ಯಾರ ಜತೆ ಡೇಟ್​​ ಮಾಡಲು ಇಷ್ಟಪಡ್ತೀರಾ? ಗಂಡನ ಮುಂದೆಯೇ ಅಚ್ಚರಿ ಉತ್ತರ ಕೊಟ್ಟ ನೀತಾ ಅಂಬಾನಿ | Nita Ambani

Nita Ambani
Published on

ಮುಂಬೈ: ಏಷ್ಯಾದ ಅತಿದೊಡ್ಡ ಬಿಲಿಯನೇರ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಚೇರ್ಮನ್​ ಮುಕೇಶ್ ಅಂಬಾನಿ ( Mukesh Ambani ) ಮತ್ತು ಅವರ ಕುಟುಂಬಕ್ಕೆ ಸಂಬಂಧಿಸಿದ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್​ ಆಗುತ್ತಲೇ ಇರುತ್ತವೆ. ಅಂಬಾನಿ ಕುಟುಂಬದಲ್ಲಿ ಸಂಪತ್ತಿಗೆ ಯಾವುದೇ ಕೊರತೆ ಇಲ್ಲ. ದೇಶದ ಜಿಡಿಪಿಯ ಶೇ. 10 ರಷ್ಟು ಆಸ್ತಿ ಅಂಬಾನಿ ಕುಟುಂಬದವರ ಬಳಿಯಿದೆ. ಈ ಕುಟುಂಬ ಏನೇ ಮಾಡಿದರೂ ಅಲ್ಲೊಂದು ಅದ್ಧೂರಿತನ ಇದ್ದೇ ಇರುತ್ತದೆ. ಅದಕ್ಕೆ ತಾಜಾ ಉದಾಹರಣೆ ಇತ್ತೀಚೆಗಷ್ಟೇ ನಡೆದ ಅಂಬಾನಿ ದಂಪತಿಯ ಕಿರಿಯ ಪುತ್ರ ಅನಂತ್​ ಅಂಬಾನಿ ಮದುವೆ.

ರಿಲಯನ್ಸ್ ಫೌಂಡೇಶನ್‌ ಸಂಸ್ಥಾಪಕಿ ಶ್ರೀಮತಿ ನೀತಾ ಅಂಬಾನಿ ( Nita Ambani ) ತಮ್ಮ ಐಷಾರಾಮಿ ಜೀವನಶೈಲಿಯಿಂದಲೇ ಸದಾ ಸುದ್ದಿಯಲ್ಲಿರುತ್ತಾರೆ. ನೀತಾ ಅಂಬಾನಿ ಕುರಿತಾದ ವಿಡಿಯೋಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಇದೀಗ ನೀತಾ ಅವರಿಗೆ ಸಂಬಂಧಿಸಿದ ಹಳೆಯ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್​ ಆಗಿದ್ದು, ಈ ವಿಡಿಯೋದಲ್ಲಿ ನೀತಾ ಅವರು ತಮ್ಮ ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡಿದ್ದಾರೆ.

ನೀತಾ ಅಂಬಾನಿ ಅವರು ಕೆಲವು ವರ್ಷಗಳ ಹಿಂದೆ ನಟಿ ಹಾಗೂ ನಿರ್ದೇಶಕಿ ಸಿಮಿ ಗರೆವಾಲ್ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ಸಂದರ್ಶನದಲ್ಲಿ ಮುಕೇಶ್ ಅಂಬಾನಿ ಕೂಡ ಉಪಸ್ಥಿತರಿದ್ದರು.

ಮುಕೇಶ್ ಅಂಬಾನಿ ಅವರನ್ನು ಹೊರತುಪಡಿಸಿ ಬೇರೆ ಯಾರೊಂದಿಗೆ ಡೇಟ್ ಮಾಡಲು ಬಯಸುತ್ತೀರಿ ಎಂದು ಸಿಮಿ ಅವರು ಪ್ರಶ್ನಿಸಿದ್ದರು. ಇದಕ್ಕೆ ಉತ್ತರ ನೀಡಿದ್ದ ನೀತಾ ಅವರು ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಎಂದಿದ್ದರು. ಅಂದಹಾಗೆ ಬಿಲ್ ಕ್ಲಿಂಟನ್ ಅವರು ತಮ್ಮ ಅಧಿಕಾರಾವಧಿಯಲ್ಲಿ ವಿಶ್ವದ ಗಮನ ಸೆಳೆದ ಅಮೆರಿಕ ನಾಯಕರೆಂಬುದು ಎಲ್ಲರಿಗೂ ತಿಳಿದಿದೆ.

ನೀತಾ ಅವರು ಬಿಲ್​ ಕ್ಲಿಂಟನ್ ಜೊತೆ ಡೇಟ್​ಗೆ ಹೋದರೆ ನಾನು ಸಿಮಿ ಅವರ ಜೊತೆ ಡೇಟಿಂಗ್ ಮಾಡಲು ಇಚ್ಛಿಸುತ್ತೇನೆ ಎಂದು ಮುಕೇಶ್ ಅಂಬಾನಿ ಇದೇ ವೇಳೆ ನಗೆಚಟಾಕಿ ಹಾರಿಸಿದ್ದರು. ಆಗ ಮೂವರೂ ಕೂಡ ನಕ್ಕಿದ್ದರು.

ಅಂದಹಾಗೆ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಸುಮಾರು 40 ವರ್ಷಗಳ ಹಿಂದೆ ವಿವಾಹವಾದರು. ಇಬ್ಬರದ್ದೂ ಪ್ರೇಮ ವಿವಾಹ. ನೀತಾ ಅವರು ಅಂಬಾನಿ ಕುಟುಂಬದ ಹಲವಾರು ಕಂಪನಿಗಳ ಮುಖ್ಯಸ್ಥರೂ ಆಗಿದ್ದಾರೆ. ಇದಲ್ಲದೆ, ಅವರು ಡ್ಯಾನ್ಸರ್ ಮತ್ತು ಐಪಿಎಲ್ ತಂಡ ಮುಂಬೈ ಇಂಡಿಯನ್ಸ್​ನ ಮಾಲೀಕರೂ ಆಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net