡಾಲರ್​ ಬಾಂಡ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಇದೀಗ 13 ವರ್ಷದ ಮಗುವಿಗೆ ಜನ್ಮ ನೀಡಿದ್ದಾಳೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net