ಸಿಂಪಲ್ ಆಗಿ ಕಾಣಿಸಿಕೊಂಡ ದೀಪಿಕಾ.. ಧರಿಸಿದ್ದ ಒಡವೆ ಬೆಲೆ ಕೇಳಿದ್ರೆ ಹೌಹಾರ್ತೀರಾ!

kalki deepika
Published on

ಹೈದರಾಬಾದ್​: 'ಕಲ್ಕಿ 2898 ಎಡಿ' ಪ್ರೀ-ರಿಲೀಸ್ ಈವೆಂಟ್‌ನಲ್ಲಿ ದೀಪಿಕಾ ಪಡುಕೋಣೆ ಅತಿಲೋಕಸುಂದರಿಯಂತೆ ಕಂಗೊಳಿಸಿದಳು. ಕಪ್ಪು ಬಣ್ಣದ ಗೌನ್, ಒಂದು ಬ್ರೇಸ್‌ಲೆಟ್ ಮತ್ತು ಹೀಲ್ಸ್ ಇವಿಷ್ಟೇ ಧರಿಸಿ ಸಿಂಪಲ್ ಆಗಿ ರೆಡಿಯಾಗಿ ಬಂದಿದ್ದಳು. ಆದರೆ ದೀಪಿಕಾ ಧರಿಸಿದ್ದ ಬಟ್ಟೆ ಮತ್ತು ಬ್ರೇಸ್‌ಲೆಟ್ ಬೆಲೆ ಕೇಳಿದ್ರೆ ಹೌಹಾರ್ತೀರಿ.

ದೀಪಿಕಾ ಪಡುಕೋಣೆಯ ಚಿತ್ರಗಳು ಎಂದಿನಂತೆ ವೈರಲ್ ಆಗಿವೆ. ಆಕೆಯ ಸೌಂದರ್ಯ ಈ ಪ್ರಗ್ನೆನ್ಸಿ ಸಂದರ್ಭದಲ್ಲಿ ಮತ್ತಷ್ಟು ಹೆಚ್ಚಿದೆ. ಆಕೆಯ ಹೊಟ್ಟೆಯಲ್ಲಿರುವ ಬೇಬಿ ಹೆಣ್ಣೋ, ಗಂಡೋ? ಧರಿಸಿರುವ ಹೀಲ್ಸ್ ರೇಟ್​ ಎಷ್ಟಿರಬಹುದು? ಇಂಥ ವಿಚಾರಗಳು ಇಂಟರ್ನೆಟ್‌ನಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

ಇವೆಲ್ಲದರೊಂದಿಗೆ ಮತ್ತೊಂದು ವಿಷಯ ಇದೀಗ ನೆಟ್ಟಿಗರ ಗಮನ ಸೆಳೆದಿರುವುದಷ್ಟೇ ಅಲ್ಲ, ಅವರನ್ನು ಅವಾಕ್ಕಾಗಿಸಿದೆ- ಅದೇ ನಟಿ ಧರಿಸಿದ ಬಟ್ಟೆ ಮತ್ತು ಒಡವೆಗಳ ಬೆಲೆ.

ಹೌದು, ದೀಪಿಕಾ ಚಿತ್ರದ ಪ್ರಮೋಶನ್ ಕಾರ್ಯಕ್ರಮಕ್ಕಾಗಿ ಧರಿಸಿದ್ದು ಕಪ್ಪು ಬಣ್ಣದ ಗೌನ್, ಬ್ರೇಸ್‌ಲೆಟ್ ಮತ್ತು ಹೈ ಹೀಲ್ಸ್. ಸಹಜವಾಗಿ ಸರಳವಾಗಿ ಕಾಣುವಂಥ ಉಡುಗೆ. ಆದರೆ, ಇದರ ಬೆಲೆ ಮಾತ್ರ ಸರಳವಾಗಿಲ್ಲ.

ಲೋವೆ ಅಧಿಕೃತ ವೆಬ್‌ಸೈಟ್‌ನಲ್ಲಿ ದೀಪಿಕಾ ಧರಿಸಿದ್ದ ಉಡುಗೆ ವೆಚ್ಚ ತಿಳಿಸಲಾಗಿದೆ. ಈ ಕಾಟನ್​ ಅನಗ್ರಾಮ್ ಪೆಬಲ್ ಡ್ರೆಸ್‌ನ ಬೆಲೆ ಬರೋಬ್ಬರಿ 1ಲಕ್ಷ 14ಸಾವಿರ ರೂ.ಆಗಿದೆ. ಇನ್ನು ಆಕೆ ಕೈಲಿ ಹೊಳೆಯುವ ಕಾರ್ಟಿಯರ್ ಬಳೆಗಳಿದ್ದು, ಚಿನ್ನ ಮಿಶ್ರಿತ ವಜ್ರದ ಆಭರಣವಾಗಿದೆ. ಆ ಮೂರು ಬಳೆಗಳ ಬೆಲೆ 1.16 ಕೋಟಿ ರೂ. ಆಗಿದೆ.

ಇನ್ನು ದೀಪಿಕಾ ಧರಿಸಿರುವ ಉಂಗುರಗಳು ಮತ್ತು ಕಿವಿಯೋಲೆಗಳು ಕೂಡಾ ಕಾರ್ಟಿಯರ್‌ದ್ದೇ ಆಗಿದ್ದು, ಅವುಗಳ ಬೆಲೆಯೂ ಲಕ್ಷಾಂತರ ರೂ.ಬೆಲೆಯದ್ದಾಗಿವೆ.

ದೀಪಿಕಾ ಪಡುಕೋಣೆ, ಪ್ರಭಾಸ್, ಅಮಿತಾಬ್ ಬಚ್ಚನ್ ಅಭಿನಯದ ಕಲ್ಕಿ 2898 ಎಡಿ ಚಿತ್ರದ ಟ್ರೇಲರ್ ಬಹು ನಿರೀಕ್ಷೆ ಹುಟ್ಟಿಸಿದ್ದು, ಚಿತ್ರವು ಜೂ.27ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net