

ನವದೆಹಲಿ: ರಾಜ್ಯಸಭಾ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಕರ್ನಾಟಕದಿಂದ ಬಾಗಲಕೋಟೆ ಮೂಲದ ನಾರಾಯಣ ಭಾಂಡಗೆ ಎಂಬುವವರಿಗೆ ಟಿಕೆಟ್ ನೀಡಿದೆ.
ಬಿಜೆಪಿಯ ರಾಜೀವ್ ಚಂದ್ರಶೇಖರ್, ಕಾಂಗ್ರೆಸ್ನ ಜಿಸಿ ಚಂದ್ರಶೇಖರ್, ಎಲ್. ಹನುಮಂತಯ್ಯ, ನಸೀರ್ ಅಹಮದ್ ರವರ ಅವಧಿ ಫೆಬ್ರವರಿಗೆ ಮುಕ್ತಾಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ನಾಲ್ಕು ಸ್ಥಾನಗಳಿಗೆ ಫೆಬ್ರವರಿ 27ರಂದು ಚುನಾವಣೆ ನಡೆಯಲಿದೆ.
ಕರ್ನಾಟಕ ಮಾತ್ರವಲ್ಲದೆ ಬಿಹಾರ (02), ಉತ್ತರಪ್ರದೇಶ (07), ಹರಿಯಾಣ (01), ಛತ್ತೀಸ್ಗಢ (01), ಉತ್ತರಾಖಂಡ (01), ಪಶ್ಚಿಮ ಬಂಗಾಳ (01) ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.
ಉತ್ತರ ಪ್ರದೇಶ (10), ಬಿಹಾರ್ (06), ಮಹಾರಾಷ್ಟ್ರದಲ್ಲಿ (06), ಮಧ್ಯಪ್ರದೇಶ (05), ಪಶ್ಚಿಮ ಬಂಗಾಳ (05), ಗುಜರಾತ್ (04), ಆಂಧ್ರ ಪ್ರದೇಶದ (03), ರಾಜಸ್ಥಾನ (03) ಹರಿಯಾಣ, ಚತ್ತೀಸ್ಗಢ, ಹಿಮಾಚಲ ಪ್ರದೇಶ, ಉತ್ತರಾಖಂಡದಲ್ಲಿ ಒಂದು ಸ್ಥಾನ, ಸ್ಥಾನ, ತೆಲಂಗಾಣ, ಒಡಿಸ್ಸಾ ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆಯನ್ನು ಘೋಷಣೆ ಮಾಡಲಾಗಿದೆ.
ಧರ್ಮಶೀಲಾ ಗುಪ್ತಾ (ಬಿಹಾರ), ಡಾ.ಭೀಮ್ ಸಿಂಗ್ (ಬಿಹಾರ). ರಾಜಾ ದೇವೇಂದ್ರ ಪ್ರತಾಪ್ ಸಿಂಗ್ (ಛತ್ತೀಸಗಢ್) ಸುಭಾಷ್ ಬರಲಾ (ಹರಿಯಾಣ) ನಾರಾಯಾಣ ಭಾಂಡಗೆ (ಕರ್ನಾಟಕ) ಆರ್ಪಿಎನ್ ಸಿಂಗ್ (ಉತ್ತರ ಪ್ರದೇಶ), ಸುಭಾಂಶು ತ್ರಿವೇದಿ (ಉತ್ತರ ಪ್ರದೇಶ), ಚೌಧರಿ ತೇಜ್ವೀರ್ ಸಿಂಗ್: (ಉತ್ತರ ಪ್ರದೇಶ), ಸಾಧನಾ ಸಿಂಗ್ (ಉತ್ತರ ಪ್ರದೇಶ), ಅಮರಪಾಲ್ ಮೌರ್ಯ (ಉತ್ತರ ಪ್ರದೇಶ), ಸಂಗೀತಾ ಬಲ್ವಂತ್ (ಉತ್ತರ ಪ್ರದೇಶ), ನವೀನ್ ಜೈನ್ (ಉತ್ತರ ಪ್ರದೇಶ), ಮಹೇಂದ್ರ ಭಟ್ (ಉತ್ತರಾಖಂಡ್), ಸಮಿಕಾ ಭಟ್ಟಾಚಾರ್ಯ (ಪಶ್ಚಿಮ ಬಂಗಾಳ)