ಜನ್ಮದಿನದಂದೇ ಮರಣ: ಬೈಕ್​ನಲ್ಲಿ ಹೋಗುವಾಗ ತಲೆ ಮೇಲೇ ಬಿದ್ದ ಮರ..!

Tree
ಮನು ತಲೆ ಮೇಲೆ ಮರ ಬಿದ್ದ ಸ್ಥಳದಲ್ಲಿ ಪೊಲೀಸರಿಂದ ಪರಿಶೀಲನೆ.
Published on

ಮೈಸೂರು: ಜನ್ಮದಿನದ ಸಂಭ್ರಮದಲ್ಲಿದ್ದ ಮನೆಯೊಂದರಲ್ಲಿ ಅದೇ ದಿನ ಸಾವಿನ ಸೂತಕ ಆವರಿಸಿದೆ. ಅತ್ಯಂತ ದುರದೃಷ್ಟಕರ ಎಂದರೆ, ಜನ್ಮದಿನದ ಸಂತೋಷದಲ್ಲಿದ್ದ ವ್ಯಕ್ತಿ ಅದೇ ದಿನ ಸಾವಿಗೀಡಾಗಿದ್ದಾನೆ. ಮೈಸೂರಿನ ತಿ. ನರಸೀಪುರ ತಾಲೂಕಿನಲ್ಲಿ ಇಂಥದ್ದೊಂದು ದುರಂತ ಸಂಭವಿಸಿದೆ.

ಮೂಗೂರು ನಿವಾಸಿ ಮನು (28) ಜನ್ಮದಿನದಂದೇ ಸಾವಿಗೀಡಾದ ವ್ಯಕ್ತಿ. ತನ್ನ ಹುಟ್ಟುಹಬ್ಬದ ಪ್ರಯುಕ್ತ ಇಂದು ತಮ್ಮನ ಮನೆಗೆ ಸಿಹಿ ವಿತರಿಸಲು ಮನು ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಬೈಕ್​ನಲ್ಲಿ ತಿ.ನರಸೀಪುರ ತಾಲೂಕಿನ ಹಳೇ ಕೆಂಪಯ್ಯನ ಹುಂಡಿ ಬಳಿ ಹೋಗುತ್ತಿದ್ದಾಗ ಮನು ತಲೆ ಮೇಲೇ ಮರ ಬಿದ್ದಿದೆ.

ಗಂಭೀರವಾಗಿ ಗಾಯಗೊಂಡ ಮನು ಸ್ಥಳದಲ್ಲೇ ಸಾವಿಗೀಡಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ತಿ. ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ತಿ. ನರಸೀಪುರ ಪೊಲೀಸ್ ಠಾಣೆಯ ಇನ್​ಸ್ಪೆಕ್ಟರ್​ ಕೃಷ್ಣಪ್ಪ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net