100 ಕೋಟಿಯಾಗಲಿ, 15 ಕೋಟಿ ಬಜೆಟ್​ನ ಸಿನಿಮಾನೇ ಆಗಲಿ ನೋಡುಗ ವರ್ಗ ಮಾತ್ರ ಒಂದೇ; ಸಿದ್ಧೀಕಿ​

nawazuddibn
Published on

ಚಿತ್ರಮಂದಿರಗಳ ತೆರೆಯುವಿಕೆಗೆ ಕರೊನಾ ಅಡ್ಡಿಯುಂಟು ಮಾಡಿದೆ. ಈಗಾಗಲೇ ಸಾಕಷ್ಟು ಸಿನಿಮಾಗಳು ಚಿತ್ರಮಂದಿರದ ಬದಲು ಓಟಿಟಿ ವೇದಿಕೆಯಲ್ಲಿ ಬಿಡುಗಡೆ ಆಗಿವೆ. ಅದೇ ರೀತಿ ನವಾಜುದ್ದೀನ್​ ಸಿದ್ಧೀಕಿ ಸಹ ರಾತ್​ ಅಕೇಲಿ ಹೈ ಸಿನಿಮಾ ಬಿಡುಗಡೆಯ ಖುಷಿಯಲ್ಲಿದ್ದಾರೆ. ನೆಟ್​ಫ್ಲಿಕ್ಸ್​ನಲ್ಲಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಈ ಚಿತ್ರಕ್ಕೆ ಒಳ್ಳೇ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಿರುವಾಗಲೇ ಓಟಿಟಿ ಅನುಕೂಲತೆಯ ಬಗ್ಗೆ ನವಾಜುದ್ದೀನ್​ ಮಾತನಾಡಿದ್ದಾರೆ.

‘ಇತ್ತೀಚಿನ ದಿನಗಳಲ್ಲಿ ಸಿನಿಮಾ ನೋಡುವ ದೃಷ್ಟಿ ಬೇರೆಯಾಗಿದೆ. ಅದರಲ್ಲೂ ಓಟಿಟಿ ಪ್ರಭಾವ ಹೆಚ್ಚಾದ ಮೇಲೆ ಬಜೆಟ್​ ವಿಚಾರ ಲೆಕ್ಕಕ್ಕೆ ಬಾರದು. 100 ಕೋಟಿ ಬಜೆಟ್​ನಲ್ಲಿ ಅದ್ಧೂರಿಯಾದ ಸಿನಿಮಾ ಮಾಡಲಿ, 15 ಕೋಟಿಯಲ್ಲಿ ಅಚ್ಚುಕಟ್ಟಾದ ಸಿನಿಮಾ ಮಾಡಲಿ ಎರಡು ಸಿನಿಮಾಕ್ಕೆ ನೋಡುವ ವರ್ಗ ಒಂದೇ ಆಗಿರುತ್ತದೆ’

‘ಯಾವ ಸಿನಿಮಾ ಚೆನ್ನಾಗಿದೆ ಮತ್ತು ಯಾವ ವರ್ಗ ಆ ಸಿನಿಮಾ ನೋಡಲು ಬಯಸುತ್ತದೆ ಎಂಬುದಷ್ಟೇ ಮುಖ್ಯ. ಈ ಓಟಿಟಿಯ ಇನ್ನೊಂದು ಬಹುಮುಖ್ಯ ಅಂಶ ಏನೆಂದರೆ, ಓಟಿಟಿಯಲ್ಲಿ ಬಿಡುಗಡೆಯಾದ ಸಿನಿಮಾವನ್ನು ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ನೋಡಬಹುದು’ ಎಂದಿದ್ದಾರೆ.

ರಾತ್​ ಅಕೇಲಿ ಹೈ ಸಿನಿಮಾವನ್ನು ಹನಿ ತ್ರೆಹನ್​ ನಿರ್ದೇಶನ ಮಾಡಿದ್ದು, ರಾಧಿಕಾ ಆಪ್ಟೆ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಕಾಪ್​ ಅವತಾರದಲ್ಲಿ ನವಾಜುದ್ದೀನ್​ ಸಿದ್ಧೀಕಿ ಕಾಣಿಸಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net