More

    300ಕ್ಕೂ ಅಧಿಕ ಬಾರಿ ಸಂಚಾರ ನಿಯಮ ಉಲ್ಲಂಘನೆ; ದ್ವಿಚಕ್ರ ವಾಹನ ಸವಾರನಿಗೆ ಬಿತ್ತು ಬಾರಿ ದಂಡ

    ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಸಂಚಾರಿ ನಿಯಮಗಳಲ್ಲಿ ಬಾರಿ ಬದಲಾವಣೆಗಳನ್ನು ತರಲಾಗಿದ್ದು, ನಿಯಮ ಪಾಲಿಸದೆ ವಾಹನ ಚಾಲನೆ ಮಾಡುವವರಿಗೆ ಪೊಲೀಸರು ದಂಡದ ವಿಧಿಸುವ ಮೂಲಕ ಆಗಿಂದಾಗೆ ಬಿಸಿಯನ್ನು ಮುಟ್ಟಿಸುತ್ತಿರುತ್ತಾರೆ. ಇಷ್ಟಾದರೂ ಬುದ್ದಿ ಕಲಿಯದ ಕೆಲವು ತಾವು ನಡೆದಿದ್ದೆ ಹಾದಿ ಎಂದುಕೊಂಡಿರುತ್ತಾರೆ.

    ಇದೀಗ ಇದೇ ರೀತಿಯ ಘಟನೆಯೊಂದು ಬೆಂಗಳೂರು ನಗರದಲ್ಲಿ ನಡೆದಿದ್ದು, ವ್ಯಕ್ತಿಯೊಬ್ಬ 300ಕ್ಕೂ ಹೆಚ್ಚು ಬಾರಿ ಸಂಚಾರಿ ನಿಯಮ ಉಲ್ಲಂಘಿಸುವ ಮೂಲಕ ಪೇಚಿಗೆ ಸಿಲುಕಿದ್ದಾನೆ. ಈತನಿಗೆ ವಿಧಿಸಿರುವ ದಂಡದ ಮೊತ್ತ ಎಲ್ಲರ ಗಮನ ಸೆಳೆದಿದ್ದು, ಇದೊಂದು ಎಚ್ಚರಿಕೆಯ ಪಾಠ ಎಂದು ಹಲವರು ಅಭಿಪ್ರಾತಯಪಟ್ಟಿದ್ದಾರೆ.

    ಬೆಂಗಳೂರಿನ ಓರ್ವ ಸವಾರ ಹೆಲ್ಮಟ್ ಧರಿಸದೆ, ಸಿಗ್ನಲ್ ಜಂಪ್​​ ಮಾಡಿ, ಒನ್ ವೇಯಲ್ಲಿ ಮೊಬೈಲ್‌ನಲ್ಲಿ ಮಾತಾಡಾಡಿಕೊಂಡು ವಾಹನ ಚಾಲನೆ ಮಾಡಿದ್ದಾನೆ. ಈತ ಬರೊಬ್ಬರಿ 300ಕ್ಕೂ ಹೆಚ್ಚು ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಈ ಹಿನ್ನೆಲೆ ಈತನಿಗೆ 3.20 ಲಕ್ಷ ರೂಪಾಯಿ ದಂಡವನ್ನು ಸಂಚಾರಿ ಪೊಲೀಸರು ವಿಧಿಸಿದ್ದಾರೆ.

    Sudhamanagar

    ಇದನ್ನೂ ಓದಿ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಜಿಪಿಎಸ್ ಆಧಾರಿತ ಟೋಲಿಂಗ್ ವ್ಯವಸ್ಥೆ: ನಿತಿನ್​ ಗಡ್ಕರಿ

    ಬೆಂಗಳೂರಿನ ಸುಧಾಮನಗರ ನಿವಾಸಿ ವೆಂಕಟರಾಮನ್ ಎಂಬುವರ KA-05-KF-7969 ನಂಬರ್‌ನ ಹೋಂಡಾ ಆಕ್ಟಿವಾ ಸ್ಕೂಟರ್‌ನಲ್ಲಿ 300ಕ್ಕೂ ಹೆಚ್ಚು ಬಾರಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಾರೆ. ಇದಕ್ಕೆ ಸಂಚಾರಿ ಪೊಲೀಸರು 3.20 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ. ಇವರು ಎಸ್​ಆರ್ ನಗರ, ವಿಲ್ಸನ್ ಗಾರ್ಡನ್ ಸೇರಿದಂತೆ ನಗರದ ವಿವಿಧ ಪ್ರದೇಶಗಳಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಾರೆ.

    ವೆಂಕಟರಾಮನ್​ ಅವರು 3 ಲಕ್ಷ ರೂಪಾಯಿ ದಂಡ ಕಟ್ಟಬೇಕಾಗಿರುವ ಹಿನ್ನೆಲೆ ಸಂಚಾರಿ ಪೊಲೀಸರು ಅವರ ಮನೆಗೆ ತೆರಳಿದ್ದು, ದಂಡ ಕಟ್ಟುವಂತೆ ಸೂಚಿಸಿದ್ದಾರೆ. ಇದಕ್ಕೊಪದ ಸವಾರ ಇಷ್ಟು ದಂಡ ಕಟ್ಟಲು ಆಗಲ್ಲ. ಬೇಕಿದ್ದರೆ ಬೈಕ್ ತೆಗೆದುಕೊಂಡು ಹೋಗಿ ಎಂದಿದ್ದಾರೆ. ಆಗ ಪೊಲೀಸರು ನಮಗೆ ಬೈಕ್ ಬೇಡ,​ ದಂಡ ಕಟ್ಟಿ, ಇಲ್ಲ ಕೇಸ್ ಮಾಡುತ್ತೇವೆ ಎಂದಿದ್ದಾರೆ. ಸದ್ಯ ಸಂಚಾರಿ ಪೊಲೀಸರು ನೋಟಿಸ್ ನೀಡಿದ್ದು, ದಂಡ ಕಟ್ಟಲು ಸವಾರ ಸಮಯ ಕೇಳಿದ್ದಾರೆ ಎಂದು ತಿಳಿದು ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts