

ಮುಂಬೈ: ವಾರದ ವಹಿವಾಟಿನ ಮೊದಲ ದಿನವಾದ ಸೋಮವಾರದಂದು ಷೇರುಪೇಟೆ ಚೇತರಿಸಿಕೊಂಡಿತು. ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್ಇ) ಸೆನ್ಸೆಕ್ಸ್ 256 ಅಂಕಗಳ ಏರಿಕೆ ಕಂಡು (0.31%), 82,445ಕ್ಕೆ ತಲುಪಿತು.
ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್ಎಸ್ಇ) ನಿಫ್ಟಿ 100 ಅಂಕಗಳ ಜಿಗಿತ ದಾಖಲಿಸಿ (0.40%) 25,103ಕ್ಕೆ ದಿನದ ವಹಿವಾಟು ಕೊನೆಗೊಳಿಸಿತು. ಬಿಎಸ್ಇ ಮಿಡ್ ಕ್ಯಾಪ್ 473 ಅಂಕಗಳಷ್ಟು ಏರಿಕೆಯಾಗಿ (1.03%) 46,570ಕ್ಕೆ ಸ್ಥಿರವಾಯಿತು. ಬಿಎಸ್ಇ ಸ್ಮಾಲ್ ಕ್ಯಾಪ್ 634 ಅಂಕಗಳ ಜಿಗಿತ ದಾಖಲಿಸಿ (1.19%) 54,074ಕ್ಕೆ ತಲುಪಿತು.
ಸೆನ್ಸೆಕ್ಸ್ನ 30 ಷೇರುಗಳ ಪೈಕಿ 21 ಲಾಭ ಕಂಡರೆ, 9 ನಷ್ಟ ಅನುಭವಿಸಿದವು. ಬ್ಯಾಂಕಿಂಗ್, ಫೈನಾನ್ಸ್, ಎನರ್ಜಿ ಮತ್ತು ಐಟಿ ಷೇರುಗಳು ಹೆಚ್ಚಿನ ಲಾಭ ದಾಖಲಿಸಿದವು. ಜಿಯೋ ಫೈನಾನ್ಸ್ ಶೇ.3.89, ಕೊಟಕ್ ಬ್ಯಾಂಕ್ ಶೇ.3.25, ಬಜಾಜ್ ಫೈನಾನ್ಸ್ನ ಷೇರು 2.69%ರಷ್ಟು ಏರಿಕೆ ಕಂಡವು.