ಬೀದಿ ಬದಿಯ ಈ 2 ತಿಂಡಿಗಳು ಮುಕೇಶ್​ ಅಂಬಾನಿಯವರ ಫೇವರಿಟ್! ನೀತಾ ಅಂಬಾನಿಯಿಂದ ಬಹಿರಂಗ

Nita ambani Mukesh Ambani
Published on

ಮುಂಬೈ: ದೇಶದ ಶ್ರೀಮಂತ ಉದ್ಯಮಿ ಹಾಗೂ ರಿಲಯನ್ಸ್​ ಇಂಡಸ್ಟ್ರೀಸ್​ನ ಚೇರ್ಮನ್​ ಮುಕೇಶ್​ ಅಂಬಾನಿ ಅವರ ಆಹಾರ ಹವ್ಯಾಸವೂ ಹೃದಯದಿಂದ ಅವರೊಬ್ಬ ನಿಜವಾದ ಭಾರತೀಯ ಎಂಬುದನ್ನು ಸಾಬೀತು ಮಾಡಿದೆ. ಬಕಿಂಗ್​ಹ್ಯಾಮ್​ ಅರಮನೆಯ ನಂತರ ವಿಶ್ವದ ಎರಡನೇ ಅತ್ಯಂತ ದುಬಾರಿ ಮನೆ ಆಂಟಿಲಿಯಾ ಮತ್ತು ಐಷಾರಾಮಿ ಜೀವನ ಹೊರತಾಗಿಯೂ ಅವರ ಸರಳ ಜೀವನ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ.

ನೀತಾ ಅಂಬಾನಿ ಅವರ ಪ್ರಕಾರ ಮುಕೇಶ್​ ಅಂಬಾನಿ ಅವರು ಮನೆಯಲ್ಲೇ ತಯಾರಿಸಿದ ಅಡುಗೆಯನ್ನು ತುಂಬಾ ಇಷ್ಟಪಡುತ್ತಾರೆ. ಆದಾಗ್ಯೂ ಅವರು ತುಂಬಾ ಇಷ್ಟಪಡುವ ಎರಡು ಬೀದಿ ಬದಿಯ ತಿಂಡಿಯನ್ನು ಹೆಸರಿಸಿದ್ದಾರೆ. ಆ ಎರಡು ತಿಂಡಿ ಯಾವುವೆಂದರೆ, ಭೇಲ್​ ಮತ್ತು ದಹಿ ಬಟಾಟ ಪುರಿ ಎಂದು ನೀತಾ ಅಂಬಾನಿ ತಿಳಿಸಿದ್ದಾರೆ. ಮುಕೇಶ್ ಅಂಬಾನಿ, ಬೀದಿ ಆಹಾರ ತಿನ್ನಲು ತುಂಬಾ ಇಷ್ಟಪಡುತ್ತಾರೆ. ಈ ಎರಡು ತಿಂಡಿ ಮಾತ್ರ ಅವರ ನೆಚ್ಚಿನ ತಿಂಡಿಗಳಾಗಿವೆ ಎಂದು ನೀತಾ ಅಂಬಾನಿ ತಿಳಿಸಿದ್ದಾರೆ.

ಫೆಮಿನಾ ಮಾಧ್ಯಮ ಜೊತೆಗಿನ ಈ ಹಿಂದಿನ ಸಂದರ್ಶನದಲ್ಲಿ ಮಾತನಾಡಿದ್ದ ನೀತಾ ಅಂಬಾನಿ, ಕುಟುಂಬದ ಉಳಿದವರಿಗೂ ಸಮಯವನ್ನು ನೀಡುವುದರ ಜತೆಗೆ, ದಂಪತಿ ಇನ್ನೂ ಹೆಚ್ಚಿನ ಸಮಯವನ್ನು ಒಟ್ಟಾಗಿ ಕಳೆಯುತ್ತಾರಂತೆ. ಕೆಲವೊಮ್ಮೆ ಬೀದಿ ಆಹಾರವನ್ನು ಸೇವಿಸಲು ಹೊರಗಡೆ ಹೋಗುವುದಾಗಿ ನೀತಾ ಅಂಬಾನಿ ಹೇಳಿದ್ದಾರೆ. ನಾವು ಇನ್ನೂ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದೇವೆ. ಕೆಲವೊಮ್ಮೆ ನಮ್ಮ ಪ್ಲ್ಯಾನ್​ಗಳು ಕ್ಷಣಾರ್ಧದಲ್ಲಿ ಮಾಡಲ್ಪಡುತ್ತವೆ. ತಡರಾತ್ರಿಯಲ್ಲಿ ಎದ್ದು ಒಂದು ಕಪ್ ಕಾಫಿಗೆ ಹೋಗೋಣ ಎಂದು ಹೇಳುತ್ತಾರೆ. ಭೇಲ್ ಅಥವಾ ದಹಿ ಬಟಾಟಾ ಪುರಿಗಾಗಿ ಸ್ವಾತಿ ಸ್ನ್ಯಾಕ್ಸ್‌ಗೆ ಹೋಗುತ್ತೇವೆ ಎಂದು ಹೇಳಿದರು.

ಮುಕೇಶ್ ಮತ್ತು ನೀತಾ ಅಂಬಾನಿ ಮುಂಬೈನಲ್ಲಿ ಗ್ರ್ಯಾಂಡ್ ಆಂಟಿಲಿಯಾದಲ್ಲಿ ವಾಸಿಸುತ್ತಿದ್ದಾರೆ. ಆದಾಗ್ಯೂ, ನೀತಾ ಅಂಬಾನಿ ಹಂಚಿಕೊಂಡ ಮಾಹಿತಿಯ ಪ್ರಕಾರ ದಂಪತಿ ಸರಳ ಜೀವನ ನಡೆಸಲು ಬಯಸುತ್ತಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net