

ನವದೆಹಲಿ: ರಾಜ್ಯಸಭಾ(Rajya Sabha) ಅಧ್ಯಕ್ಷ ಮತ್ತು ಉಪಾಧ್ಯಕ್ಷ ಜಗದೀಪ್ ಧನಕರ್ ಅವರು ವಿರೋಧ ಪಕ್ಷದ ಸಂಸದರ ಜತೆ ಆಗಾಗ್ಗೆ ಘರ್ಷಣೆ ನಡೆಸುತ್ತಿದ್ದಾರೆ ಎಂಬ ಆರೋಪ ಉಲ್ಲೇಖಿಸಿ ಇಂಡಿಯಾ ಮೈತ್ರಿಕೂಟ ಸಂಸದರು ಧನಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಸಜ್ಜಾಗಿದೆ ಎಂದು ವರದಿಯಾಗಿದೆ.
ಈ ಮಂಡನೆಯ ಪ್ರಸ್ತಾವನೆಯೂ ವಿವಿಧ ಬಣದ 70 ನಾಯಕರಿಂದ ಸಹಿಗಳನ್ನು ಪಡೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್(ಟಿಎಂಸಿ), ಆಮ್ ಆದ್ಮಿ ಪಾರ್ಟಿ(ಎಎಪಿ), ಸಮಾಜವಾದಿ ಪಾರ್ಟಿ(ಎಸ್ಪಿ) ಸೇರಿ ಇತರ ಮೈತ್ರಿ ಕೂಟದ ಅಭ್ಯರ್ಥಿಗಳು ಈ ಪ್ರಸ್ತಾಪವನ್ನು ಮುಂದುವರೆಸುವ ನಿರ್ಧಾರದಲ್ಲಿ ಒಗ್ಗೂಡಿದ್ದಾರೆ ಎಂದು ಹೇಳಲಾಗಿದೆ.
ಇಂಡಿಯಾ ಮೈತ್ರಿಕೂಟದ ಸದಸ್ಯರು ಮತ್ತು ಆಡಳಿತ ಪಕ್ಷದವರ ನಡುವೆ ಅಗಾಗ್ಗೆ ಪಕ್ಷಪಾತ ಮಾಡುತ್ತಿದ್ದಾರೆ ವಿರೋಧ ಪಕ್ಷವರು ಜಗದೀಪ್ ಧನಕರ್ ವಿರುದ್ಧ ಆರೋಪಿಸುತ್ತಿದ್ದಾರೆ. ನಮ್ಮ ಭಾಷಣಗಳಿಗೆ ಸದಸನದಲ್ಲಿ (ಮೇಲ್ಮನೆ) ಅಡ್ಡಿಪಡಿಸುತ್ತಿದ್ದಾರೆ. ನಿರ್ಣಯಕ ವಿಷಯಗಳ ಬಗ್ಗೆ ಸಾಕಷ್ಟು ಚರ್ಚೆಗೆ ಅವಕಾಶ ಕೊಡುವುದಿಲ್ಲ. ಅಲ್ಲದೇ, ವಿವಾದತ್ಮಾಕ ಚರ್ಚೆಗಳಲ್ಲಿ ಆಡಳಿತ ಪಕ್ಷದ ಪರ ಇರುತ್ತಾರೆ ಎಂದು ಇಂಡಿಯಾ ನಾಯಕರು ಆರೋಪಿಸಿದ್ದಾರೆ,(ಏಜೆನ್ಸೀಸ್).