ಸ್ಟ್ರಾಬೆರಿ ಮೂನ್ ಗೋಚರ ಇಂದು! ಮಿಸ್​ ಮಾಡ್ದೇ ನೋಡಿ ಇಂದು ಬಾಹ್ಯಾಕಾಶದ ಈ ಕೌತುಕ..

moon
Published on

ನವದೆಹಲಿ: ಸೂರ್ಯ, ಚಂದ್ರ, ಗ್ರಹ, ನಕ್ಷತ್ರಗಳು, ಭೂಮಿ ತಿರುಗುವ ಚಲನೆ, ಬಾಹ್ಯಾಕಾಶದ ಕೌತುಕ ಬಗೆದಷ್ಟು ಹೆಚ್ಚಾಗುತ್ತದೆ. ಇದೀಗ ಜೂನ್ 21ರ ರಂದು ಆಗಸದಲ್ಲಿ ವಿಶೇಷವಾಗಿ ಸ್ಟ್ರಾಬೆರಿ ಮೂನ್ ಗೋಚರಿಸಲಿದೆ. ಪೂರ್ಣ ಚಂದಿರ ಆಗಸದಲ್ಲಿ ಕಾಣಿಸಲಿದ್ದು, ಬಣ್ಣದಲ್ಲೂ ಎಲ್ಲರನ್ನೂ ಆಕರ್ಷಿಸಲಿದೆ.

ಚಂದ್ರ ಸಾಮಾನ್ಯವಾಗಿ ಕೆಂಪು ಅಥವಾ ಪಿಂಕ್ ಬಣ್ಣದಲ್ಲಿ ಗೋಚರಿಸಲಿದೆ. ಆದರೆ ಗುರುವಾರ ರಾತ್ರಿ ಚಂದ್ರ ಸಾಮಾನ್ಯಕ್ಕಿಂತ ತುಸು ಹೆಚ್ಚಾದ ಹಳದಿ ಮಿಶ್ರಿತ ಚಿನ್ನದ ಬಣ್ಣದಲ್ಲಿ ಕಂಗೊಳಿಸಲಿದೆ.

ಇದಕ್ಕೆ ಸ್ಟ್ರಾಬೆರಿ ಮೂನ್, ಹಾಟ್ ಮೂನ್ , ಹನಿಮೂನ್, ರೋಸ್ ಮೂನ್ ಎಂದೂ ಕರೆಯುತ್ತಾರೆ. ಉತ್ತರ ಅಮೆರಿಕದಲ್ಲಿ ಸ್ಟ್ರಾಬೆರಿ ಮೂನ್ ಗೋಚರಿಸಿದ ಬಳಿಕ ಸ್ಟ್ರಾಬೆರಿ ಹಣ್ಣಿನ ಬೆಳೆ ಬೆಳೆಯಲು ಆರಂಭಿಸುತ್ತಾರೆ ಎಂದು ಇತಿಹಾಸ ಹೇಳುತ್ತದೆ. ಜೂನ್ ತಿಂಗಳಲ್ಲಿ ಅಂತಿಮ ವಾರದಲ್ಲಿ ಸ್ಟ್ರಾಬೆರಿ ಮೂನ್ ಗೋಚರಿಸಲಿದೆ. ಇಲ್ಲಿಂದ ಬಳಿಕ ಮಳೆ ತೀವ್ರತೆ ಹೆಚ್ಚಾಗಲಿದೆ. ಕೃಷಿ ಚಟುವಟಿಕೆಗಳು ಚುರುಕುಗೊಳ್ಳಲಿದೆ. ಇದೇ ವೇಳೆ ಗುಲಾಬಿ ಗಿಡಗಳು ಹೆಚ್ಚಾಗಿ ಹೂವು ಬಿಡುತ್ತದೆ ಎನ್ನಲಾಗುತ್ತದೆ. ಹೀಗಾಗಿಸ್ಟ್ರಾಬೆರಿ ಮೂನ್ ಎಂದು ಕರೆಯುತ್ತಾರೆ.

ಉತ್ತರ ಅಮೆರಿಕ ಹಾಗೂ ಯೂರೋಪ್ ದೇಶಗಳಲ್ಲಿ ಸ್ಟ್ರಾಬೆರಿ ಮೂನ್ ಬಳಿಕ ಮದುವೆಗಳು ಹೆಚ್ಚಾಗಿ ನಡೆಯುತ್ತವೆ. ಮದುವೆ ಬಳಿಕ ನವ ಜೋಡಿ ಹನಿಮೂನ್‌ಗೆ ತೆರಳುತ್ತಾರೆ. ಅಮೆರಿಕ ಖಗೋಳ ವಿಜ್ಞಾನಿ ಜ್ಯಾಕಿ ಪ್ರಕಾರ, ಆಯಾ ಭಾಗದಲ್ಲಿ ಸ್ಟ್ರಾಬೆರಿ ಮೂನ್‌ಗೆ ಹಲವು ಹೆಸರುಗಳಿವೆ. ಅಲ್ಲಿನ ಸಂಸ್ಕೃತಿ, ಸಂಪ್ರದಾಯ, ಹಬ್ಬಗಳಿಗೆ ಅನುಗುಣವಾಗಿ ಹಲವು ಹೆಸರುಗಳಿವೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net