ಮುದ್ದು ಕೃಷ್ಣನಾದ ನಿಖಿಲ್​ ಕುಮಾರಸ್ವಾಮಿ ಪುತ್ರ; ಇಲ್ಲಿವೆ ನೋಡಿ ಫೋಟೋಸ್​

Untitled design - 2023-09-07T145340.395
Published on

ಬೆಂಗಳೂರು: ಸ್ಯಾಂಡಲ್​ವುಡ್​ ನಟ, ನಿಖಿಲ್​ ಕುಮಾರಸ್ವಾಮಿ ಅವರ ಪುತ್ರ ಅವ್ಯಾನ್​ ದೇವ್​ಗೆ ಕೃಷ್ಣ ಜನ್ಮಾಷ್ಟಮಿ ಹಬ್ಬದಂದು ಕೃಷ್ಣನ ಉಡುಗೆ ತೊಡಿಸಿ, ತೆಗೆಸಿದ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಗಮನ ಸೆಳೆದಿದೆ.

ಸೆಪ್ಟಂಬರ್ 06 ರಂದು ಎಲ್ಲೆಡೆ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಅದ್ದೂರಿಯಾಗಿ ಸಂಭ್ರಮಿಸಲಾಯಿತು. ಕೃಷ್ಣಾಷ್ಟಮಿ ಹಿನ್ನೆಲೆ ತಮ್ಮ ಪುತ್ರ ಅವ್ಯಾನ್​ ದೇವ್​ಗೆ ನಿಖಿಲ್​ ಕುಮಾರಸ್ವಾಮಿ ಮತ್ತು ರೇವತಿ ದಂಪತಿ, ವಿಶೇಷವಾಗಿ ಕೃಷ್ಣನ ಉಡುಗೆಯನ್ನು ತೊಡಿಸಿ, ಫೋಟೋಶೂಟ್​ ಮಾಡಿಸಿದ್ದಾರೆ. ಕೃಷ್ಣನಾಗಿ ಮಿಂಚಿದ ಅವ್ಯಾನ್​ ದೇವ್​ ಫೋಟೋಸ್​ ಇಲ್ಲಿವೆ ನೋಡಿ..

ತಮ್ಮ ಸಾಮಾಜಿಕ ಜಾಲತಾಣದ ಖಾತೆ ಇನ್​ಸ್ಟಾಗ್ರಾಮ್​ನಲ್ಲಿ ಮಗನ ಫೋಟೋಸ್ ಹಂಚಿಕೊಂಡ ನಟ ನಿಖಿಲ್​, ಕೃಷ್ಣಾಷ್ಟಮಿ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಬರೆದು, ಎಲ್ಲರಿಗೂ ಶುಭಕೋರಿದ್ದರು. ನಿಖಿಲ್​ ಕುಮಾರಸ್ವಾಮಿ ಪುತ್ರ ಕಷ್ಣನಾಗಿ ಮಿಂಚಿದ ಫೋಟೋಸ್​ ನೋಡಿದ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಲೈಕ್ ಮಾಡಿ, ಕಮೆಂಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net