ಪ್ರಭಾಸ್​ ಮುಂಬರುವ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಈ ನಟಿ! ಯಾರೀ ಬೆಡಗಿ?

Untitled design - 2024-02-20T090716.614
Published on

ಆಂಧ್ರಪ್ರದೇಶ: ಪ್ರಸ್ತುತ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿ, ತನ್ನ ಮನಮೋಹಕ ಪಾತ್ರಗಳಿಗೆ ಹೆಸರುವಾಸಿಯಾಗಿರುವ ನಟಿ ನಿಧಿ ಅಗರ್ವಾಲ್ ಇದೀಗ ಪ್ಯಾನ್ ಇಂಡಿಯಾ ಸ್ಟಾರ್​ ಡಾರ್ಲಿಂಗ್​ ಪ್ರಭಾಸ್ ಅಭಿನಯದ ಮುಂಬರುವ ದಿ ರಾಜಾ ಸಾಬ್ ಚಿತ್ರದಲ್ಲಿ ನಟಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ. ಸದ್ಯ ಈ ವಿಷಯ ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ಪವನ್ ಕಲ್ಯಾಣ್ ಅಭಿನಯದ 'ಹರಿ ಹರ ವೀರ ಮಲ್ಲು' ಚಿತ್ರದಲ್ಲಿನ ಪ್ರಮುಖ ಪಾತ್ರದಲ್ಲಿ ನಿಧಿ ಕಾಣಿಸಿಕೊಂಡಿದ್ದು, ಸಂಪತ್ ನಂದಿ ನಿರ್ದೇಶನದ ಸಾಯಿ ಧರಂ ತೇಜ್ ಅವರ ಗಾಂಜಾ ಶಂಕರ್‌ನಲ್ಲಿ ಕೂಡ ನಟಿಸುತ್ತಿದ್ದಾರೆ ಎಂಬ ವದಂತಿಗಳು ಸದ್ಯ ಟಾಲಿವುಡ್​ ಅಂಗಳದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಗಾಂಜಾ ಶಂಕರ್‌ ಸಿನಿಮಾದಲ್ಲಿ ಅವರ ಪಾತ್ರವೇನು ಎಂಬುದರ ಬಗ್ಗೆ ಇನ್ನೂ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.

ದಿ ರಾಜಾ ಸಾಬ್ ಚಿತ್ರದಲ್ಲಿ ಪ್ರಭಾಸ್​, ನಿಧಿ ಅಗರ್​ವಾಲ್, ಮಾಳವೀಕಾ ಮೋಹನನ್, ರಿದ್ಧಿ ಕುಮಾರ್, ಕೌಶಿಕ್ ಮೆಹತಾ, ಸಂಜಯ್ ದತ್ ಮುಂತಾದವರ ತಾರಾಗಣವಿದೆ. ಮಾರುತಿ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ವಿಶ್ವಪ್ರಸಾದ್​ ನಿರ್ಮಿಸುತ್ತಿದ್ದು, ಎಸ್​. ಥಮನ್​ ಸಂಗೀತ ಸಂಯೋಜಿಸಲಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net