ಒಂಬತ್ತು ಕಳಪೆ ಇಂಜೆಕ್ಷನ್ ಪತ್ತೆ! ಬಾಣಂತಿಯರ ಸರಣಿ ಸಾವಿನ ಘಟನೆ ಬೆನ್ನಲ್ಲೇ ರಾಜ್ಯಕ್ಕೆ ಆತಂಕ

ವಿಜಯವಾಣಿ (6)
Published on

ಬೆಂಗಳೂರು: ಕಳಪೆ ಔಷಧಕ್ಕೆ ಬಾಣಂತಿಯರ ಸರಣಿ ಸಾವು ಸಂಭವಿಸಿದ ಬೆನ್ನಲ್ಲೇ ರಾಜ್ಯದಲ್ಲಿ ಬಳಕೆಯಲ್ಲಿರುವ 9 ಇಂಜೆಕ್ಷನ್​ಗಳು ಗುಣಮಟ್ಟ ಹೊಂದಿಲ್ಲ ಎಂಬ ಆತಂಕಕಾರಿ ವಿಚಾರ ಪ್ರಯೋಗಾಲಯ ವರದಿಯಲ್ಲಿ ಬಹಿರಂಗಗೊಂಡಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗುಣಮಟ್ಟವಿಲ್ಲದ ಈ ಇಂಜೆಕ್ಷನ್​ಗಳನ್ನು ಕೂಡಲೇ ಹಿಂತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ವರ್ಷ ಜ. 1ರಿಂದ ಫೆ. 16ರ ನಡುವೆ, ಹೊರ ರಾಜ್ಯಗಳಲ್ಲಿ ತಯಾರಾಗಿ ಕರ್ನಾಟಕಕ್ಕೆ ಪೂರೈಕೆಯಾಗಿರುವ ಔಷಧಗಳಲ್ಲಿ 9 ಇಂಜೆಕ್ಷನ್ ಯೋಗ್ಯವಲ್ಲ ಎಂದು ರಾಜ್ಯ ಸರ್ಕಾರದ ಪ್ರಯೋಗಾಲಯಗಳಲ್ಲಿ ನಡೆದ ಗುಣಮಟ್ಟ ಪರೀಕ್ಷೆ (Sterility Testing) ವರದಿಯಲ್ಲಿ ಸಾಬೀತಾಗಿದೆ. ಈಗಾಗಲೇ ಪಶ್ಚಿಮ ಬಂಗಾಳ ಮೂಲದ ‘ಪಶ್ಚಿಮ್ ಬಂಗಾ ಫಾರ್ವಸ್ಯುಟಿಕಲ್ಸ್ ಔಷಧ (ಐವಿ) ಬಳಸಿದ್ದ ಪರಿಣಾಮ ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಐವರು ಬಾಣಂತಿಯರು ಮೃತಪಟ್ಟಿದ್ದಾರೆ. ಇತರ ರಾಜ್ಯಗಳಲ್ಲಿ ತಯಾರಾಗುತ್ತಿರುವ ಇಂತಹ ಕಳಪೆ ದರ್ಜೆಯ ಔಷಧಗಳನ್ನು ಕರ್ನಾಟಕದಲ್ಲಿ ಮಾರಾಟ ಮಾಡಲಾಗುತ್ತಿದೆ.

ಯಾವೆಲ್ಲ ಔಷಧಗಳು?

ಕಳಪೆ ಗುಣಮಟ್ಟದ 9 ಇಂಜೆಕ್ಷನ್​ಗಳ ಪೈಕಿ ಎರಡು ಬ್ಯಾಚ್​ನ ಇಂಜೆಕ್ಷನ್​ಗಳು ಆಂಟಿಬಯೋಟಿಕ್ ಆಗಿದ್ದು ವಾಂತಿ, ಭೇದಿ ಸಂದರ್ಭದಲ್ಲಿ ನೀಡಲಾಗುತ್ತದೆ. ಇವಲ್ಲದೆ ನೋವು ನಿವಾರಕವಾಗಿ, ಬಳಲಿಕೆ ಮತ್ತು ನಿಶ್ಶಕ್ತಿಗೆ, ಕಿಡ್ನಿ ಸಮಸ್ಯೆ ಹೊಂದಿರುವವರಿಗೆ, ಹಾವು ಕಡಿತ, ವಿಷ ಸೇವನೆ ಸಂದರ್ಭದಲ್ಲಿ ಹಾಗೂ ಕ್ಯಾಲ್ಶಿಯಂ ಕೊರತೆ ಉಂಟಾ ದವರಿಗೆ ನೀಡುವ ಇಂಜೆಕ್ಷನ್​ಗಳೂ ಇದರಲ್ಲಿ ಸೇರಿವೆ.

ಆರೋಗ್ಯ ಇಲಾಖೆ ಕಳಪೆ ಗುಣಮಟ್ಟದ ಔಷಧಗಳು ರಾಜ್ಯದಲ್ಲಿ ಮಾರಾಟವಾಗದಂತೆ ಸಾಕಷ್ಟು ಕ್ರಮ ಕೈಗೊಳ್ಳುತ್ತಿದೆ. ಬಳಕೆಗೆ ಯೋಗ್ಯವಲ್ಲದ ಔಷಧ ಮಾರಾಟಕ್ಕೆ ಸರ್ಕಾರ ಅವಕಾಶ ನೀಡುವುದಿಲ್ಲ. | ದಿನೇಶ್ ಗುಂಡೂರಾವ್ ಆರೋಗ್ಯ ಸಚಿವ

ಹೀಗಾಗಿ ಕೂಡಲೇ ದೇಶಾದ್ಯಂತ ಮಾರುಕಟ್ಟೆಗಳಲ್ಲಿರುವ ಈ ಕಳಪೆ ಗುಣಮಟ್ಟದ ಔಷಧಗಳನ್ನು ಹಿಂಪಡೆದು ಜನರ ಆರೋಗ್ಯ ಕಾಪಾಡಬೇಕೆಂದು ಸಚಿವ ದಿನೇಶ್ ಗುಂಡೂರಾವ್ ಕೇಂದ್ರ ಸಚಿವ ಜಗತ್ ಪ್ರಕಾಶ್ ನಡ್ಡಾ ಅವರಿಗೆ ಪತ್ರ ಬರೆದಿದ್ದಾರೆ.

ಕಳಪೆ ಔಷಧಗಳು

  • ಮೆಟ್ರೋನಿಡಜೋಲ್ ಇಂಜೆಕ್ಷನ್ ಐಪಿ 100 ಮಿಲಿ - ಫಾರ್ವ ಇಂಪೆಕ್ಸ್ ಲ್ಯಾಬೋರೇಟರೀಸ್ ಪ್ರೖೆ. ಲಿ. ಪಶ್ಚಿಮ ಬಂಗಾಳ (ಬ್ಯಾಚ್ ನಂ: 2408ಅ0235)
  • ಡೈಕ್ಲೋಫೆನಾಕ್ ಸೋಡಿಯಂ ಇಂಜೆಕ್ಷನ್ ಐಪಿ - ಆಲ್ಪಾ ಲ್ಯಾಬೋರೇಟರೀಸ್ ಲಿಮಿಟೆಡ್, ಇಂದೋರ್ ಮಧ್ಯಪ್ರದೇಶ ( ಬ್ಯಾಚ್ ನಂ: ಅ3396)
  • ಡೆಕ್ಸೋಟ್ರಿಸ್​ ಇಂಜೆಕ್ಷನ್ ಐಪಿ 25% ಡಬ್ಲೂ್ಯ/ವಿ ಡಿ25 - ರುಸೋಮಾ ಲ್ಯಾಬೋರೇಟರೀಸ್ ಪ್ರೖೆ. ಲಿ. ಇಂದೋರ್ ಮಧ್ಯಪ್ರದೇಶ ( ಬ್ಯಾಚ್ ನಂ: ಕ240625)
  • ಮೆಟ್ರೋನಿಡಜೋಲ್ ಇಂಜೆಕ್ಷನ್ ಐಪಿ 100 ಮಿಲಿ - ಐಎಚ್​ಎಲ್ ಲೈಫ್​ಸೈನ್ಸಸ್ ಪ್ರೖೆ. ಲಿ. ಮಧ್ಯಪ್ರದೇಶ (ಬ್ಯಾಚ್ ನಂ: 4ಘಖ40149)
  • ಪ್ರೋ ಸೆಮೈಡ್ ಇಂಜೆಕ್ಷನ್ ಐಪಿ 2 ಮಿಲಿ (ಫೂ›ಲಿಕ್ಸ್ 10 ಮಿಗ್ರಾಂ)- ಪ್ಯಾಕ್ಸನ್ ಫಾರ್ವಸ್ಯುಟಿಕಲ್ ಹರಿಯಾಣ (ಬ್ಯಾಚ್ ನಂ: ಕ23ಔ230)
  • ಪೈಪೆರಾಸಿಲಿನ್ ಮತ್ತು ಟಜೋಬ್ಯಾಕ್ಟಮ್ ಇಂಜೆಕ್ಷನ್ ಐಪಿ - ಮಾಡರ್ನ್ ಲ್ಯಾಬೋರೇಟರೀಸ್, ಇಂದೋರ್, ಮಧ್ಯಪ್ರದೇಶ (ಬ್ಯಾಚ್ ನಂ: ಕಖಐ4412)
  • ಕ್ಯಾಲ್ಸಿಯಂ ಗ್ಲುಕೋನೇಟ್ ಇಂಜೆಕ್ಷನ್ ಐಪಿ 10%- ಎಂಎಸ್ ರೀಗೈನ್ ಲ್ಯಾಬೋರೇಟರೀಸ್, ಹಿಸಾರ್, ಹರಿಯಾಣ (ಬ್ಯಾಚ್ ನಂ: ಐಇಎಐ413)
  • ಒಂಡಾನ್ಸೆಟ್ರಾನ್ ಇಂಜೆಕ್ಷನ್ ಐಪಿ 2 ಮಿಲಿ (ರಿಸೆಟ್) - ಎಂಎಸ್ ರೀಗೈನ್ ಲ್ಯಾಬೋರೇಟರೀಸ್, ಹಿಸಾರ್ ಹರಿಯಾಣ (ಬ್ಯಾಚ್ ನಂ: ಐಣಖಐ430)
  • ಅಟ್ರೋಪಿನ್ ಸಲ್ಪೇಟ್ ಇಂಜೆಕ್ಷನ್ ಐಪಿ 1 ಮಿಲಿ - ಮಾರ್ಟಿನ್ ಆಂಡ್ ಬ್ರೌನ್ ಬಯೋ-ಸೈನ್ಸ್ ಪ್ರೖೆ. ಲಿ. ಹಿಮಾಚಲ ಪ್ರದೇಶ (ಬ್ಯಾಚ್ ನಂ: Mಅ24ಆ118)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net