ನಾನು JDS ಬಿಡಲಿಲ್ಲ, ಅವರೇ ಕತ್ತು ಹಿಡಿದು ಹೊರಗೆ ಹಾಕಿದರು: ಎಸ್.ಆರ್.ಶ್ರೀನಿವಾಸ್

r srinivas
Published on

ಬೆಂಗಳೂರು: ನಾನು ಜೆಡಿಎಸ್ ಬಿಡಲಿಲ್ಲ, ಅವರೇ ಕತ್ತು ಹಿಡಿದು ಹೊರಗೆ ಹಾಕಿದರು. ಪರ್ಯಾಯ ಅವಕಾಶಕ್ಕೆ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ ಎಂದು ಜೆಡಿಎಸ್​ನಿಂದ ಉಚ್ಛಾಟಿತಗೊಂಡಿರುವ ಎಸ್.ಆರ್.ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದ್ದಾರೆ.

ಪಕ್ಷದ ಸಭೆಯಲ್ಲಿ  ಮಾತನಾಡಿದ ಅವರು, 'ನನಗೂ ಬಿಜೆಪಿ ಸಿದ್ಧಾಂತಕ್ಕೂ ಆಗಿಬರಲ್ಲ. ನಾನು ಮೂಲತಃ ಕಾಂಗ್ರೆಸ್ ‌ಪಕ್ಷದಲ್ಲಿಯೇ ಇದ್ದೇನು. ಜಿ.ಪಂ ಸದಸ್ಯನಾಗಿದ್ದೆ. 2002ರಲ್ಲಿ ಸಿದ್ದರಾಮಯ್ಯ- ಗೌಡರ ಸಮ್ಮುಖದಲ್ಲಿ ಜೆಡಿಎಸ್ ಸೇರಿದೆ. ಟಿಕೆಟ್ ಕೊಡಲಿಲ್ಲ ಎಂದ ಬಳಿಕ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಕಂಡೆ. ಬಳಿಕ 2008, 2013, 2013ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದೆ' ಎಂದು ಹೇಳಿದ್ದಾರೆ.

'ನನಗೆ ನಾಟಕ‌ವಂಚನೆ ಪ್ರವೃತ್ತಿ ಇಲ್ಲ. 2021ರಲ್ಲಿ ಕುಮಾರಸ್ವಾಮಿ ಕಾರ್ಯಕ್ರಮ ಮಾಡಿದರೆ, ತಿಳಿಸಲೇ ಇಲ್ಲ, ಅಭ್ಯರ್ಥಿ ಘೋಷಿಸಿದರು. ಸಿದ್ದರಾಮಯ್ಯರನ್ನು ಹೀನಾಯವಾಗಿ ಹೊರಹಾಕಿದರು. ಅದಕ್ಕಿಂತ ಹೀನಾಯವಾಗಿ ಹೊರ ಹಾಕಿದರು' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

'ಒಕ್ಕಲಿಗರ ಸಂಘದ ವಿಚಾರದಲ್ಲಿ ಒಂದು ಹೇಳಿಕೆ ಕೊಟ್ಟೆ. ಅದನ್ನೇ ಇಟ್ಟುಕೊಂಡು ಆಚೆಗೆ ಹಾಕಿದರು. ದೇವೇಗೌಡರಿಗೆ 58 ಸಾವಿರ ಓಟ್ ಹಾಕಿಸಿದರು. ಪ್ರತಿ ಚುನಾವಣೆಯಲ್ಲಿ‌ ಹಿನ್ನೆಡೆಯಾಗುತ್ತಿತ್ತು. ಆದರೆ ಗೌಡರ ಹಿನ್ನೆಡೆಗೆ ನನ್ನ ಮೇಲೆ ಹೇಳಿದರು.‌ಮನಸ್ಸಿಗೆ ಬಹಳ‌ನೋವಾಯಿತು' ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net