More

    ವಾಜಪೇಯಿ ಅನುಯಾಯಿಗೆ ಒಲಿಯಿತು ರಾಜ್ಯಸಭಾ ಟಿಕೆಟ್​; ಇಲ್ಲಿದೆ ನೋಡಿ ವ್ಯಕ್ತಿಚಿತ್ರಣ

    ಬಾಗಲಕೋಟೆ: ಫೆಬ್ರವರಿ 27ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಗೆ ಕರ್ನಾಟಕದಿಂದ ಬಿಜೆಪಿ ಅಚ್ಚರಿಯ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ಈ ಮೂಲಕ ಬಿಜೆಪಿ ಹೈಕಮಾಂಡ್​ ಎಲ್ಲಾ ಲೆಕ್ಕಾಚಾರವನ್ನು ಬುಡಮೇಲು ಮಾಡಿದ್ದು, ಹಲವರಿಗೆ ಶಾಕ್​ ನೀಡಿದೆ.

    ಲೋಕಸಭೆ ಚುನಾವಣೆಗೆ ಇನ್ನೇನೂ ಕೆಲವೇ ತಿಂಗಳುಗಳು ಬಾಕಿ ಇದ್ದು, ಯಾವುದೇ ಮತಬ್ಯಾಂಕ್, ಜಾತಿ ರಾಜಕೀಯ ಲೆಕ್ಕಚಾರ ಮಾಡದ ಬಿಜೆಪಿ ಪಕ್ಷದ ಕಟ್ಟಾಳು, ಹಿಂದುತ್ವದ ಪ್ರತಿಪಾದಕರಾದ ಬಾಗಲಕೋಟೆ ನಿವಾಸಿ ಮಾಜಿ ವಿಧಾನಪರಿಷತ್​ ಸದಸ್ಯ, ಎಸ್ ಎಸ್ ಕೆ ಸಮಾಜದ ನಾರಾಯಣಸಾ ಭಾಂಡಗೆಗೆ ಮಣೆ ಹಾಕಿದೆ.

    ನಾರಾಯಣಸಾ ಬಾಂಡ ಅವರು 1951 ನವೆಂಬರ್​ 20 ರಂದು ಬಾಗಲಕೋಟೆಯಲ್ಲಿ ಜನಿಸಿದ ಇವರು ತಮ್ಮ 17ನೇ ವಯಸ್ಸಿನಲ್ಲಿ ಆರ್​ಎಸ್​ಎಸ್ ಕಾರ್ಯಕರ್ತರಾಗಿ ಸಂಘ ಪರಿವಾರ ಸೇರಿದ್ದರು. ಖಟ್ಟರ್ ಆರ್​ ಎಸ್ ಎಸ್ ಕಾರ್ಯಕರ್ತರಾದ ಇವರು, ಬಿಜೆಪಿ ಪಕ್ಷದಲ್ಲಿ ಸಕ್ರೀಯ ಮುಖಂಡರಾದರು. ಅಯೋಧ್ಯೆ ರಾಮಮಂದಿರ‌ ಹೋರಾಟದಲ್ಲಿ ಭಾಗಿಯಾದ ಪ್ರಮುಖರಲ್ಲಿ ಇವರು ಕೂಡ ಒಬ್ಬರು. ಅಷ್ಟೇ ಅಲ್ಲ, ಕಾಶ್ಮೀರ ತಿರಂಗಾ ಹೋರಾಟದಲ್ಲಿ ಭಾಗಿ, ಗೋವಾ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ತೆಲಂಗಾಣ ಬಿಜೆಪಿ ಚುನಾವಣಾ ಉಸ್ತುವಾರಿಗಳಾಗಿ ಕಾರ್ಯನಿರ್ವಹಿಸಿದ್ದಾರೆ.

    Narayan Bhandege

    ಇದನ್ನೂ ಓದಿ: ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ ಬಿಜೆಪಿ; ರಾಜ್ಯದಿಂದ ಅಚ್ಚರಿಯ ಆಯ್ಕೆ

    ಆರ್​ಎಸ್​ಎಸ್ ಪ್ರಮುಖರ ಜೊತೆ ನಿಕಟ ಸಂಪರ್ಕ ಹೊಂದಿದ್ದ ಇವರು, ರಾಮಮಂದಿರ‌ ಹೋರಾಟದಲ್ಲಿ ಭಾಗಿಯಾಗಿದ್ದಾಗ ಮಧ್ಯಪ್ರದೇಶದಲ್ಲಿ ಬಂಧನವಾಗಿದ್ದರು. ರಾಮಮಂದಿರ‌ ಹೋರಾಟ, ಕಾಶ್ಮೀರ ತಿರಂಗಾ ಹೋರಾಟ ಸೇರಿದಂತೆ ಅನೇಕ ಹೋರಾಟದಲ್ಲಿ ಭಾಗಿಯಾಗಿದ್ದ ಇವರು, ಬರೋಬ್ಬರಿ 10 ರಿಂದ 15 ಸಾರಿ ಜೈಲು ವಾಸ ಅನುಭವಿಸಿದ್ದಾರೆ.

    ಕಳೆದ 2010 ರಿಂದ 2016 ರವರೆಗೆ ಅವಧಿಯಲ್ಲಿ ವಿಧಾನಪರಿಷತ್​ ಸದಸ್ಯರಾಗಿ ಕಾರ್ಯ ನಿರ್ವಹಿಸಿರುವ ಇವರು ಮಾಜಿ ಪ್ರಧಾನಿ ವಾಜಪೇಯಿ ಭಾಷಣವನ್ನು ಉತ್ತರ ಕರ್ನಾಟಕದಲ್ಲಿ ಹಿಂದಿಯಿಂದ ಕನ್ನಡ ಅನುವಾದ ಮಾಡುವಲ್ಲಿ ಯಶಸ್ವಿಯಾಗಿದ್ದರು. ಪ್ರಸ್ತುತ ಕರ್ನಾಟಕ ಕ್ಷತ್ರಿಯ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts