1 ದಿನ, 2 ಸಿನಿಮಾ, ಎರಡು ರಾಜ್ಯ! ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ನಿಧಿ ಅಗರ್ವಾಲ್ | Pan India ​

nidhi
Published on

ತೆಲಂಗಾಣ: ಸದ್ಯ ಭರ್ಜರಿ ಗೆಲುವಿನ ನಿರೀಕ್ಷೆಯಲ್ಲಿರುವ ಟಾಲಿವುಡ್​ ನಾಯಕಿ ನಿಧಿ ಅಗರ್ವಾಲ್ (Nidhi Agarwal), ಇದೀಗ ಬ್ಯಾಕ್​ ಟು ಬ್ಯಾಕ್​ ಪ್ಯಾನ್ ಇಂಡಿಯಾ (Pan India) ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಸದ್ಯ ತೆಲುಗಿನಲ್ಲಿ ಎರಡು ಬಹುನಿರೀಕ್ಷಿತ ಚಿತ್ರಗಳಾದ 'ಹರಿಹರವೀರಮಲ್ಲು' ಮತ್ತು 'ದಿ ರಾಜಾಸಾಬ್‌' ಚಿತ್ರಗಳಲ್ಲಿ ನಿಧಿ ಕಾಣಿಸಿಕೊಂಡಿದ್ದು, ಪವನ್​ ಕಲ್ಯಾಣ್​ ಮತ್ತು ರೆಬೆಲ್​ ಸ್ಟಾರ್​ ಪ್ರಭಾಸ್ ಜತೆ ತೆರೆ ಹಂಚಿಕೊಂಡಿದ್ದಾರೆ. ಎರಡು ಚಿತ್ರಗಳಲ್ಲಿ ನಟಿಸಿರುವ ಖುಷಿಯನ್ನು ಇದೀಗ ಮುಕ್ತವಾಗಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿರುವ ನಿಧಿ, ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ.

ಟ್ವೀಟ್‌ನಲ್ಲಿ ನಟಿ ನಿಧಿ ಬರೆದುಕೊಂಡಿದ್ದಿಷ್ಟು

"ಕಲಾವಿದರಿಗೆ ಸದಾ ಆಶ್ಚರ್ಯಗಳೇ ತುಂಬಿರುತ್ತವೆ. ಒಂದಷ್ಟು ಉತ್ತಮ ಅವಕಾಶಗಳೂ ಇಲ್ಲಿವೆ. ನಾನೀಗ ಎರಡು ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ನಟಿಸಿದ್ದೇನೆ. ಅದು ನನಗೆ ಖುಷಿ ಕೊಟ್ಟಿದೆ. ಒಂದು ಸಿನಿಮಾ ಆಂಧ್ರದಲ್ಲಿ ಶೂಟಿಂಗ್ ಮಾಡುತ್ತಿದ್ದರೆ, ಇನ್ನೊಂದು ತೆಲಂಗಾಣದಲ್ಲಿ ಮಾಡಿದ್ದೇನೆ. ಒಂದೇ ದಿನದಲ್ಲಿ ಎರಡು ಸಿನಿಮಾ ಶೂಟಿಂಗ್​, ಎರಡು ರಾಜ್ಯಗಳು. ನನ್ನ ಕೆಲಸವನ್ನು ಶೀಘ್ರವೇ ನಿಮ್ಮ ಮುಂದೆ ತರಲು ಎದುರು ನೋಡುತ್ತಿದ್ದೇನೆ" ಎಂದು ಬರೆದು, ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.

ಈ ನಡುವೆ ರೆಬೆಲ್ ಸ್ಟಾರ್ ಅಭಿಮಾನಿಗಳು ಮಾರುತಿ ನಿರ್ದೇಶನದಲ್ಲಿ ಮೂಡಿಬಂದಿರುವ 'ರಾಜಾಸಾಬ್' ಚಿತ್ರಕ್ಕಾಗಿ ತೀವ್ರ ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ಈ ಸಿನಿಮಾದ ಶೂಟಿಂಗ್ ಶರವೇಗದಲ್ಲಿ ಸಾಗಿದ್ದು, ಇದೇ ಅಕ್ಟೋಬರ್​ 23ರಂದು, ಪ್ರಭಾಸ್ ಜನ್ಮದಿನಕ್ಕೆ ಹೊಸ ಅಪ್ಡೇಟ್ ಕೊಡಲು ನಿರ್ಮಾಪಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಪ್ರಭಾಸ್​ ಮತ್ತು ನಿಧಿ ಅಗರ್ವಾಲ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾ 2025ರಲ್ಲಿ ತೆರೆ ಕಾಣಲಿದೆ ಎಂದು ಚಿತ್ರತಂಡ ತಿಳಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net