ನರೇಶ್​​​ಗೆ ಬಿಗ್ ರಿಲೀಫ್; 'ಮತ್ತೆ ಮದುವೆ' ವಿರುದ್ಧದ ಕೇಸ್ ವಜಾ, ನರೇಶ್​​​ ಮನೆ ಪ್ರವೇಶಿಸದಂತೆ ರಮ್ಯಾಗೆ ನಿರ್ಬಂಧ

naresh (1)
Published on

ಬೆಂಗಳೂರು: ಹಿರಿಯ ನಟ ನರೇಶ್ ಅವರಿಗೆ ಈಗ ಬಿಗ್ ರಿಲೀಫ್ ಸಿಕ್ಕಿದೆ. ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯವು ನರೇಶ್ ಅವರ ವಿವಾದಿತ ಚಿತ್ರ 'ಮಲ್ಲಿ ಪೆಲ್ಲಿ' ಬಿಡುಗಡೆ ವಿರುದ್ಧ ದಾಖಲಾದ ಪ್ರಕರಣವನ್ನು ವಜಾಗೊಳಿಸಿದೆ. "'ಮಲ್ಲಿ ಪೆಲ್ಲಿ' (ತೆಲುಗು) ಮತ್ತು ಮತ್ತೆ ಮದುವೆ (ಕನ್ನಡ) ಚಿತ್ರಗಳು ತಮ್ಮ ವೈಯಕ್ತಿಕ ಜೀವನವನ್ನು ಆಧರಿಸಿವೆ'' ಎಂದು ಆರೋಪಿಸಿ ನರೇಶ್ ಅವರ ಮೂರನೇ ಪತ್ನಿ ಶ್ರೀಮತಿ ರಮ್ಯಾ ರಘುಪತಿ ಅವರು ಚಲನಚಿತ್ರದ ವಿರುದ್ಧ ತಡೆಯಾಜ್ಞೆ ಕೋರಿ ಮೊಕದ್ದಮೆ ಹೂಡಿದ್ದರು. ಚಿತ್ರದ ಥಿಯೇಟರ್, ಸ್ಯಾಟಲೈಟ್ ಮತ್ತು ಡಿಜಿಟಲ್ ಬಿಡುಗಡೆಗೂ ತಡೆ ಕೋರಿದ್ದರು.

ಆಗಸ್ಟ್ 1 ರಂದು ರಮ್ಯಾ ಮತ್ತು ನರೇಶ್ ಅವರ ವಾದವನ್ನು ಆಲಿಸಿದ ಸಿಟಿ ಸಿವಿಲ್ ನ್ಯಾಯಾಲಯವು, ಪ್ರಕರಣವನ್ನು ವಜಾಗೊಳಿಸಿದೆ. ಮಲ್ಲಿ ಪೆಲ್ಲಿ ಮತ್ತು ಮತ್ತೆ ಮದುವೆ ಬಿಡುಗಡೆ ವಿರುದ್ಧ ಶ್ರೀಮತಿ ರಮ್ಯಾ ಅವರು ಹೂಡಿರುವ ದಾವೆ ಕಾನೂನುಬದ್ಧವಾಗಿ ಸಮರ್ಥನೀಯವಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಚಿತ್ರದ ವಿಷಯವು "CBFC ಯಿಂದ ಪ್ರಮಾಣೀಕರಿಸಲ್ಪಟ್ಟಂತೆ ಸಂಪೂರ್ಣವಾಗಿ ಕಾಲ್ಪನಿಕವಾಗಿದೆ" ಎಂದು ನ್ಯಾಯಾಲಯವು ತೀರ್ಮಾನಿಸಿದೆ. ಸೆನ್ಸಾರ್ ಮಂಡಳಿಯು ಚಲನಚಿತ್ರವನ್ನು ಕಾಲ್ಪನಿಕ ಎಂದು ಪ್ರಮಾಣೀಕರಿಸಿದ ನಂತರ, ಚಲನಚಿತ್ರ ಬಿಡುಗಡೆಯನ್ನು ತಡೆಯಲು ಖಾಸಗಿ ವ್ಯಕ್ತಿಗೆ ಯಾವುದೇ ಗ್ರೌಂಡ್ ಇರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಮತ್ತೊಂದು ಸಂಬಂಧಿತ ಪ್ರಕರಣದಲ್ಲಿ, ನರೇಶ್ ಮತ್ತು ಅವರ ಕುಟುಂಬ ಸದಸ್ಯರು ಸಲ್ಲಿಸಿದ್ದ ತಡೆಯಾಜ್ಞೆ ಮೊಕದ್ದಮೆಯನ್ನು ನ್ಯಾಯಾಲಯವು ಅಂಗೀಕರಿಸಿತು. ನಾನಕ್ರಮ್ಗುಡದಲ್ಲಿರುವ ನರೇಶ್ ಅವರ ಮನೆಗೆ ರಮ್ಯಾ ರಘುಪತಿ ಪ್ರವೇಶಿಸುವುದನ್ನು ನಿಷೇಧಿಸಿತು. ನರೇಶ್ ಮತ್ತು ರಮ್ಯಾ ರಘುಪತಿ ಕಳೆದ 6 ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿಲ್ಲ ಎಂದು ನ್ಯಾಯಾಲಯವು ತೀರ್ಮಾನಿಸಿದೆ. ಇದು ಅವರ ವಿಚ್ಛೇದನಕ್ಕೆ ದಾರಿ ಮಾಡಿಕೊಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net