

ಆಂಧ್ರಪ್ರದೇಶ: ತೆಲುಗು ಚಿತ್ರರಂಗದ ಗ್ಲಾಮರಸ್ ನಟಿ ನಿಧಿ ಅಗರ್ವಾಲ್ ಇಂದು ಸಿನಿ ರಂಗದ ಹಾಟೆಸ್ಟ್ ನಟಿಯರಲ್ಲಿ ಒಬ್ಬರಾಗಿ ಮಿಂಚುತ್ತಿದ್ದಾರೆ. ಸದ್ಯ ಸಾಲು ಸಾಲು ಚಿತ್ರಗಳಲ್ಲಿ ಆಫರ್ ಗಿಟ್ಟಿಸಿಕೊಂಡು, ಅಭಿನಯಿಸಿದ್ದೇ ಆದರೂ ಸಿನಿಪ್ರೇಕ್ಷಕರ ಎದುರು ನಟಿ ಅಭಿನಯದ ಚಿತ್ರಗಳು ಕಮಾಲ್ ಮಾಡುತ್ತಿಲ್ಲ ಎಂಬುದು ಸದ್ಯ ಬೇಸರದ ಸಂಗತಿ. ನಿಧಿ ಅವರಿಂದ ಅದೃಷ್ಟ ದೂರ ಉಳಿದಿದ್ದು, ಆಕೆಯ ಹಾಟ್ ಫಿಗರ್ ಮತ್ತು ನಟನಾ ಕೌಶಲ್ಯದ ಹೊರತಾಗಿಯೂ, ಅಭಿನಯದ ಸಿನಿಮಾಗಳು ಚಿತ್ರಮಂದಿಗರಳಲ್ಲಿ ಅಬ್ಬರಿಸದೆ, ಮುಗ್ಗರಿಸುತ್ತಿರುವುದು ಸದ್ಯ ಅವರ ಸಿನಿ ಕರಿಯರ್ಗೆ ದೊಡ್ಡ ಪೆಟ್ಟು ನೀಡುವಂತಿದೆ.
ಇದನ್ನೂ ಓದಿ: ಬಿಡಿಎ ಕಾರ್ಯಾಚರಣೆ: 12 ಕೋಟಿ ರೂ. ಸ್ವತ್ತು ವಶ
ಎರಡು ತಿಂಗಳ ಹಿಂದೆ ನಿಧಿ ಅಭಿನಯಿಸಿದ್ದ 'ಐಸ್ಮಾರ್ಟ್ ಶಂಕರ್' ಹೊರತುಪಡಿಸಿದರೆ, ಹಿಂದಿ ಅಥವಾ ದಕ್ಷಿಣ ಭಾರತದ ಸಿನಿಮಾಗಳು ದೊಡ್ಡ ಮಟ್ಟದ ಹಿಟ್ ಕಂಡಿಲ್ಲ. 'ಸವ್ಯಸಾಚಿ', 'ಮಿಸ್ಟರ್ ಮಜ್ನು', 'ಹೀರೋ', 'ಭೂಮಿ' ಮತ್ತು ಕೆಲವು ನಿರೀಕ್ಷಿತ ದೊಡ್ಡ ಚಿತ್ರಗಳೇ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸದೆ, ಫ್ಲಾಪ್ ಪಟ್ಟಿಗೆ ಸೇರಿವೆ. ನಟಿಯ ಎಲ್ಲಾ ಭರವಸೆಗಳು ಈ ಚಿತ್ರಗಳ ಸೋಲಿನಿಂದ ಸದ್ಯ ಕುಸಿದಿದೆ. ಸರಣಿ ಸೋಲುಗಳು ಕಂಡಿದ್ದರೂ ಸಹ ಎರಡು ಬಹುನಿರೀಕ್ಷಿತ ಚಿತ್ರಗಳು ತನ್ನ ಕೈಹಿಡಿಯಬಹುದು ಎಂಬ ವಿಶ್ವಾಸದಲ್ಲಿ ನಟಿ ಕೆಲಸ ಮಾಡುತ್ತಿದ್ದಾರೆ. ಆ ಎರಡು ಚಿತ್ರಗಳ ಹೆಸರು ಹೀಗಿವೆ.
ಪವನ್ ಕಲ್ಯಾಣ್ ನಟನೆಯ 'ಹರಿ ಹರ ವೀರ ಮಲ್ಲು' ಮತ್ತು ಟಾಲಿವುಡ್ ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ 'ದಿ ರಾಜಾ ಸಾಬ್' ಚಿತ್ರಗಳಲ್ಲಿ ನಿಧಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಇದರ ಜತೆಗೆ ನಟ ತೇಜ ಸಜ್ಜಾ ಅಭಿನಯದ ಸೂಪರ್ ಹೀರೋ ಚಿತ್ರವಾದ 'ಮಿರಾಯ್'ನಲ್ಲಿ ವಿಶೇಷ ಹಾಡಿಗೆ ನಿಧಿ ಅಗರ್ವಾಲ್ ಹೆಜ್ಜೆ ಹಾಕಿದ್ದಾರೆ. ಸದ್ಯದ ವರದಿಗಳ ಪ್ರಕಾರ, ಮುಂದಿನ ವರ್ಷ ಈ ಎರಡು ಚಿತ್ರಗಳು ಮಾರ್ಚ್ ಅಥವಾ ಏಪ್ರಿಲ್ನಲ್ಲಿ ತೆರೆಕಾಣುವ ನಿರೀಕ್ಷೆಯಿದ್ದು, ಈ ಚಿತ್ರಗಳ ನಟಿಯ ಲಕ್ ಬದಲಾಯಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).