ಪಾಕ್ ಪ್ರಧಾನಿ ವಿರುದ್ಧ ಅವಿಶ್ವಾಸ ನಿರ್ಣಯ; ಇಮ್ರಾನ್ ಖಾನ್ ಭವಿಷ್ಯ ಅಯೋಮಯ

imrankhan
Published on

ಇಸ್ಲಾಮಾಬಾದ್​: ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ವಿರುದ್ಧ ಇಂದು ಅಲ್ಲಿನ ಸದನದಲ್ಲಿ ಪ್ರತಿಪಕ್ಷದ ನಾಯಕ ಶಹಬಾಜ್ ಷರೀಫ್​ ಅವಿಶ್ವಾಸ ಮಂಡನೆಗೆ ಒತ್ತಾಯಿಸಿದ್ದು, ಖಾನ್ ಭವಿಷ್ಯ ಅಯೋಮಯ ಎಂಬಂತಾಗಿದೆ.

ಅವಿಶ್ವಾಸದ ಪರ ಇರುವವರು ನಿಂತುಕೊಳ್ಳಿ ಎಂದು ಅಲ್ಲಿನ ಸದನದಲ್ಲಿ ಡೆಪ್ಯುಟಿ ಸ್ಪೀಕರ್ ಖಾಸಿಮ್ ಸುರಿ ಪ್ರಸ್ತಾಪಿಸಿದರು. ನಿಂತವರ ಗಣತಿ ಆರಂಭವಾದ ಬಳಿಕ ಅವಿಶ್ವಾಸ ಮಂಡನೆ ಕುರಿತ ಚರ್ಚೆಗೆ ಅವರು ಅನುಮೋದನೆ ನೀಡಿದರು.

ಜತೆಗೆ ಅವಿಶ್ವಾಸದ ಮಂಡನೆ ಮೇ 31ರಂದು ನಡೆಯಲಿದೆ ಎಂದೂ ಹೇಳಿದರು. ಅಲ್ಲದೆ ನಿರ್ಣಯದ ಮೇಲಿನ ಮತ ಏ.1ರಿಂದ 4ರ ಒಳಗೆ ನಡೆಯಲಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net