ವಿಶ್ವಾಮತ ಗೆದ್ದ ನಿತೀಶ್​ ಕುಮಾರ್​; ಬಿಹಾರದಲ್ಲಿ ಎನ್​ಡಿಎ ಪಾರುಪತ್ಯ

Nitish Kumar
Published on

ಪಟ್ನಾ: ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರ ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದಿದೆ. ಪ್ರತಿಪಕ್ಷಗಳ ಸಭಾತ್ಯಾಗದ ಹೊರತಾಗಿಯೂ ಜಡಿಯು-ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟ ವಿಶ್ವಾಸಮತ ಸಾಬೀತುಪಡಿಸಿದೆ.

243 ಸದಸ್ಯ ಬಲದ ಹೊಂದಿರುವ ಬಿಹಾರ ವಿಧಾನಸಭೆಯಲ್ಲಿ ಬಿಜೆಪಿ-ಜೆಡಿ(ಯು) ಮೈತ್ರಿಕೂಟದ ಪರ 129 ಸದಸ್ಯರು ಮತ ಚಲಾಯಿಸಿದ್ದಾರೆ. ಮೂವರು ಆರ್​ಜೆಡಿ ಶಾಸಕರು ಕೂಡ ಸರ್ಕಾರದ ಪರ ಅಡ್ಡಮತದಾನ ಮಾಡಿದ್ದಾರೆ. ಇನ್ನುಳಿದಂತೆ ಒಬ್ಬ ಪಕ್ಷೇತರ ಈ ಮೈತ್ರಿಕೂಟವನ್ನು ಬೆಂಬಲಿಸಿದ್ದಾರೆ.

ವಿರೋಧಿ ಕೂಟವಾಗಿರುವ ರಾಷ್ಟ್ರೀಯ ಜನತಾದಳ ಮತ್ತು ಕಾಂಗ್ರೆಸ್​ 114 ಸ್ಥಾನಗಳನ್ನು ಹೊಂದಿದ್ದು, ನಿತೀಶ್‌ ಕುಮಾರ್‌ ವಿಶ್ವಾಸಮತ ಸಾಬೀತುಪಡಿಸುತ್ತಿದಂತೆ ವಿರೋಧ ಪಕ್ಷದ ಸದಸ್ಯರು ವಿಧಾನಸಭೆಯಿಂದ ಹೊರನಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net