2027ರಲ್ಲಿ ಸೆಟ್ಟೇರಲಿದೆ 'ಅನಿಮಲ್​-2', ಗುಡ್‌ ನ್ಯೂಸ್‌ ಕೊಟ್ಟ ರಣ್‌ಬೀರ್ ಕಪೂರ್ | Animal2 Shoot Date

animal final
Published on

ರಣ್‌ಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾ ಕಳೆದ ವರ್ಷ ರಿಲೀಸ್ ಆಗಿ ಸಕ್ಸಸ್ ಕಂಡಿದೆ.ಚಿತ್ರದ ಸೀಕ್ವೆಲ್ ಯಾವಾಗ ಎಂಬ ಅಭಿಮಾನಿಗಳ ಕಾತರಕ್ಕೆ ರಣ್‌ಬೀರ್ ಕಪೂರ್ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಣ್​ಬೀರ್​​, ‘ಅನಿಮಲ್ ಪಾರ್ಟ್ 2’ (Animal 2) 2027ರಲ್ಲಿ ರಿಲೀಸ್ ಆಗಲಿದೆ. ಚಿತ್ರವನ್ನು ನನಗೆ 3 ಭಾಗಗಳಲ್ಲಿ ಮಾಡಲು ಆಸೆಯಿದೆ. 2ನೇ ಪಾರ್ಟ್‌ಗೆ ‘ಅನಿಮಲ್ ಪಾರ್ಕ್’ ಎಂದು ಟೈಟಲ್ ಇಡಲಾಗಿದೆ. ಈ ಮೊದಲೇ ಈ ಬಗ್ಗೆ ಚರ್ಚಿಸಿದ್ದೇವು ಎಂದಿದ್ದಾರೆ.

ಒಂದೇ ಸಿನಿಮಾದಲ್ಲಿ ವಿಲನ್ ಮತ್ತು ಹೀರೋ ಎರಡು ಪಾತ್ರದಲ್ಲಿ ನಟಿಸುವ ಚಾನ್ಸ್ ದಕ್ಕಿದೆ ಎಂದು ಖುಷಿಯಿಂದ ರಣ್‌ಬೀರ್ ಮಾತನಾಡಿದ್ದಾರೆ.

ಅನಿಮಲ್ ಸಿನಿಮಾದಲ್ಲಿ ರಣ್‌ಬೀರ್ ಜೊತೆ ರಶ್ಮಿಕಾ ಮಂದಣ್ಣ (Rashmika Mandanna), ತೃಪ್ತಿ ದಿಮ್ರಿ, ಅನಿಲ್ ಕಪೂರ್, ಬಾಬಿ ಡಿಯೋಲ್ ಸೇರಿದಂತೆ ಅನೇಕರು ನಟಿಸಿದರು. ತಂದೆ ಮತ್ತು ಮಗನ ಬಾಂಧವ್ಯ ಮತ್ತು ಗೀತಾಂಜಲಿ (ರಶ್ಮಿಕಾ) ಮೇಲಿನ ರಣ್‌ಬೀರ್ ಪ್ರೀತಿಗೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಇನ್ನು ಈ ಸಿನಿಮಾವನ್ನ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ್ದರು.

ಅನಿಮಲ್​ ಸಿನಿಮಾದಲ್ಲಿ ರಣ್​ಬೀರ್​ ಮತ್ತು ರಶ್ಮಿಕಾ ನಟನೆ ಮತ್ತು ಇಬ್ಬರ ಜೋಡಿಯೂ ಮೋಡಿ ಮಾಡಿತ್ತು. ಜತೆಗೆ ರಣ್​ಬೀರ್​​ ಅನಿಮಲ್​ ಲುಕ್​ನ ಹೇರ್​​ಸ್ಟೈಲನ್ನೇ ಸಾಕಷ್ಟು ಜನರೂ ಅನುಕರಣೆ ಮಾಡಿದ್ದರು.

ಇದೀಗ ಮತ್ತೆ ಅನಿಮಲ್​2 ಸೆಟ್ಟೇರಲಿದ್ದು, ಇವರಿಬ್ಬರನ್ನೂ ಆನ್​ಸ್ಕ್ರೀನ್​ನಲ್ಲಿ ಮೆಚ್ಚಿಕೊಂಡ ಅಭಿಮಾನಿಗಳು ಅನಿಮಲ್​2ನಲ್ಲೂ ರಶ್ಮಿಕಾ ಅವರೇ ನಾಯಕಿಯಾಗಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅನಿಮಲ್​-2 ಚಿತ್ರದಲ್ಲೂ ರಶ್ಮಿಕಾ ಅವರೇ ನಾಯಕಿಯಾಗಲಿದ್ದಾರಾ ಅನ್ನೋದನ್ನ ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net