ಪ್ರೇಮ ಪ್ರಕರಣ: ಡೆತ್ ನೋಟ್ ಬರೆದಿಟ್ಟು ಒಂಬತ್ತನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

Crime Logo
Published on

ವಿಶಾಖಪಟ್ಟಣ: ''ನೀನು ನನ್ನ ಜೊತೆಗಿರುವಾಗ ನನಗೆ ಬೇರೆ ಯಾರೂ ಇಲ್ಲ ಅಂತ ಅನ್ನಿಸುತ್ತೆ.. ಆದರೆ ನೀನಿಲ್ಲದಿದ್ದಾಗ ನನ್ನಂತವರು ಯಾರೂ ಇಲ್ಲ ಅಂತ ಅನಿಸುತ್ತದೆ'' ಎಂದು ಬರೆದಿಟ್ಟು ಒಂಬತ್ತನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸೂಸೈಡ್ ನೋಟ್ ನೋಡಿದರೆ ಪ್ರೇಮ ವೈಫಲ್ಯದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವಂತಿದೆ. ಆದರೆ ಈತನಿಗೆ ಕೇವಲ 16 ವರ್ಷ. ಒಂಬತ್ತನೇ ತರಗತಿ ಓದುತ್ತಿದ್ದಾನೆ.

ಆತ್ಮಹತ್ಯೆ ಮಾಡಿಕೊಂಡಿರುವ ಬಾಲಕ ವಿಶಾಖಪಟ್ಟಣದ ಗಜುವಾಕದ ಕೈಲಾಸ್ ನಗರದಲ್ಲಿ ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದಾನೆ. ಬಾಲಕ ಮನೆಯಲ್ಲಿ ಪೋಷಕರು ಇಲ್ಲದ ವೇಳೆ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಷಯ ತಿಳಿದ ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ. ಕೂಡಲೇ ಪೊಲೀಸರಿಗೆ ವಿಷಯ ತಿಳಿಸಲಾಗಿದ್ದು, ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅಖಿಲ್ ಮೃತದೇಹದ ಪಕ್ಕ ಸೂಸೈಡ್ ನೋಟ್ ಪತ್ತೆಯಾಗಿದೆ. ಇದನ್ನು ನೋಡಿದ ಪೊಲೀಸರು, ಬಾಲಕನ ಆತ್ಮಹತ್ಯೆಗೆ ಪ್ರೇಮ ಪ್ರಕರಣವೇ ಕಾರಣ ಎಂಬುದು ಗೊತ್ತಾಗಿದೆ ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net