

ನವದೆಹಲಿ: ಪುಣೆಯ ಜಂಬೂಲ್ ವಾಡಿ ಸ್ವಾಮಿ ನಾರಾಯಣ ದೇವಸ್ಥಾನದ ಬಳಿ ಯುವತಿಯೊಬ್ಬಳು ಸಾಹಸ ಪ್ರದರ್ಶಿಸಿದ್ದಾಳೆ. ಹಾನಿಗೊಳಗಾದ ಕಟ್ಟಡದ ಮೇಲಕ್ಕೆ ಯುವತಿ ಮತ್ತು ಇಬ್ಬರು ಯುವಕರು ಹತ್ತಿದ್ದಾರೆ. ಒಬ್ಬ ಕ್ಯಾಮೆರಾ ಹಿಡಿದಿದ್ದರೆ, ಇನ್ನೊಬ್ಬ ಕಟ್ಟಡದ ಮೇಲೆ ನೇರವಾಗಿ ಮಲಗಿದ್ದಾನೆ.
ಹುಡುಗಿ ಸಾಹಸ ಮಾಡಲು ಪ್ರಾರಂಭಿಸಿ, ಮೇಲಿಂದ ಕೆಳಕ್ಕೆ ಇಳಿದಿದ್ದು, ಆ ವೇಳೆ ಯುವಕ ಯುವತಿಯ ಕೈ ಹಿಡಿದಿದ್ದ. ಆಗ ಒಂದು ಕೈಯಿಂದ ಹುಡುಗನ ಕೈ ಹಿಡಿದುಕೊಂಡು ವಿಡಿಯೋ ತೆಗೆದಿದ್ದಾಳೆ.
ರೀಲುಗಳ ಮೇಲಿನ ಕ್ರೇಜ್ ಹುಡುಗಿ ಮತ್ತು ಇಬ್ಬರು ಹುಡುಗರು ಇಂತಹ ಸಾಹಸ ಎನ್ನುವುದಕ್ಕಿಂತ ಹುಚ್ಚುತನ ಪ್ರದರ್ಶನಕ್ಕೆ ಇಳಿದಿದ್ದಾರೆ. ಕೆಳಗೆ ಬಂಡೆಗಳಿದ್ದು, ಯುವತಿ ಅಲ್ಲಿಂದ ಕೆಳಗೆ ಬಿದ್ದರೆ ಪರಿಸ್ಥಿತಿಯೇ ಬೇರೆಯಾಗುತ್ತಿತ್ತು. ವಿಡಿಯೋಗಾಗಿ ಯುವಕರು ಈ ರೀತಿ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೀಡಿಯೊಗಾಗಿ ಇದು ದೊಡ್ಡ ಸಾಹಸವಾಗಿತ್ತು. ಇದರ ವೀಡಿಯೋ ನೆಟ್ನಲ್ಲಿ ವೈರಲ್ ಆಗುತ್ತಿದೆ.
ರೀಲ್ಸ್ ಅದ್ಯಾವ ಗಳಿಗೆಯಲ್ಲಿ ಪ್ರಾರಂಭವಾಯಿತೋ..ಆ ಕ್ಷಣದಿಂದ ಪ್ರತಿಯೊಬ್ಬರೂ ಮೊಬೈಲ್ನಲ್ಲಿ ಕ್ಯಾಮೆರಾ ಆನ್ ಮಾಡಿ ಹುಚ್ಚುತನದ ಉತ್ತುಂಗವನ್ನು ತಲುಪುತ್ತಿದ್ದಾರೆ. ವೀಡಿಯೊಗಳು ಮತ್ತು ರೀಲ್ಗಳಿಗಾಗಿ ಏನನ್ನೂ ಬೇಕಾದರೂ ಮಾಡಲು ಹಿಂಜರಿಯುತ್ತಿಲ್ಲ. ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ. ಇದಕ್ಕೆ ಉತ್ತಮ ನಿದರ್ಶನ ಈ ವೀಡಿಯೋ ಎನ್ನಬಹುದು.