ಆಸ್ಕರ್​ ಪ್ರಶಸ್ತಿ 2022: ಚೊಚ್ಚಲ ಆಸ್ಕರ್​ ಪ್ರಶಸ್ತಿ ಗೆದ್ದ ನಟ ವಿಲ್​ ಸ್ಮಿತ್, ವಿಜೇತರ​ ಸಂಪೂರ್ಣ ಪಟ್ಟಿ ಇಲ್ಲಿದೆ...

Oscars
Published on

ನವದೆಹಲಿ: ಜೀವನದಲ್ಲಿ ಒಮ್ಮೆಯಾದರೂ ಆಸ್ಕರ್​ ಪ್ರಶಸ್ತಿ ಗೆಲ್ಲಬೇಕೆಂಬುದು ಸಿನಿ ಜಗತ್ತಿನ ಅನೇಕ ಕಲಾವಿದರ ಬಹುದೊಡ್ಡ ಆಸೆ. ಒಂದು ವೇಳೆ ಈ ಪ್ರಶಸ್ತಿಯನ್ನು ಗೆದ್ದರೆ, ಕಲಾವಿದರು ಇಡೀ ಜಗತ್ತನ್ನೇ ಗೆದ್ದ ಖುಷಿಯಲ್ಲಿರುತ್ತಾರೆ. ಇದೀಗ 2022ನೇ ಸಾಲಿನ ಆಸ್ಕರ್​ ಪ್ರಶಸ್ತಿ ವಿಜೇತರ ಪಟ್ಟಿ ಹೊರಬಿದ್ದಿದೆ.

94ನೇ ಅಕಾಡೆಮಿ ಪ್ರಶಸ್ತಿ ಸೋಮವಾರ ಬೆಳಗ್ಗೆ ಲಾಸ್​ ಏಂಜಲೀಸ್​ನ ಡಾಲ್ಬಿ ಚಿತ್ರಮಂದಿರದಲ್ಲಿ ನಡೆದಿದೆ. ಸೆಲೆಬ್ರಿಟಿಗಳು ಮತ್ತು ಪ್ರೇಕ್ಷಕರ ಸಮ್ಮುಖದಲ್ಲಿ ಆಸ್ಕರ್ ಆಯೋಜಕರು ವಿಜೇತರ ಹೆಸರನ್ನು ಘೋಷಿಸಿದರು. 'ಡ್ಯೂನ್' ಮತ್ತು 'ಚೈಲ್ಡ್ ಆಫ್ ಡೆಫ್ ಅಡಲ್ಟ್ಸ್ (ಸಿಒಡಿಎ)' ಚಿತ್ರಗಳು ಆಸ್ಕರ್‌ನಲ್ಲಿ ಸ್ಪರ್ಧಿಸಿದ್ದವು. ಎರಡೂ ಚಿತ್ರಗಳು ಮೂರೂ ವಿಭಾಗಗಳಲ್ಲಿ ಪ್ರಶಸ್ತಿ ಗಳಿಸಿವೆ. ಮತ್ತೊಂದೆಡೆ ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತೀಯ ಚಿತ್ರ ‘ರೈಟಿಂಗ್ ವಿತ್ ಫೈರ್’ ನಿರಾಸೆ ಮೂಡಿಸಿದೆ. ಈ ಪ್ರಶಸ್ತಿಯು ಸಮ್ಮರ್ ಆಫ್ ಸೋಲ್‌ ಚಿತ್ರಕ್ಕೆ ದಕ್ಕಿದೆ.

ಪ್ರಶಸ್ತಿ ವಿಜೇತ ಪಟ್ಟಿ ಈ ಕೆಳಕಂಡಂತಿದೆ

* ಉತ್ತಮ ಚಿತ್ರ: ಚೈಲ್ಡ್ ಆಫ್ ಡೆಫ್ ಅಡಲ್ಟ್ಸ್ (ಸಿಒಡಿಎ)

* ಉತ್ತಮ ನಟ: ವಿಲ್​ ಸ್ಮಿತ್​ (ಕಿಂಗ್​ ರಿಚರ್ಡ್​ ಸಿನಿಮಾ)

* ಉತ್ತಮ ನಟಿ: ಜೆಸ್ಸಿಕಾ ಚಸ್ಟೈನ್ (ದಿ ಐ ಆಫ್​ ಟಾಮಿ ಫೆ ಸಿನಿಮಾ)

* ಉತ್ತಮ ನಿರ್ದೇಶಕ: ಜೇನ್ ಕ್ಯಾಂಪಿಯನ್ (ದಿ ಪವರ್​ ಆಫ್​ ದಿ ಡಾಗ್​)

* ಉತ್ತಮ ಪೋಷಕ ನಟಿ: ಅರಿಯಾನ ಡಿಬೊಸ್​ (ವೆಸ್ಟ್​ ಸೈಡ್​ ಸ್ಟೋರಿ)

* ಉತ್ತಮ ಪೋಷಕ ನಟ: ಟ್ರಾಯ್​ ಕೋಟ್ಸ್​ (ಸಿಒಡಿಎ)

* ಉತ್ತಮ ಸಿನಿಮಾಟೋಗ್ರಫಿ: ಗ್ರೇಗ್​ ಫ್ರಾಸೆರ್​ (ಡ್ಯೂನ್​)

* ಉತ್ತಮ ಒರಿಜಿನಲ್​ ಸಾಂಗ್​: ನೋ ಟೈಮ್​ ಟು ಡೈ

* ಉತ್ತಮ ಸಾಕ್ಷ್ಯಚಿತ್ರ: ಸಮ್ಮರ್ ಆಫ್ ಸೋಲ್‌

* ಉತ್ತಮ ಒರಿಜಿನಲ್​ ಸ್ಕ್ರೀನ್​ಪ್ಲೇ: ಬೆಲ್ಫಾಸ್ಟ್​ (ಕಿನ್ನೆತ್​ ಬ್ರಾನ)

* ಉತ್ತಮ ಕಾಸ್ಟೂಮ್​ ಡಿಸೈನ್​: ಜೆನ್ನಿ ಬೆವನ್​ (ಕ್ರುಯೆಲ್ಲ)

* ಉತ್ತಮ ಅಂತಾರಾಷ್ಟ್ರೀಯ ಫೀಚರ್​: ಡ್ರೈವ್​ ಮೈ ಕಾರ್​ (ಜಪಾನ್​)

* ಉತ್ತಮ ಅನಿಮೇಟೆಡ್​ ಫೀಚರ್​: ಎನ್ಕಾಂಟೊ ಬೆಸ್ಟ್

* ಉತ್ತಮ ಫಿಲ್ಮ್​ ಎಡಿಟಿಂಗ್​: ಜೋ ವಾಕರ್​ (ಡ್ಯೂನ್​)

* ಉತ್ತಮ ಸೌಂಡ್​: ಡ್ಯೂನ್​ (ಮ್ಯಾಕ್‌ರುತ್, ಮಾರ್ಕ್ ಮಾಂಗಿನಿ, ಥಿಯೋ ಗ್ರೀನ್, ಡೌಗ್ ಹೆಂಫಿಲ್, ರಾನ್ ಬಾರ್ಟ್ಲೆಟ್)

* ಉತ್ತಮ ಪ್ರೊಡಕ್ಷನ್​ ಡಿಸೈನ್​: ಡ್ಯೂನ್​ (ಪ್ಯಾಟ್ರಿಸ್ ವರ್ಮಾಟ್, ಸೆಟ್ ವಿನ್ಯಾಸ - ಜುಜಾನಾ)

* ಉತ್ತಮ ಲೈವ್​ ಆಕ್ಷನ್​ ಶಾರ್ಟ್​ ಫಿಲ್ಮ್​: ದಿ ಲಾಂಗ್​ ಗುಡ್​ಬೈ

* ಉತ್ತಮ ಅನಿಮೇಟೆಡ್​ ಶಾರ್ಟ್​ ಫಿಲ್ಮ್​: ದಿ ವಿಂಡಶೀಲ್ಡ್​ ಪೈಪರ್​

* ಉತ್ತಮ ಡಾಕ್ಯುಮೆಂಟರಿ ಶಾರ್ಟ್​ ಫಿಲ್ಮ್: ದಿ ಕ್ವೀನ್​ ಆಫ್​ ಬಾಸ್ಕೆಟ್​ಬಾಲ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net