ಎಷ್ಟು ಸಾಧ್ಯವೋ ಅಷ್ಟು ಬೇಗ 'ಆಚಾರ್ಯ' ಮುಗಿಸಲು ಕಾಜಲ್​ ಕಾತರ ... ಯಾಕೆ?

Kajal-Agarwal-Final
Published on

ಟಾಲಿವುಡ್​ನ ಮೆಗಾಸ್ಟಾರ್​ ಚಿರಂಜೀವಿ ಅಭಿನಯದ 'ಆಚಾರ್ಯ' ಚಿತ್ರವನ್ನು ಆದಷ್ಟು ಬೇಗ ಮುಗಿಸಬೇಕು ಎಂದು ಕಾಯುತ್ತಿರುವವರು ನಿರ್ದೇಶಕ ಕೊರಟಾಲ ಶಿವ ಮಾತ್ರ ಅಲ್ಲ, ಈ ಪಟ್ಟಿಗೆ ಚಿತ್ರದ ನಾಯಕಿ ಕಾಹಲ್​ ಅಗರವಾಲ್​ ಸಹ ಸೇರಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಮೆಗಾ ಸ್ಟಾರ್​ ಜತೆಗೆ ನಟಿಸುವುದಕ್ಕೆ ಥ್ರಿಲ್​ ಆಗಿದೆ ಎಂದು ಹೇಳಿಕೊಂಡಿದ್ದ ಕಾಜಲ್​, ಈಗ ಆದಷ್ಟು ಬೇಗ 'ಆಚಾರ್ಯ' ಚಿತ್ರವನ್ನು ಮುಗಿಸಿ ಎಂದು ಚಿತ್ರತಂಡದವರಿಗೆ ಹೇಳುತ್ತಿದ್ದಾರಂತೆ. ಅಷ್ಟೇ ಅಲ್ಲ, ಅಕ್ಟೋಬರ್​-ನವೆಂಬರ್​ ತಿಂಗಳುಗಳಲ್ಲಿ ಡೇಟ್ಸ್​ ಕೊಡುವುದಕ್ಕೂ ಮುಂದಾಗಿದ್ದಾರಂತೆ.

ಇಷ್ಟಕ್ಕೂ 'ಆಚಾರ್ಯ' ಚಿತ್ರದಲ್ಲಿ ತಮ್ಮ ಕೆಲಸ ಮುಗಿಸುವುದಕ್ಕೆ ಕಾಜಲ್​ ಅಷ್ಟೊಂದು ಕಾತರರಾಗಿರುವುದು ಏಕೆ? ಈ ಬಗ್ಗೆ ಅವರು ಬಾಯಿಬಿಟ್ಟಿಲ್ಲ. ಅವಸರಕ್ಕೆ ಕಾರಣವೇನು ಎಂದು ಎಲ್ಲೂ ಹೇಳಿಕೊಂಡಿಲ್ಲ. ಮೂಲಗಳ ಪ್ರಕಾರ, ಅದಕ್ಕೆ ಕಾರಣ ಆಕೆಯ ಮದುವೆ,

ಕಾಜಲ್​ ಮದುವೆಯಾಗುತ್ತಿದ್ದಾರೆ ಎಂನ ವಿಷಯ ಟಾಲಿವುಡ್​ನಲ್ಲಿ ಕೇಳಿ ಬರುತ್ತಿದೆ ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಲೇ ಇದೆ. ಅಷ್ಟೇ ಅಲ್ಲ, ಗೌತಮ್​ ಎನ್ನುವವರ ಜತೆಗೆ ಅವರ ನಿಶ್ಚಿತಾರ್ಥ ಇದೀಗ ಸದ್ದಿಲ್ಲದೆ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಈಗಲೇ ಎಲ್ಲೆಡೆ ಹರಡಿದರೆ, ಎಲ್ಲರೂ ಕೇಳುತ್ತಾರೆ, ಉತ್ತರಿಸುವುದು ಬಹಳ ಕಷ್ಟವಾಗುತ್ತದೆ ಎಂದು ಇದುವರೆಗೂ ಎಂಗೇಜ್​ಮೆಂಟ್​ನ ಫೋಟೋಗಳನ್ನು ಹೊರಗೆ ಬಿಟ್ಟಿಲ್ಲವಂತೆ.

ಮದುವೆಯಾಗುವುದಕ್ಕಿಂತ ಮುನ್ನ ತನ್ನೆಲ್ಲಾ ಕಮಿಟ್​ಮೆಂಟ್​ಗಳನ್ನು ಮುಗಿಸಬೇಕು ಎನ್ನುವುದು ಕಾಜಲ್​ ಆಸೆ. ಅದೇ ಕಾರಣಕ್ಕೆ, 'ಆಚಾರ್ಯ' ಚಿತ್ರದ ಚಿತ್ರೀಕರಣ ಮುಗಿಸಿ, ಬೇರೆ ಚಿತ್ರಗಳತ್ತ ಹೋಗುವುದಕ್ಕೆ ಅವರು ತುದಿಗಾಲಲ್ಲಿ ನಿಂತಿದ್ದಾರಂತೆ. ಆದರೆ, ಕರೊನಾ ಹಾವಳಿಯಿಂದ ಚಿತ್ರೀಕರಣ ಮುಂದೂಡಿರುವ ಚಿತ್ರತಂಡ, ಕಾಜಲ್​ ಮಾತಿಗೆ ಬೆಲೆಕೊಟ್ಟು, ಬೇಗ ಆಕೆಯ ಭಾಗದ ಚಿತ್ರೀಕರಣ ಮುಗಿಸುತ್ತದಾ ಎಂಬ ಕುತೂಹಲ ಎಲ್ಲರಿಗೂ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net