ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಅನಿರೀಕ್ಷಿತ ಧನ ಲಾಭ

Nitya-Bhavishya-vvani-1-2-1-1
Published on

ಮೇಷ: ಬ್ಯಾಂಕ್​ನಿಂದ ನೆರವು ಸಿಗಲಿದೆ. ಐಸ್ಕ್ರೀಮ್ ತಯಾರಿಕೆಯ ಉದ್ಯಮದಲ್ಲಿ ಪ್ರಗತಿ. ನಿಮ್ಮಲ್ಲಿರುವ ಪ್ರತಿಭೆಗೆ ಉತ್ತೇಜನ ಸಿಗಲಿದೆ. ಶುಭ ಸಂಖ್ಯೆ: 1

ವೃಷಭ: ಉಳಿತಾಯ ಯೋಜನೆ ಮೇಲೆ ಹಣ ತೊಡಗಿಸುವಿರಿ. ಸರಕಾರಿ ಕೆಲಸಗಾರರಿಗೆ ವರ್ಗಾವಣೆ. ಕೊಟ್ಟ ಜವಾಬ್ದಾರಿ ಯಶಸ್ವಿಯಾಗಿ ನಿಭಾಯಿಸುವಿರಿ. ಶುಭ ಸಂಖ್ಯೆ: 2

ಮಿಥುನ: ಸ್ನೇಹಿತರೊಂದಿಗೆ ವಾಗ್ವಾದ. ಆರ್ಥಿಕವಾಗಿ ಹೊಸ ಸವಾಲು. ಸರಕಾರಿ ವೈದ್ಯರಿಗೆ ವರ್ಗಾವಣೆ. ತಾಂತ್ರಿಕ ವಿದ್ಯಾರ್ಥಿಗಳಿಗೆ ಪ್ರಗತಿ. ಶುಭ ಸಂಖ್ಯೆ: 2

ಕಟಕ: ಉದ್ಯೋಗದಲ್ಲಿ ಉತ್ತಮ ಬೆಳವಣಿಗೆ. ಹೋಟೆಲ್ ಉದ್ಯಮದಲ್ಲಿ ಆದಾಯ. ಸದ್ಯದಲ್ಲಿ ಸೂಕ್ತ ಪ್ರತಿಫಲ. ಕುಟುಂಬದಲ್ಲಿ ಉತ್ಸಾಹದ ವಾತಾವರಣ. ಶುಭ ಸಂಖ್ಯೆ: 6

ಸಿಂಹ: ವ್ಯವಹಾರದ ಬದಲಾವಣೆಯಿಂದ ಆದಾಯ ಹೆಚ್ಚಲಿದೆ. ಹೊಸ ಉದ್ಯಮದ ಸ್ಥಾಪನೆಗೆ ನಿರ್ಧಾರ. ಕಟ್ಟಡ ನಿರ್ವಣದ ತೊಡಕು ನಿವಾರಣೆ. ಶುಭ ಸಂಖ್ಯೆ: 6

ಕನ್ಯಾ: ಮನೆಯಲ್ಲಿ ಶುಭ ಕಾರ್ಯದ ಸಂಭ್ರಮ. ಹಳೆ ಸ್ನೇಹಿತೆ ಭೇಟಿಯಿಂದ ಸಂತೋಷ. ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ರಾಗಿ, ಜೋಳ ಕೃಷಿಕರಿಗೆ ಲಾಭ. ಶುಭ ಸಂಖ್ಯೆ: 1

ತುಲಾ: ಅನಿರೀಕ್ಷಿತ ಧನ ಲಾಭ. ಗುರು ಹಿರಿಯರಿಂದ ಮಾರ್ಗದರ್ಶನ ಗೃಹಲಂಕಾರಕ್ಕೆ ಹಣ ಖರ್ಚಾಗಲಿದೆ. ನಾಟ್ಯ ಕಲಾವಿದರಿಗೆ ಹೆಚ್ಚಿದ ಬೇಡಿಕೆ. ಶುಭ ಸಂಖ್ಯೆ: 1

ವೃಶ್ಚಿಕ: ಸಾಮಾಜಿಕ ತಾಣದ ಕಾರಣದಿಂದಾಗಿ ಅಶಾಂತಿ. ಸಾರ್ವಜನಿಕವಾಗಿ ನಿಮ್ಮ ಹಿರಿತನಕ್ಕೆ ಬೆಲೆ ಸಿಗಲಿದೆ. ದಿನಸಿ ಪದಾರ್ಥಗಳ ಮಾರಾಟದಲ್ಲಿ ಲಾಭ. ಶುಭ ಸಂಖ್ಯೆ: 7

ಧನಸ್ಸು: ಸ್ವಯಂಕೃತ ಅಪರಾಧಕ್ಕೆ ಪಶ್ಚಾತ್ತಾಪ ಪಡುವಿರಿ. ಸಣ್ಣ ಪ್ರಮಾಣದ ಹೂಡಿಕೆಯಲ್ಲಿ ಮನಸ್ಸು. ದೈಹಿಕ ಕಸರತ್ತಿನ ತರಬೇತುದಾರರಿಗೆ ಹೆಚ್ಚಿನ ಆದಾಯ. ಶುಭ ಸಂಖ್ಯೆ: 2

ಮಕರ: ಸಾರಿಗೆ ಕ್ಷೇತ್ರದ ನೌಕರರಿಗೆ ಬಡ್ತಿ. ಕೆಲಸದ ಒತ್ತಡ ಕಡಿಮೆಯಾಗಲಿದೆ. ಕೃಷಿ ಉತ್ಪನ್ನಗಳಿಗೆ ಒಳ್ಳೆಯ ಬೆಲೆ ಸಿಗಲಿದೆ. ಶುಭ ಸಂಖ್ಯೆ: 8

ಕುಂಭ: ತೈಲ ಉತ್ಪನ್ನಗಳ ಮಾರಾಟಗಾರರಿಗೆ ಲಾಭ. ಹೊಸ ಪೆಟ್ರೋಲ್ ಬಂಕ್ ಸ್ಥಾಪನೆಗೆ ನಿರ್ಧಾರ. ಔಷಧ ಖರೀದಿ ಮೂಲಕ ಹಣ ಲಾಭ. ಶುಭ ಸಂಖ್ಯೆ: 5

ಮೀನ: ಸ್ವಂತ ಉದ್ಯೋಗದವರಿಗೆ ಆರ್ಥಿಕ ಪ್ರಗತಿ. ಕಿರು ಚಿತ್ರ ಕಲಾವಿದರಿಗೆ ಕೀರ್ತಿ. ಆಸ್ತಿ ವಿಭಾಗವಾಗಲಿದೆ. ಅವಿವಾಹಿತರಿಗೆ ಕಂಕಣ ಬಲ. ಶುಭ ಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net