'ನೀವು ನೀವಾಗಿರಿ..ಇನ್ನೊಬ್ಬರಿಗಾಗಿ ಬದಲಾಗುವುದು ಬೇಡ': ಪ್ರಿಯಾಂಕಾ ಚೋಪ್ರಾ ಹೀಗೆನ್ನಲು ಕಾರಣವಿದೆ ನೋಡಿ..

priyanka
Published on

ಮುಂಬೈ: ಯಾರನ್ನೋ ಮೆಚ್ಚಿಸಿ ನನಗೇನೋ ಆಗಬೇಕಾದ ಅಗತ್ಯವಿಲ್ಲ. ಜನರು ಹೇಗಿದ್ದಾರೆ ಎಂದರೆ, ನೀವು ಅವರ ಇಷ್ಟದಂತೆ ಬದಲಾಗಲು ಹೊರಟರೆ ಮುಗಿಯದ ಕಥೆಯಾಗಿಬಿಡುತ್ತದೆ ಎಂದು ನಟಿ ಪ್ರಿಯಾಂಕಾ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

ನನಗೆ ಯಾರನ್ನೋ ಮೆಚ್ಚಿಸಲು ಏನೋ ಆಗಬೇಕಾದ ಅಗತ್ಯವಿಲ್ಲ. ಅದು ಆಗ ಹೊರಟರೆ ಮುಗಿಯದ ಕಥೆಯಾಗಿಬಿಡುತ್ತದೆ. ಯಾಕೆಂದರೆ, ಜನರು ಹೇಗಿದ್ದಾರೆ ಎಂದರೆ, ನೀವು ಅವರ ಇಷ್ಟದಂತೆ ಬದಲಾಗಲು ಹೊರಟರೆ ಅವರಿಗೆ ನಿಮ್ಮ ಬದಲಾವಣೆಯಲ್ಲಿ ತೃಪ್ತಿಯೇ ಇರುವುದಿಲ್ಲ. ಅವರ ಯೋಚನೆ ಬದಲಾಗುತ್ತಲೇ ಇರುತ್ತದೆ, ಅದರಂತೇ ನೀವೂ ಕೂಡ ಬದಲಾಗುತ್ತಲೇ ಇರುತ್ತೀರಿ. ಆಗ ನಿಮಗೊಂದು ವ್ಯಕ್ತಿತ್ವವೇ ಇರುವುದಿಲ್ಲ. ಸದ್ಯಕ್ಕೆ, ಈಗ ನಿಮ್ಮನ್ನು ಜನರು ಯಾಕೆ ಇಷ್ಟಪಡುತ್ತಾರೆ ಎಂದರೆ ಅದು ನೀವಿರುವ ಪ್ರೆಸೆಂಟ್ ರೀತಿಗೆ.

ನಿಮ್ಮ ಜತೆ ಯಾರೇ ಸ್ನೇಹ, ಸಂಬಂಧ ಇಟ್ಟುಕೊಂಡಿದ್ದರೆ ಅದು ನೀವು ಈಗ ಹೇಗಿದ್ದೀರೋ ಅದೇ ಕಾರಣಕ್ಕೆ. ನೀವು ಅದನ್ನೇ ಬದಲಾಯಿಸಿಕೊಂಡರೆ ಅಲ್ಲಿಗೆ ಕಥೆ ಮುಗಿಯುತ್ತದೆ. ಏಕೆಂದರೆ, ಯಾರನ್ನು ಇಷ್ಟಪಟ್ಟು ಅವರು ಹತ್ತಿರವಾಗಿದ್ದಾರೋ ಆ ವ್ಯಕ್ತಿಯೇ ಅಲ್ಲಿರುವುದಿಲ್ಲ. ಆಗ ಇವರ ಜೊತೆ ಅವರಿಗೇನು ಕೆಲಸ ಇರುತ್ತದೆ ಹೇಳಿ? ಹೀಗಾಗಿಯೇ ದಯವಿಟ್ಟು ನೀವು ನೀವಾಗಿರಿ. ನಿಮ್ಮನ್ನು ಇಷ್ಟಪಡುವವರು ಆಗ ಮಾತ್ರ ಜತೆಯಲ್ಲಿರಲಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ನನ್ನ ಪ್ರಕಾರ, ಬದಲಾವಣೆ ಜಗದ ನಿಯಮ ಎಂದಾದರೆ, ಅಲ್ಲೂ ಕೂಡ ಎಲ್ಲವೂ ಬದಲಾಗುವುದಿಲ್ಲ. ಕೆಲವೊಂದು ಬದಲಾಗುತ್ತದೆ, ಕೆಲವು ಬದಲಾದರೆ ಅದರಲ್ಲೂ ಒಂದು ನಿಯಮ ಇರುತ್ತದೆ. ನಾಯಿ ಹುಲಿಯಾಗುವುದಿಲ್ಲ, ಹಲಿ ಸಿಂಹವಾಗುವುದಿಲ್ಲ. ಹೀಗಾಗಿ, ನೀವು ನೀವಾಗಿದ್ದು ಇಂದು ನಿನ್ನೆಗಿಂತ, ನಾಳೆ ಇಂದಿಗಿಂತ ಹೆಚ್ಚು ಚೆನ್ನಾಗಿರಿ, ಅಪ್ಡೇಟ್ ಆಗುತ್ತಿರಿ ಎಂದು ಹೇಳಲು ಬಯಸುತ್ತೇನೆ' ಎಂದಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ.

ಅಂದಹಾಗೆ ಪ್ರಿಯಾಂಕಾ ಆಗಾಗ ಸಂದರ್ಶನಗಳಲ್ಲಿ ಮಾತನಾಡುತ್ತ ಜೀವನದ ಬಗ್ಗೆ ಹೇಳುತ್ತಿರುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net