

ಬೆಂಗಳೂರು: ಗೊಂಬೆ ಎಂದೇ ಕರೆಸಿಕೊಳ್ಳುವ ನಿವೇದಿತಾ ಗೌಡ ಪತಿ ಚಂದನ್ ಶೆಟ್ಟಿ ಜೊತೆ ಡಿವೋರ್ಸ್ ಆದ ಬಳಿಕ ಸೈಲೆಂಟ್ ಆಗಿದ್ದರಾದರೂ ಈಗ ಮತ್ತೆ ರೀಲ್ಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಬಾರಿ ನೆಟ್ಟಿಗರು ಏನಾದ್ರೂ ಮಾಡ್ಕೋ ತಾಯಿ, ಆಶೆಡ್ ಸಹವಾಸ ಮಾತ್ರ ಬೇಡಪ್ಪಾ ಎಂದು ನೆಟ್ಟಿಗರು ಹಾಸ್ಯಭರಿತವಾಗಿ ಹೇಳ್ತಿದ್ದಾರೆ.
ಇದನ್ನೂ ಓದಿ: ಲ್ಯಾಪ್ಟಾಪ್ ಸ್ಫೋಟಗೊಂಡು ಇಬ್ಬರು ಮಕ್ಕಳು ಮೃತ್ಯು!
ಡಿವೋರ್ಸ್ ಆದ ಬಳಿಕ ನಿವೇದಿತಾ ಮೊದಲ ಬಾರಿಗೆ ಇನ್ಸ್ಟಾದಲ್ಲಿ ರೀಲ್ಸ್ ಶೇರ್ ಮಾಡಿದ್ದಾರೆ. ಈ ರೀಲ್ಸ್‌ಗೆ ನೆಟ್ಟಿಗರು ಹೆಚ್ಚಾಗಿ ನೆಗೆಟಿವ್ ಕಮೆಂಟ್‌ಗಳನ್ನು ಹಾಕಿದ್ದಾರೆ. ಪೋಸ್ಟ್ ಮಾಡಿದ 55 ನಿಮಿಷಕ್ಕೆ 4ಲಕ್ಷ 15ಸಾವಿರ ವೀವ್ಸ್, 17ಸಾವಿರ ಲೈಕ್ಸ್ ಬಂದಿರುವುದು ವಿಶೇಷವಾಗಿದೆ.
ಒಬ್ಬ ಅಭಿಮಾನಿ, ನಿನ್ನನ್ನು ನೋಡಿ ಏನೋ ಹೇಳಬೇಕು ಅಂದುಕೊಂಡೆ, ಆದ್ರೆ ಶೆಡ್ ನೆನಪಾಗಿ ಅದ್ರ ಸಹವಾಸ ಬೇಡ ಅಂತ ಸುಮ್ಮನೇ ಬಿಟ್ಟಿದ್ದೇನೆ ಎಂದಿದ್ದಾನೆ.
ಇನ್ನೂ ಹಲವರು, ಶೆಡ್ ಸಹವಾಸ ಬೇಡ ಎಂದು ಬಾಯಿಮುಚ್ಚುಕೊಂಡು ಇದ್ದೇವೆ ಎಂದಿದ್ದಾರೆ. ಕೆಲವರು, ಚಂದನ್ ಶೆಟ್ಟಿ ಬಾಳನ್ನು ಅನ್ಯಾಯವಾಗಿ ಹಾಳು ಮಾಡಿದ್ಯಲ್ಲಾ ಎಂದು ನಿವೇದಿತಾ ಅವರ ವಿರುದ್ಧ ಗರಂ ಆಗಿದ್ದಾರೆ. ಮತ್ತೆ ಕೆಲವರು ಡಿವೋರ್ಸ್ ಬಳಿಕ ಎಷ್ಟೊಂದು ಗ್ಲೋ ಬಂದಿದೆ ನೋಡಿ ಎನ್ನುತ್ತಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ಮತ್ತೆ ಕೆಲವರು ಮೇಕಪ್ ಜಾಸ್ತಿ ಮಾಡಿಕೊಂಡಿದ್ದಾಳಷ್ಟೇ ಅನ್ನುತ್ತಿದ್ದಾರೆ. ಒಟ್ಟಿನಲ್ಲಿ ಈ ಸಲದ ಕಮೆಂಟ್‌ಗಳು ಭಿನ್ನ ವಿಭಿನ್ನವಾಗಿವೆ ಎಂದರೆ ತಪ್ಪಾಗಲಾರದು.
ಬಾರ್ಬಿಡಾಲ್ಎಂದೇ ಫೇಮಸ್ ಆಗಿದ್ದ ನಿವೇದಿತಾ ಗೌಡ, ಈ ಹಿಂದೆ ದಿನಕ್ಕೊಂದರಂತೆ ಡ್ರೆಸ್ ಮಾಡಿಕೊಂಡು ರೀಲ್ಸ್ ಮಾಡುತ್ತಿದ್ದರು. ಫ್ಯಾನ್ಸ್ ಸಂಖ್ಯೆ ಸಹ ಹೆಚ್ಚಿತ್ತು. ಇದೇ ಕಾರಣಕ್ಕೆ ಇವರು ಇನ್ಸ್ಟಾಗ್ರಾಮ್ನಲ್ಲಿ ವಾರಕ್ಕೆ ಏನಿಲ್ಲವೆಂದರೂ ನಾಲ್ಕೈದು ವಿಡಿಯೋ ಅಪ್ಲೋಡ್ ಮಾಡುತ್ತಿದ್ದರು. ಇದಕ್ಕೆ ಮೆಚ್ಚುಗೆ ಮತ್ತು ಟ್ರೋಲ್ಗಳೂ ಬರುತ್ತಿದ್ದವು. ಕಮೆಂಟ್‌ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದರು.