More

  ಪ್ರೇಯಸಿ ಮಾಡಿದ ಎಡವಟ್ಟು ಪ್ರಿಯಕರನಿಗೆ ಕೋಟಿ ಕೋಟಿ ರೂಪಾಯಿ ನಷ್ಟ

  ನವದೆಹಲಿ: ಪ್ರೇಮಿಗಳ ದಿನ ವ್ಯಾಲೆಂಟೈನ್ಸ್​ ಡೇ ಹತ್ತಿರವಾಗುತ್ತಿದ್ದಂತೆ ಗೆಳೆಯ ಹಾಗೂ ಗೆಳತಿ ನಡುವಿನ ಸಂಬಂಧದ ಸುದ್ದಿ ಎಲ್ಲೆಡೆ ವ್ಯಾಪಕವಾಗಿ ಸದ್ದು ಮಾಡುತ್ತಿದೆ. ಆದರೆ, ಗೆಳತಿ ಮಾಡಿದ ಆ ಒಂದು ತಪ್ಪಿನಿಂದ ಪ್ರಿಯಕರ ಕೋಟ್ಯಂತರ ರೂಪಾಯಿ ಹಣ ಕಳೆದುಕೊಂಡಿರುವುದು ಬೆಳಕಿಗೆ ಬಂದಿದೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಸೌಂಡ್​ ಮಾಡುತ್ತಿದೆ.

  ಬ್ರಿಟನ್​ ನಿವಾಸಿ ಜೇಕಬ್​ ಸೈಮನ್​ ಎಂಬಾತ ಹಲಚವು ವರ್ಷಗಳಿಂದ ಒಂದೇ ಸಂಖ್ಯೆಯ ಲಾಟರಿ ಟಿಕೆಟ್​ಅನ್ನು ಖರೀದಿಸುತ್ತಿದ್ದ. ಪ್ರತಿಬಾರಿ ಒಂದೇ ಸಂಖ್ಯೆಯ ಟಿಕೆಟ್​ ಖರೀದಿಸುತ್ತಿದ್ದ ಜೇಕಬ್​ಗೆ ಫಲಿತಾಂಶ ಹೊರಬಿದ್ದಾಗ ತುಂಬಾ ಬೇಸರವಾಗುತ್ತಿತ್ತು. ಆದರೆ, ಈ ಬಾರಿ ಜೇಕಬ್​ ಅಂದುಕೊಂಡ ಹಾಗೆ ಲಾಟರಿ ಫಲಿತಾಂಶ ಹೊರಬಂದಿದ್ದು, ಅವರ ಸಂಖ್ಯೆ ಅದೃಷ್ಟಶಾಲಿ ಎಂದು ಸಾಬೀತಾಯಿತು. 

  ಇದನ್ನೂ ಓದಿ: 300ಕ್ಕೂ ಅಧಿಕ ಬಾರಿ ಸಂಚಾರ ನಿಯಮ ಉಲ್ಲಂಘನೆ; ದ್ವಿಚಕ್ರ ವಾಹನ ಸವಾರನಿಗೆ ಬಿತ್ತು ಬಾರಿ ದಂಡ

  ಏಕೆಂದರೆ ಜೇಕಬ್​ ನಂಬಿಕೆ ಇಟ್ಟು ಹಲವು ವರ್ಷಗಳಿಂದ ಖರೀದಿಸುತ್ತಿದ್ದ ಲಾಟರಿ ಟಿಕೆಟ್​ಗೆ ಈ ಬಾರಿ 7.5 ಮಿಲಿಯನ್ ಪೌಂಡ್ ಅಂದರೆ ಸುಮಾರು 78 ಕೋಟಿ ಬಹುಮಾನ ಬಂದಿದೆ. ಈ ವಿಚಾರವನ್ನು ತನ್ನ ಪ್ರೇಯಸಿಗೆ ತಿಳಿಸಲೆಂದು ಕಾಲ್​ ಮಾಡಿದಾಗ ಸಂತೋಷವೆಲ್ಲ ಕ್ಷಣಮಾತ್ರದಲ್ಲಿ ಮಾಯವಾಗಿದ್ದು, ತಕ್ಷಣವೇ ಕುಸಿದು ಬಿದ್ದಿದ್ದಾನೆ.

  ಪ್ರತಿ ಬಾರಿಯೂ ಒಂದೇ ಸಂಖ್ಯೆಯ ಲಾಟರಿ ಟಿಕೆಟ್​ ಖರೀದಿಸುತ್ತಿದ್ದ ಜೇಕಬ್​ ಕಂಡು ಬೇಸರಗೊಂಡಿದ್ದ ಪ್ರೇಯಸಿ. ಈ ಸಲ ನಂಬರ್​ ಬದಲಾಯಿಸಲು ನಿರ್ಧರಿಸದ್ದಾಳೆ. ಅದರಂತೆ ಆತ ಈ ಸಲ ಖರೀದಿಸಿದ್ದ ಲಾಟರಿ ಟಿಕೆಟ್​​​ ಬದಲಾಯಿಸಿದ್ದಾಳೆ. ಈ ವಿಚಾರ ತಿಳಿದು ಸ್ಥಳದಲ್ಲೇ ಜೇಕಬ್​ ಕುಸಿದು ಬಿದ್ದಿದ್ದು, ತನ್ನ ಪ್ರೇಯಸಿ ಮಾಡಿದ ಒಂದೇ ಒಂದು ಎಡವಟ್ಟಿನಿಂದಾಗಿ 7.5 ಮಿಲಿಯನ್ ಪೌಂಡ್ ಅಂದರೆ ಸುಮಾರು 78 ಕೋಟಿ ರೂ. ಸ್ವಲ್ಪದಲ್ಲೇ ಕೈತಪ್ಪಿದೆ. ಈ ವಿಚಾರ ಸಾಮಾಜಿಕ ಜಾಲಾತಣಗಳಲ್ಲಿ ವೈರಲ್​ ಆಗಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts