

ಬೆನೋನಿ: ಇಲ್ಲಿನ ವಿಲೋಮೂರ್ ಪಾರ್ಕ್ನಲ್ಲಿ ನಡೆದ ಕಿರಿಯರ ಏಕದಿನ ವಿಶ್ವಕಪ್ ಫಿನಾಲೆಯಲ್ಲಿ ಟೀಂ ಇಂಡಿಯಾ ಸೋತಿದ್ದು, ಆಸ್ಟ್ರೇಲಿಯಾ ಕಪ್ಅನ್ನು ನಾಲ್ಕನೇ ಬಾರಿಗೆ ಮುಡಿಗೇರಿಸಿಕೊಂಡಿದೆ. ಈ ಮೂಲಕ ಒಂದೇ ವರ್ಷದ ಅವಧಿಯಲ್ಲಿ ಎರಡು ಬಾರಿ ವಿಶ್ವಕಪ್ ಗೆದ್ದ ಸಾಧನೆ ಮಾಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಹರ್ಜಾಸ್ ಸಿಂಗ್ (55 ರನ್, 64 ಎಸೆತ, 3 ಬೌಂಡರಿ, 3 ಸಿಕ್ಸರ್), ಆಲಿವರ್ ಪೀಕ್ (46 ರನ್, 43 ಎಸೆತ, 2 ಬೌಂಡರಿ, 1 ಸಿಕ್ಸರ್) ಬಿರುಸಿನ ಬ್ಯಾಡಿಂಗ್ ಫಲವಾಗಿ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 253 ರನ್ ಗಳಿಸಿತ್ತು. ಟೀಂ ಇಂಡಿಯಾ ಪರ ರಾಜ್ ಲಿಂಬಾನಿ (10-0-38-3), ನಮನ್ ತಿವಾರಿ (9-0-63-2), ಸೌಮಿ ಪಾಂಡೆ (10-0-41-1), ಮುಶೀರ್ ಖಾನ್ (9-0-46-1) ರನ್ ನೀಡಿ ವಿಕೆಟ್ ಪಡೆದಿದ್ದಾರೆ.
254 ರನ್ಗಳ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ ಆದರ್ಶ್ ಸಿಂಗ್ (47 ರನ್, 77 ಎಸೆತ, 4 ಬೌಂಡರಿ, 1 ಸಿಕ್ಸರ್), ಮುರುಗನ್ ಅಭಿಷೇಕ್ (42 ರನ್, 46 ಎಸೆತ, 5 ಬೌಂಡರಿ, 1 ಸಿಕ್ಸರ್) ನೆರವಿನ ಫಲವಾಗಿ 43.5 ಓವರ್ಗಳಲ್ಲಿ 174 ರನ್ಗಳಿಗೆ ಆಲೌಟ್ ಆಯಿತು. ಆಸ್ಟ್ರೇಲಿಯಾ ಪರ ಮಹ್ಲಿ ಬಿಯರ್ಡ್ಮ್ಯಾನ್ (7-2-15-3), ರ‍್ಯಾಫ್ ಮ್ಯಾಕ್ಮಿಲ್ಲನ್ (10-0-43-3), ಕ್ಯಾಲೂಮ್ ವೈಡ್ಲರ್ (10-2-35-2), ಚಾರ್ಲಿ ಆ್ಯಂಡರ್ಸನ್ (9-0-42-1), ಟಾಮ್ ಸ್ಟ್ರೇಕರ್ (7.5-1-32-1) ರನ್ ನೀಡಿ ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.