

ಬೆಂಗಳೂರು: ಸೌನವಿ ಕ್ರಿಯೇಷನ್ಸ್ ಬ್ಯಾನರ್ನಲ್ಲಿ ಮೂಡಿಬರುತ್ತಿರುವ ನೈಟ್ಮೇರ್ (ನೀನು ಮಾಯೆಯೊಳಗೊ ಮಾಯೆ ನಿನ್ನೊಳಗೋ) ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದೆ. ನವೀನ್ ನಾಯಕ್ ಮತ್ತು ಕಿತ್ತಾನೆ ಗೋಪಿ ಜಂಟಿಯಾಗಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಕಳೆದ ಜನವರಿಯಿಂದ ಬೆಂಗಳೂರು ಸುತ್ತಮುತ್ತಲೂ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದ ತಂಡ, ಇದೀಗ ಶೂಟಿಂಗ್ ಮುಗಿಸಿಕೊಂಡಿದೆ. ಎಂ.ಟೆಕ್ ಪದವಿಧರೆ ಕೆ.ಆರ್. ಸೌಜನ್ಯ ಚಿತ್ರ ನಿರ್ಮಿಸಿದ್ದು, ನವೀನ್ ಚಿತ್ರಕ್ಕೆ ನಾಯಕನಾಗಿ ನಟಿಸಿದ್ದಾರೆ.
ಸಸ್ಪೆನ್ಸ್ ಕಾಮಿಡಿ ಥ್ರಿಲ್ಲರ್ ಆಧರಿತ ಕಥಾಹಂದರ ಹೊಂದಿರುವ ಈ ಸಿನಿಮಾಕ್ಕೆ ಹರಿಕೃಷ್ಣ ಛಾಯಾಗ್ರಹಣ, ಪವನ್ ಗೌಡ ಸಂಕಲನ, ಸಂಗೀತ ನಿರ್ದೇಶಕರಾಗಿ ಸುಬ್ರಮಣ್ಯ ಆಚಾರ್ಯ ಕೆಲಸ ಮಾಡಿದ್ದಾರೆ.
ಪಾತ್ರವರ್ಗದಲ್ಲಿ ನಟ ನವೀನ್, ಅಂಚಲ್ ರಾಜ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಅಪ್ಪಣ್ಣ ರಾಮದುರ್ಗ, ಕಿರಿಕ್ ಪಾರ್ಟಿ ರಘು ರಾಮನಕೊಪ್ಪ, ಯಶೋಧರ, ಚೇತನ್, ಮಹೇಶ್, ಅಕ್ಷಯ್ ಮತ್ತಿತರರಿದ್ದಾರೆ.