ಓ ವಿಧಿಯೇ ನೀನೆಷ್ಟು ಕ್ರೂರಿ… ಮಗನ ಸಾವಿನ ಸುದ್ದಿ ಕೇಳಿ ತಾಯಿಗೆ ಹೃದಯಾಘಾತ

Kerala Mother and Son
Published on

ಆಲಪ್ಪುಳ: ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಸುದ್ದಿ ಕೇಳಿದ ಕೂಡಲೇ ತಾಯಿ ಹೃದಯಾಘಾತದಿಂದ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಕೇರಳದ ಆಲಪ್ಪುಳ ಜಿಲ್ಲೆಯಲ್ಲಿ ನಡೆದಿದೆ.

ಮೃತ ತಾಯಿಯನ್ನು ಇಂದುಲೇಖಾ ಎಂದು ಗುರುತಿಸಲಾಗಿದೆ. ಈಕೆ ಆಲಪ್ಪುಳ ಜಿಲ್ಲೆಯ ಪುರಕ್ಕಾಡ್​ ಮೂಲದ ನಿವಾಸಿ. ಆಕೆಯ ಮಗ ನಿಧಿನ್​ (32) ಕಳೆದ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಿಧಿನ್​ ಮೀನುಗಾರಿಕೆ ಕೆಲಸ ಮಾಡುತ್ತಿದ್ದರು. ಕಳೆದ ರಾತ್ರಿ 8 ಗಂಟೆಗೆ ನಿಧಿನ್​ ಆತ್ಮಹತ್ಯೆಗೆ ಶರಣಾಗಿದ್ದು, ಮಗನ ಸಾವಿನ ಸುದ್ದಿ ತಿಳಿದುಕೊಡಲೇ ಇಂದುಲೇಖಾ ಹೃದಯಾಘಾತಕ್ಕೆ ಒಳಗಾಗಿ ಪ್ರಾಣ ಬಿಟ್ಟಿದ್ದಾರೆ.

ನಿಧಿನ್​ನನ್ನು ಆಲಪ್ಪುಳದ ಮೆಡಿಕಲ್​ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ 11 ಗಂಟೆಗೆ ಮೃತಪಟ್ಟನು. ತಾಯಿ ಮತ್ತು ಮಗ ಇಬ್ಬರನ್ನು ಇಂದು ಒಂದೇ ಕಡೆ ಶವ ಸಂಸ್ಕಾರ ಮಾಡಲಾಗಿದೆ.

ನಿಧಿನ್​ ಆತ್ಮಹತ್ಯೆ ಕಾರಣ ಏನೆಂಬುದು ಇನ್ನು ತಿಳಿಬಂದಿಲ್ಲ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net