ಮೆಲೋಡಿ ಮಳೆ ಸುರಿಸಿದ ರಘು ದೀಕ್ಷಿತ್​; ಡಾ. ರಾಜ್​ ಮೊಮ್ಮಗಳ ಸಿನಿಮಾದ ಹಾಡು ಬಿಡುಗಡೆ

collage (25)
Published on

ಡಾ. ರಾಜ್​ ಕುಟುಂಬದ ಸಿನಿಮಾ ಅಂದರೆ ಅಲ್ಲಿ ಒಂದಿಲ್ಲೊಂದು ವಿಶೇಷತೆ ಇದ್ದೇ ಇರುತ್ತದೆ. ಇದೀಗ ಅಂಥ ವಿಶೇಷತೆಯನ್ನು ಹೊತ್ತು ಬರುತ್ತಿದೆ ‘ನಿನ್ನ ಸನಿಹಕೆ..’ ಸಿನಿಮಾ. ಹೌದು, ಡಾ. ರಾಜ್​ ಮೊಮ್ಮಗಳು ಧನ್ಯಾ ರಾಮ್​ಕುಮಾರ್ ನಾಯಕಿಯಾಗಿ ನಟಿಸಿರುವ ‘ನಿನ್ನ ಸನಿಹಕೆ..’ ಸಿನಿಮಾದ ಲಿರಿಕಲ್​ ಹಾಡು ಗಣೇಶ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿದೆ.

ಸದ್ಯ ಎಲ್ಲೆಡೆ ಮಳೆಯ ಅಬ್ಬರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ‘ಮಳೆ ಮಳೆ..’ ಗೀತೆಯನ್ನೇ ಬಿಡುಗಡೆ ಮಾಡಲಾಗಿದೆ. ರಘು ದೀಕ್ಷಿತ್​ ಸಂಗೀತ ಸಂಯೋಜಿಸಿರುವ ಈ ಹಾಡು ಸಖತ್​ ಸದ್ದು ಮಾಡುತ್ತಿದ್ದು, ಮೆಲೋಡಿ ಪ್ರಿಯರನ್ನು ಆಕರ್ಷಿಸುತ್ತಿದೆ. ಸೂರಜ್​ ಗೌಡ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ನಾಯಕನಾಗಿಯೂ ಅವರೇ ನಟಿಸಿದ್ದಾರೆ. ವಾಸುಕಿ ವೈಭವ್​ ಸಾಹಿತ್ಯ ಬರೆದಿರುವ ಈ ಹಾಡು, ರಘು ದೀಕ್ಷಿತ್​ ಯೂಟ್ಯೂಬ್​ ಚಾನೆಲ್​ನಲ್ಲಿ ಬಿಡುಗಡೆಯಾಗಿದೆ.

ಈಗಾಗಲೇ ಬಹುತೇಕ ಚಿತ್ರೀಕರಣ ಕೆಲಸಗಳನ್ನು ಮುಗಿಸಿಕೊಂಡಿರುವ ಈ ಚಿತ್ರ ಸದ್ಯ ಬಾಕಿ ಉಳಿಸಿಕೊಂಡ ಒಂದಷ್ಟು ಕೆಲಸಗಳನ್ನು ಮುಗಿಸಿಕೊಳ್ಳುತ್ತಿದೆ. ಅಖಿಲೇಶ್ ಕಲಾತಿ ಛಾಯಾಗ್ರಹಣ, ಸುರೇಶ್​ ಆರ್ಮುಗಮ್​ ಸಂಕಲನ ಮಾಡುತ್ತಿದ್ದಾರೆ. ಅಕ್ಷಯ್​ ರಾಜಶೇಖರ್​ ಮತ್ತು ರಂಗನಾಥ್ ಕುಡ್ಲಿ ಬಂಡವಾಳ ಹೂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net